ಸರ್ಕಾರಿ ಬಸ್ ಮೇಲ್ಛಾವಣಿ ಸೋರಿಕೆ; ಕೊಡೆ ಹಿಡಿದು ಡ್ರೈವಿಂಗ್ ಮಾಡುತ್ತಿರುವ ಚಾಲಕ
ಸರ್ಕಾರಿ ಬಸ್ ಒಂದರ ಮೇಲ್ಛಾವಣಿಯಿಂದ ಮಳೆ ನೀರು ಸುರಿಯುತ್ತಿರುವ ವೇಳೆ ಬಸ್ ಡೈವರ್ ಒಂದು ಕೈಯಲ್ಲಿ ಕೊಡೆ ಹಿಡಿದು ಡ್ರೈವಿಂಗ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.
ಮಹಾರಾಷ್ಟ್ರ: ಗಡ್ಚಿರೋಲಿ ಜಿಲ್ಲೆಯ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್‌ಆರ್‌ಟಿಸಿ) ಬಸ್ ಚಾಲಕರೊಬ್ಬರು ಭಾರೀ ಮಳೆಗೆ ವಾಹನದ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದಂತೆ ಒಂದು ಕೈಯಲ್ಲಿ ಕೊಡೆ ಹಿಡಿದುಕೊಂಡು ಡ್ರೈವಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಇದೀಗಾ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸರ್ಕಾರದ ಬೇಜಾವಬ್ದಾರಿತನ ಬಗ್ಗೆ ನೆಟ್ಟಿಗರು ಕಾಮೆಂಟ್ ಮೂಲಕ ಬಗೆ ಬಗೆಯಾಗಿ ಬರೆದುಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
यह वीडियो गढ़चिरौली के अहेरी का है ! बारिश होने पर बस की छत टपकने से यह बात सामने आई है कि ड्राइवर बस में छाता लेकर बस चला रहा था! यह हालत होगई है महाराष्ट्र के @msrtcofficial बस सेवा की, यात्रियों की सुरक्षा अब उपरवाले के भरोसे है! वीडियो: @mumbaitak #Maharashtra #Gadchiroli pic.twitter.com/z5evosrfk6
— Mumbai Congress (@INCMumbai) August 25, 2023
ಇದನ್ನೂ ಓದಿ: ಮೆಟ್ರೋ; ಯಾರಿಗೆ ಕರೀತೀಯೋ ಕರಿ! ಲೇಡೀಸ್ ಕೋಚ್ನಲ್ಲಿ ನುಗ್ಗಿದ ಯುವಕನ ಆಟಾಟೋಪ
ವೀಡಿಯೊದಲ್ಲಿ, ಚಾಲಕನು ತನ್ನ ಎಡಗೈಯಲ್ಲಿ ಹಳದಿ ಛತ್ರಿಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಬಸ್ ಚಾಲನೆ ಮಾಡುತ್ತಿರುವುದು ಕಾಣಬಹುದು. ಜೊತೆಗೆ ಬಸ್ ಟಾಪ್ನಿಂದ ಮಳೆ ನೀರು ಬೀಳುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಬಸ್ಸಿನ ನಂಬರ್ ಪ್ಲೇಟ್ ಮತ್ತು ವಿಡಿಯೋದಲ್ಲಿ ಕಂಡುಬರುವ ಚಾಲಕನ ಮುಖ ಸ್ಪಷ್ಟವಾಗಿ ಗೋಚರಿಸದ ಕಾರಣ ಚಾಲಕನನ್ನು ಗುರುತಿಸುವುದು ಕಷ್ಟಕರವಾಗಿದೆ. ವೈರಲ್ ಆಗಿರುವ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವ್ಯವಸ್ಥಾಪಕ ಬಸ್ ಡಿಪೋ ಆಹೇರಿ ಚಂದ್ರಭೂಷಣ ಘಗರಗುಂಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:02 pm, Sat, 26 August 23