ಶಕ್ತಿ ಯೋಜನೆಯಡಿ ಅಂತಾರಾಜ್ಯ ಬಸ್‌ನಲ್ಲಿ ಉಚಿತ ಪ್ರಯಾಣ, ಮುಂದುವರಿದ ಗೊಂದಲ
Shakti Scheme Confusion: ಒಂದು ಚಿತ್ರದಲ್ಲಿ ಜುಲೈ 21 ರಂದು ನೀಡಲಾದ ಅಂತಾರಾಜ್ಯ ಬಸ್ ಟಿಕೆಟ್ ಶಕ್ತಿ ಯೋಜನೆಯಡಿಯಲ್ಲಿ ‘ಶೂನ್ಯ' ಟಿಕೆಟ್ ಆಗಿತ್ತು. ಇನ್ನೊಂದು ಚಿತ್ರದಲ್ಲಿ, ಅದೇ ಅಂತಾರಾಜ್ಯ ಬಸ್ ಅದೇ ಮಾರ್ಗದಲ್ಲಿನ ಪ್ರಯಾಣಕ್ಕೆ 74 ರೂ. ಟಿಕೆಟ್ ನೀಡಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ (NWKRTC) ಸ್ಪಷ್ಟೀಕರಣವನ್ನು ಕೇಳಿದ್ದಾರೆ.
ಬೆಳಗಾವಿ, ಆಗಸ್ಟ್ 12: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ (Shakti Scheme) ಹಲವೆಡೆ ಇನ್ನೂ ಗೊಂದಲಮಯವಾಗಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯಿಂದ ನಿಪ್ಪಾಣಿಗೆ ಅಂತಾರಾಜ್ಯ ಬಸ್‌ನಲ್ಲಿ (Interstate Buses) ಪ್ರಯಾಣಿಸಿದ ಮಹಿಳೆಗೆ ಈ ಹಿಂದೆ ಟಿಕೆಟ್ ಶುಲ್ಕ ವಿಧಿಸಿರಲಿಲ್ಲ. ಆದರೆ ಈಗ ಟಿಕೆಟ್ಗೆ ಹಣ ಪಡೆಯಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ಅಂತಾರಾಜ್ಯ ಬಸ್‌ನಲ್ಲಿ ರಾಜ್ಯದೊಳಗಡೆಯ ಸಂಚಾರಕ್ಕೂ ‘ಶಕ್ತಿ ಯೋಜನೆ’ ಅಡಿ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗಳನ್ನು ಹಲವು ಮಂದಿ ಕೇಳಿದ್ದಾರೆ.
ಬೆಳಗಾವಿಯಿಂದ ನಿಪ್ಪಾಣಿಗೆ ಪ್ರಯಾಣಿಸಿದ ಮಹಿಳೆಯ ಬಸ್ ಟಿಕೆಟ್ ಮತ್ತು ಹಿಂದಿರುಗುವ ಟಿಕೆಟ್ನ ಎರಡು ಪ್ರತ್ಯೇಕ ಚಿತ್ರಗಳನ್ನು ‘ಆಲ್ ಅಬೌಟ್ ಬೆಳಗಾಂ, ಬೆಳಗಾವಿ ನ್ಯೂಸ್’ ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.
ಒಂದು ಚಿತ್ರದಲ್ಲಿ ಜುಲೈ 21 ರಂದು ನೀಡಲಾದ ಅಂತಾರಾಜ್ಯ ಬಸ್ ಟಿಕೆಟ್ ಶಕ್ತಿ ಯೋಜನೆಯಡಿಯಲ್ಲಿ ‘ಶೂನ್ಯ’ ಟಿಕೆಟ್ ಆಗಿತ್ತು. ಇನ್ನೊಂದು ಚಿತ್ರದಲ್ಲಿ, ಅದೇ ಅಂತಾರಾಜ್ಯ ಬಸ್ ಅದೇ ಮಾರ್ಗದಲ್ಲಿನ ಪ್ರಯಾಣಕ್ಕೆ 74 ರೂ. ಟಿಕೆಟ್ ನೀಡಲಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ (NWKRTC) ಸ್ಪಷ್ಟೀಕರಣವನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸಾರಿಗೆ ನಿಗಮವು ಈ ಮಾಹಿತಿಯನ್ನು ಸಂಬಂಧಪಟ್ಟ ವಿಭಾಗಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದೆ.
