Shakti scheme: ಶಕ್ತಿ ಯೋಜನೆ ಎಫೆಕ್ಟ್: ಒಪ್ಪಂದದ ಮೇರೆಗೆ ಸಂಚರಿಸುವ ಸಾರಿಗೆ ನಿಗಮಗಳ ಬಸ್ ದರ ಏರಿಕೆ, ಆಗಸ್ಟ್ 1ರಿಂದ ಅನ್ವಯ
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಜಾರಿಯಾದಾಗಿನಿಂದಲೂ ಈ ಯೋಜನೆಗೆ ಭಾರೀ ಬೇಡಿಕೆ ಇದೆ. ಸದ್ಯ ಇದೇ ಶಕ್ತಿ ಯೋಜನೆಯಿಂದ ನಿತ್ಯ ಓಡಾಟದ ಬಸ್‌ಗಳ ಬೇಡಿಕೆ ಹೆಚ್ಚಾದ ಹಿನ್ನೆಲೆ ಒಪ್ಪಂದದ ಮೇರೆಗೆ ಸಂಚರಿಸುವ ಸಾರಿಗೆ ನಿಗಮಗಳ ಬಸ್ ದರ ಏರಿಕೆ ಮಾಡಲಾಗಿದೆ.
ಬೆಂಗಳೂರು, ಜುಲೈ 26: ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ (Shakti scheme) ಎಫೆಕ್ಟ್ ಹಿನ್ನೆಲೆ ಒಪ್ಪಂದದ ಮೇರೆಗೆ ಸಂಚರಿಸುವ ಸಾರಿಗೆ ನಿಗಮಗಳ ಬಸ್ ದರ ಏರಿಕೆ ಮಾಡಲಾಗಿದ್ದು, ಈ ಕುರಿತಾಗಿ ಕೆಎಸ್‌ಆರ್‌ಟಿಸಿ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಹೊಸ ಆದೇಶದಂತೆ ಮೈಸೂರು ವ್ಯಾಪ್ತಿಯಲ್ಲಿ ಗಂಟೆಗಳ ಆಧಾರದಲ್ಲಿ ವಾಹನ ಒದಗಿಸುವ ವ್ಯವಸ್ಥೆ ರದ್ದು ಮಾಡಲಾಗಿದೆ. ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚರಿಸುವ ಬಸ್‌ಗಳ ಪರಿಷ್ಕರಣೆ ದರ ಆಗಸ್ಟ್ ಒಂದರಿಂದ ಅನ್ವಯವಾಗಲಿದೆ.
ವರ್ಗ: ಕರ್ನಾಟಕ ಸಾರಿಗೆ
ಆಸನಗಳ ಸಂಖ್ಯೆ 55/5749, ಕನಿಷ್ಠ ಕಿಮೀ ದಿನಕ್ಕೆ 350 ರೂ. ಪ್ರತೀ ಕಿಲೋಮೀಟರ್ (ವಾರದ ಎಲ್ಲಾ ದಿನ) ರಾಜ್ಯದೊಳಗೆ 47 ರೂ. ಅಂತರ ರಾಜ್ಯ 50 ರೂ.
ಇದನ್ನೂ ಓದಿ: Shakti scheme: ಉಚಿತ ಪ್ರಯಾಣಕ್ಕೆ ಐಡಿ ಕೇಳಿದ ಬಿಎಂಟಿಸಿ ಕಂಡಕ್ಟರ್ ಜತೆ ಯುವತಿ ಜಗಳ; ವಿಡಿಯೋ ವೈರಲ್
ವರ್ಗ: ರಾಜಹಂಸ ಎಕ್ಸಿಕ್ಯೂಟಿವ್
ಆಸನಗಳ ಸಂಖ್ಯೆ 36, ಕನಿಷ್ಠ ಕಿಮೀ ದಿನಕ್ಕೆ 350 (ವಾರದ ಎಲ್ಲಾ ದಿನ) ರಾಜ್ಯದೊಳಗೆ 48ರೂ. ಅಂತರ ರಾಜ್ಯ 53 ರೂ.
ವರ್ಗ: ರಾಜಹಂಸ
ಆಸನಗಳ ಸಂಖ್ಯೆ 39, ಕನಿಷ್ಠ ಕಿಮೀ ದಿನಕ್ಕೆ 350 (ವಾರದ ಎಲ್ಲಾ ದಿನ) ರಾಜ್ಯದೊಳಗೆ 51 ರೂ. ಅಂತರ ರಾಜ್ಯ 55 ರೂ.
ಇದನ್ನೂ ಓದಿ: Mysuru Bengaluru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸಣ್ಣ ವಾಹನಗಳ ನಿಷೇಧ ಸಮರ್ಥಿಸಿದ ಅಲೋಕ್ ಕುಮಾರ್
ವರ್ಗ: ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್
ಆಸನಗಳ ಸಂಖ್ಯೆ 42, ಕನಿಷ್ಠ ಕಿಮೀ ದಿನಕ್ಕೆ 300 (ವಾರದ ಎಲ್ಲಾ ದಿನ), ರಾಜ್ಯದೊಳಗೆ 45 ರೂ.
ವರ್ಗ: ಮಿಡಿ ಬಸ್
ಆಸನಗಳ ಸಂಖ್ಯೆ 30, ಕನಿಷ್ಠ ಕಿಮೀ ದಿನಕ್ಕೆ 300 (ವಾರದ ಎಲ್ಲಾ ದಿನ) ರಾಜ್ಯದೊಳಗೆ 40 ರೂ.
ವರ್ಗ: ನಾನ್ ಎಸಿ ಸ್ಲೀಪರ್
ಆಸನಗಳ ಸಂಖ್ಯೆ 32, ಕನಿಷ್ಠ ಕಿಮೀ ದಿನಕ್ಕೆ 400 (ವಾರದ ಎಲ್ಲಾ ದಿನ) ರಾಜ್ಯದೊಳಗೆ 55 ರೂ. ಅಂತರ ರಾಜ್ಯ60 ರೂ. ದರ ಹೊಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:31 pm, Wed, 26 July 23