Viral News: ಮಗಳು ರಾಖಿ ಕಟ್ಟಲು ಸಹೋದರ ಬೇಕು ಎಂದು ಕೇಳಿದ್ದಕ್ಕೆ ದಂಪತಿಗಳು ಮಾಡಿದ್ದೇನು ಗೊತ್ತಾ?
ಮಗುವೊಂದು ತನಗೆ ರಾಖಿ ಕಟ್ಟಲು ತಮ್ಮ ತಂಗಿ ಬೇಕು ಎಂದು ಹಠ ಮಾಡಲು ಶುರು ಮಾಡಿದೆ. ಮಗುವಿನ ಆಸೆಯನ್ನು ನೆರವೇರಿಸಲು ದಂಪತಿಗಳು ಸಖತ್ ಆಗಿ ಪ್ಲಾನ್ ಮಾಡಿದ್ದಾರೆ. ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ.
ಭಾರತದ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ರಕ್ಷಾ ಬಂಧನದ ಇನ್ನೇನು ಸಮೀಪಿಸುತ್ತಿದೆ. ಹಬ್ಬ ಬಂತೆಂದರೆ ಸಾಕು ಪ್ರೀತಿಯ ಸೋದರರಿಗೆ ರಾಖಿ ಕಟ್ಟಿ ಆರ್ಶೀವಾದ ಪಡೆದುಕೊಳ್ಳುವ ಸಂಪ್ರದಾಯ ಭಾರತೀಯರಲ್ಲಿ ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ. ಆದರೆ ಇಲ್ಲೊಂದು ಮನೆಯಲ್ಲಿ ಮಗುವೊಂದು ತನಗೆ ರಾಖಿ ಕಟ್ಟಲು ತಮ್ಮ ತಂಗಿ ಬೇಕು ಎಂದು ಹಠ ಮಾಡಲು ಶುರು ಮಾಡಿದೆ. ಮಗುವಿನ ಆಸೆಯನ್ನು ನೆರವೇರಿಸಲು ದಂಪತಿಗಳು ಮಾಡಿದ್ದೇನು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ.
ಗುರುವಾರ(ಆ. 24) ಮುಂಜಾನೆ 4.34ಕ್ಕೆ ವಿಕಲಚೇತನ ಮಹಿಳೆಯರೊಬ್ಬರ ಮಗು ನಾಪತ್ತೆಯಾಗಿರುವ ಕುರಿತು ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಛಟ್ಟಾ ರೈಲ್ ಚೌಕ್‌ನ ಫುಟ್‌ಪಾತ್‌ನಲ್ಲಿ ನಾನು ನನ್ನ ಮಗು ಮಲಗಿದ್ದೆವು, ಆದರೆ 3ಗಂಟರೆಯ ಹೊತ್ತಿಗೆ ನನಗೆ ಎಚ್ಚರವಾಗಿದೆ. ಆಗ ಮಗು ನನ್ನ ಬಳಿ ಇರಲಿಲ್ಲ. ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಬರೆದುಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಇಬ್ಬರು ಬೈಕ್‌ನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಅವರು ಸುಮಾರು 400 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಟ್ಯಾಗೋರ್ ಗಾರ್ಡನ್‌ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ (41) ಮತ್ತು ಅನಿತಾ ಗುಪ್ತಾ (36) ಆರೋಪಿಗಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸರ್ಕಾರಿ ಬಸ್ ಮೇಲ್ಛಾವಣಿ ಸೋರಿಕೆ; ಕೊಡೆ ಹಿಡಿದು ಡ್ರೈವಿಂಗ್ ಮಾಡುತ್ತಿರುವ ಚಾಲಕ
ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಂತೆ ಇಂಟರೆಸ್ಟಿಂಗ್ ವಿಚಾರವೊಂದು ಪೊಲೀಸರಿಗೆ ತಿಳಿದುಬಂದಿದೆ. “ಕಳೆದ ವರ್ಷ ಆಗಸ್ಟ್ 17 ರಂದು ತಮ್ಮ ಹದಿಹರೆಯದ ಮಗ ಟೆರೇಸ್‌ನಿಂದ ಬಿದ್ದು ಸಾವನ್ನಪ್ಪಿದ್ದರಿಂದ, ಈ ವರ್ಷದ ರಾಖಿ ಹಬ್ಬದಂದು ಮಗಳು ಸಹೋದರ ಬೇಕೆಂದು ಹಠ ಮಾಡುತ್ತಿದ್ದಳು. ಹಾಗಾಗಿ ಬೀದಿ ಬದಿಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಲು ನಿರ್ಧರಿಸಿದೆವು ಎಂದು ದಂಪತಿಗಳಾದ ಸಂಜಯ್ ಮತ್ತು ಅನಿತಾ ಹೇಳಿಕೊಂಡಿದ್ದಾರೆ. ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್ ಈ ಹಿಂದೆ ಮೂರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನಿತಾ ಮೆಹಂದಿ ಕಲಾವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪಹರಣಕ್ಕೆ ಒಳಗಾದ ಮಗುವಿನ ತಾಯಿ ಅಂಗವಿಕಲರಾಗಿದ್ದು, ಮಗುವಿನ ತಂದೆ ಗುಜುರಿ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದು ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರಿಂದ ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:51 pm, Sat, 26 August 23