A Lady shared this.She Took the Belagavi Kolhapur bus up to Nippani. Earlier she was not charged under Shakti but now she was charged see the return tickets as well. @nw_krtc any clarification She had a valid Aadhar card which she had shown the last time pic.twitter.com/cf7KjXJpdM
— All About Belgaum | Belagavi News (@allaboutbelgaum) August 11, 2023
ಅಂತಾರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲ. ಬಸ್ ಕಂಡಕ್ಟರ್‌ಗಳು ಮಹಿಳಾ ಪ್ರಯಾಣಿಕರು ಬಸ್ಸನ್ನೇರುವ ಮೊದಲೇ ಇದನ್ನು ಸ್ಪಷ್ಟಪಡಿಸಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಶಕ್ತಿ ಯೋಜನೆಯ ನಿಯಮ ಏನು ಹೇಳುತ್ತದೆ?
ಜೂನ್ 11 ರಂದು ಸರ್ಕಾರ ಪ್ರಾರಂಭಿಸಿದ ಶಕ್ತಿ ಯೋಜನೆಯಡಿ ಈವರೆಗೆ 36 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಕರ್ನಾಟಕದಲ್ಲಿ ವಾಸಿಸುವ ಮಹಿಳೆಯರಿಗೆ ಮತ್ತು ರಾಜ್ಯದೊಳಗೆ ಪ್ರಯಾಣಿಸುವ ಬಸ್‌ಗಳಲ್ಲಿ ಮಾತ್ರ ಯೋಜನೆಯು ಅನ್ವಯವಾಗುತ್ತದೆ ಎಂದು ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ: Shakti scheme: ಶಕ್ತಿ ಯೋಜನೆ ಎಫೆಕ್ಟ್: ಒಪ್ಪಂದದ ಮೇರೆಗೆ ಸಂಚರಿಸುವ ಸಾರಿಗೆ ನಿಗಮಗಳ ಬಸ್ ದರ ಏರಿಕೆ, ಆಗಸ್ಟ್ 1ರಿಂದ ಅನ್ವಯ
ನೆರೆಯ ರಾಜ್ಯಗಳಲ್ಲಿ ಪ್ರಯಾಣಿಕರು ಗರಿಷ್ಠ 20 ಕಿ.ಮೀ ವರೆಗೆ ಉಚಿತವಾಗಿ ಪ್ರಯಾಣಿಸಬಹುದು ಎಂದೂ ಸರ್ಕಾರ ಹೇಳಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ಐಷಾರಾಮಿ ಬಸ್‌ಗಳಲ್ಲಿ ಶಕ್ತಿ ಯೋಜನೆಗೆ ಅವಕಾಶವಿಲ್ಲ
ಉಚಿತ ಬಸ್ ಪ್ರಯಾಣ ಯೋಜನೆಯು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ನಿಗಮ (NWRTC), ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಗೆ ಮಾತ್ರ ಸೀಮಿತವಾಗಿದೆ. ಎಸಿ ಮತ್ತು ನಾನ್ ಎಸಿ, ವಾಯು ವಜ್ರ, ಇವಿ ಪವರ್ ಪ್ಲಸ್ (ಎಸಿ), ಅಂಬಾರಿ, ಐರಾವತ್ ಮತ್ತು ಫ್ಲೈಬಸ್ ಸೇರಿದಂತೆ ಸ್ಲೀಪರ್ ಬಸ್‌ಗಳು ಸೇರಿದಂತೆ ಐಷಾರಾಮಿ ಬಸ್‌ಗಳಿಗೆ ಯೋಜನೆಯಿಂದ ವಿನಾಯಿತಿ ನೀಡಲಾಗಿದೆ.
Published On - 3:21 pm, Sat, 12 August 23