AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಟೈಲರ್ ಸ್ವಿಫ್ಟ್​​ ಸಂಗೀತ ಕಛೇರಿಯಲ್ಲಿ ಪ್ರೇಮ ನಿವೇದನೆ; ನೆಟ್ಟಿಗರ ಹರ್ಷ

Pittsburgh : ಪಿಟ್ಸ್‌ಬರ್ಗ್‌ನಲ್ಲಿ ಅಮೆರಿಕದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಸಂಗೀತ ಕಛೇರಿ ಕೇಳಲು ಲಕ್ಷಾಂತರ ಜನ ಸೇರಿದ್ದರು. ಈ ಸಂದರ್ಭದಲ್ಲಿ ಯುವಕನೊಬ್ಬ ತನ್ನ ಹುಡುಗಿಗೆ ಪ್ರೇಮ ನಿವೇದನೆ ಮಾಡಿಕೊಂಡ. ಜನಸ್ಪಂದನೆ ಹೇಗಿತ್ತು ನೋಡಿ.

Viral Video: ಟೈಲರ್ ಸ್ವಿಫ್ಟ್​​ ಸಂಗೀತ ಕಛೇರಿಯಲ್ಲಿ ಪ್ರೇಮ ನಿವೇದನೆ; ನೆಟ್ಟಿಗರ ಹರ್ಷ
ಪಿಟ್ಸಬರ್ಗ್​ನಲ್ಲಿ ನಡೆದ ಟೇಲರ್ ಸ್ವಿಫ್ಟ್​ ಸಂಗೀತ ಕಛೇರಿಯಲ್ಲಿ ತನ್ನ ಹುಡುಗಿಗೆ ಪ್ರೇಮನಿವೇದನೆ ಮಾಡಿಕೊಂಡ ಹುಡುಗ.
Follow us
ಶ್ರೀದೇವಿ ಕಳಸದ
|

Updated on:Jul 19, 2023 | 1:29 PM

Love Proposal : ಅಮೆರಿಕದ ಪ್ರಖ್ಯಾತ ಗಾಯಕಿ ಟೇಲರ್​ ಸ್ವಿಫ್ಟ್ (Taylor Swift) ಅವರ ಎರಾಸ್​ ಟೂರ್​ (Eras Tour) ಮಾರ್ಚ್​ನಿಂದಲೇ ಶುರುವಾಗಿದೆ. ಇವರ ಕಛೇರಿಗಾಗಿ ಟಿಕೆಟ್​ಗಳನ್ನು ಕೊಳ್ಳಲು ಅಪಾರ ಪ್ರಮಾಣದ ಅಭಿಮಾನಿಗಳು ಬಹಳ ಮುಂಚಿತವಾಗಿಯೇ ಮುಗಿಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ಮೊದಲ ಕಛೇರಿಯಂತೂ ದೊಡ್ಡಮಟ್ಟದಲ್ಲಿ ಜನಮನ್ನಣೆ ಗಳಿಸಿತು. ಕೆಲ ವಾರಗಳ ಹಿಂದೆ ಪಿಟ್ಸ್​ಬರ್ಗ್​ನಲ್ಲಿ ಇವರು ಕಛೇರಿ ನಡೆಸಿ ಕೊಟ್ಟರು. ಆಗ ಸ್ವಿಫ್ಟ್​, ಲವ್​ ಸ್ಟೋರಿ ಎಂಬ ಜನಪ್ರಿಯ ಹಾಡನ್ನು ಪ್ರಸ್ತುತಪಡಿಸುತ್ತಿರುವ ಸಂದರ್ಭದಲ್ಲಿ ಯುವಕನೊಬ್ಬ ತನ್ನ ಗೆಳತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ. ಅಲ್ಲಿದ್ದ ಪ್ರೇಕ್ಷಕರೆಲ್ಲರೂ ಅಚ್ಚರಿಯಿಂದ ಈ ಸಂತೋಷದ ಕ್ಷಣವನ್ನು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Lexis Rose Hershey (@lexisroseblog)

ಇನ್‌ಸ್ಟಾಗ್ರಾಮ್​ನ ಲೆಕ್ಸಿಸ್ ರೋಸ್ ಹರ್ಷೀ ಎನ್ನುವವರು ಜೂ. 25ರಂದು ಈ ವಿಡಿಯೋ ಹಂಚಿಕೊಂಡಿದ್ದಾರೆ.  ಈತನಕ ಸುಮಾರು 14 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 1.3 ಮಿಲಿಯನ್​ ಜನರು ಇದನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿದ್ದಾರೆ. ಇಂಥ ವಿಡಿಯೋಗಳನ್ನು ನೋಡಿದಾಗ ನಾನು ಯಾವಾಗಲೂ ಅಳುತ್ತೇನೆ. ಈ ಪ್ರೇಮ ನಿವೇದನೆಗೆ ಸಾಕ್ಷಿಯಾಗುವ ಹುಡುಗಿಯನ್ನು ಮೆಲ್ಲ ಮುಟ್ಟಿ ತನ್ನೆಡೆ ತಿರುಗಿಸಿಕೊಳ್ಳುವ ಹುಡುಗನಲ್ಲಿ ನನ್ನ ಹೃದಯವಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ

ಈ ವಿಡಿಯೋದಲ್ಲಿ ತುಂಬಾ ಅತ್ಯುತ್ತಮ ಮತ್ತು ಆಪ್ತವಾದದ್ದೆಂದರೆ, ಈ ಜೋಡಿಯ ಸುತ್ತಲೂ ಇರುವ ಜನಸಮೂಹ ಸ್ನೇಹಿತರಂತೆ ಇವರ ಖುಷಿಯಲ್ಲಿ ಪಾಲ್ಗೊಂಡಿರುವುದು ಎಂದಿದ್ದಾರೆ ಮತ್ತೊಬ್ಬರು. ಸಾವಿರಾರು ಅಪರಿತಿಚಿತರು ಇವರೆಡೆಗೆ ತಿರುಗಿ ಸಂಭ್ರಮಿಸಿದ ರೀತಿ ನನ್ನನ್ನು ಬಹುವಾಗಿ ಹಿಡಿದಿಟ್ಟಿತು ಎಂದಿದ್ಧಾರೆ ಮಗದೊಬ್ಬರು. ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳಿಗೆಲ್ಲ ಟೇಲರ್​ ತಮ್ಮ ಈ ಪ್ರವಾಸದ ಸಂದರ್ಭದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸುವುದು ಒಳ್ಳೆಯದು ಎಂಬ ಅನಿಸಿಕೆ ನನ್ನದು ಎಂದಿದ್ದಾರೆ ಇನ್ನೊಬ್ಬರು. ಅನೇಕರು ಈ ಜೋಡಿಗೆ ಅಭಿನಂದಿಸಿ, ನಿಮ್ಮ ಬದುಕು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:26 pm, Wed, 19 July 23

ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