ಮನೆ ಬಿಟ್ಟು ರೈಲಿನಲ್ಲೇ ಆಕೆಯ ವಾಸ, ಅಲ್ಲೇ ಸ್ನಾನ, ಅಲ್ಲೇ ಓದು, ಅಲ್ಲೇ ನಿದ್ದೆ, ಯುವತಿಯ ವಿಭಿನ್ನ ಬದುಕು
ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವುದು ತುಂಬಾ ಕಷ್ಟವಾಗಿದೆ, ತಮಗೆ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ಬಹುಪಾಲು ಬಾಗ ಮನೆ ಬಾಡಿಗೆಗೇ ಹೋಗುತ್ತದೆ. ಈ ಖರ್ಚನ್ನು ಕಡಿಮೆ ಮಾಡಲು ಈ ಯುವತಿ ಒಂದು ಉಪಾಯ ಮಾಡಿದ್ದಾಳೆ. ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದವಳು, ಈಗ ರೈಲಿನಲ್ಲಿ ವಾಸಿಸಲು ಶುರು ಮಾಡಿದ್ದಾಳೆ. ಜರ್ಮನಿಯಲ್ಲಿ ಯುವತಿಯೊಬ್ಬಳು ಬಾಡಿಗೆ ಮನೆಯಿಂದ ಬೇಸತ್ತು ರೈಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವುದು ತುಂಬಾ ಕಷ್ಟವಾಗಿದೆ, ತಮಗೆ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ಬಹುಪಾಲು ಬಾಗ ಮನೆ ಬಾಡಿಗೆಗೇ ಹೋಗುತ್ತದೆ. ಈ ಖರ್ಚನ್ನು ಕಡಿಮೆ ಮಾಡಲು ಈ ಯುವತಿ ಒಂದು ಉಪಾಯ ಮಾಡಿದ್ದಾಳೆ. ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದವಳು, ಈಗ ರೈಲಿನಲ್ಲಿ ವಾಸಿಸಲು ಶುರು ಮಾಡಿದ್ದಾಳೆ. ಜರ್ಮನಿಯಲ್ಲಿ ಯುವತಿಯೊಬ್ಬಳು ಬಾಡಿಗೆ ಮನೆಯಿಂದ ಬೇಸತ್ತು ರೈಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಡೀ ದಿನ ರೈಲಿನಲ್ಲಿ ಇರಲು ಆಕೆ ಬೇಸರವಾಗುವುದಿಲ್ಲವಂತೆ, ರಜೆ ಎಂದುಕೊಳ್ಳುತ್ತಾಳಂತೆ, ಮನೆಗಿಂತ ಅಗ್ಗವೂ ಕೂಡ ಎನ್ನುತ್ತಾರೆ ಯುವತಿ.
ಈ ಯುವತಿ ಹೆಸರು ಲಿಯೋನಿ, ಈ ಹಿಂದೆ ಸಾಮಾನ್ಯ ಜನರಂತೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬಾಡಿಗೆ ಮನೆಯ ಮಾಲೀಕರೊಂದಿಗೆ ಜಗಳವಾಯಿತು, ಅದಾದ ಬಳಿಕ ವಿಶಿಷ್ಟ ಜೀವನಶೈಲಿಯನ್ನು ಆಯ್ಕೆ ಮಾಡಿಕೊಂಡಳು. ಮನೆಯಲ್ಲಿ ವಾಸಿಸುವ ಮೊದಲು ರೈಲಿನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದರು.
ಆಕೆ ವಾರ್ಷಿಕವಾಗಿ 300 ಪೌಂಡ್ ಅಂದರೆ 31 ಸಾವಿರ ರೂ. ಪಾಸ್ ಪಡೆದಿದ್ದಾಳೆ, ಆಕೆ ಜರ್ಮನಿಯ ಯಾವುದೇ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಸ್ನಾನ ಮಾಡುವುದು, ಓದುವುದು ಎಲ್ಲವನ್ನೂ ರೈಲಿನಲ್ಲೇ ಮಾಡುತ್ತಾಳೆ. ಆಕೆ 2015ರಿಂದ ರೈಲಿನಲ್ಲಿ ವಾಸಿಸುತ್ತಿದ್ದಾಳೆ, ಅಪಾರ್ಟ್ಮೆಂಟ್ಗೆ ಮತ್ತೆ ಹೋಗುವುದಿಲ್ಲ ಎನ್ನುತ್ತಾರೆ ಲಿಯೋನಿ.
ಮತ್ತಷ್ಟು ಓದಿ: Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು
ಹುಡುಗಿ ತನ್ನ ಅಗತ್ಯ ಬಟ್ಟೆಗಳು, ಟ್ಯಾಬ್ಲೆಟ್ ಕಂಪ್ಯೂಟರ್ ಮತ್ತು ಸ್ಯಾನಿಟರಿ ಬ್ಯಾಗ್‌ನೊಂದಿಗೆ ಮಾತ್ರ ಪ್ರಯಾಣಿಸುತ್ತಾಳೆ. ಅವರ ಎಲ್ಲಾ ಸ್ನೇಹಿತರು ಈ ರೀತಿಯ ಅಲೆಮಾರಿತನವನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.
ಆದರೆ ಅನೇಕ ಜನರು ಇದನ್ನು ಆಸಕ್ತಿದಾಯಕವಾಗಿ ಕಾಣುತ್ತಾರೆ. 2020 ರಲ್ಲಿ, ಹುಡುಗಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದಳು ಮತ್ತು ಅವಳು ರೈಲನ್ನು ಬಿಟ್ಟು ತನ್ನನ್ನು ಕಾರವಾನ್ ಅಂದರೆ ವ್ಯಾನ್‌ಗೆ ಬದಲಾಯಿಸಿದಳು. ಈಗ ಅವಳು ವ್ಯಾನ್‌ನಲ್ಲಿ ಕೆಲಸ ಮಾಡುತ್ತಾಳೆ ಮತ್ತು ತನ್ನ ಜೀವನವನ್ನು ಆನಂದಿಸುತ್ತಿದ್ದಾಳೆ. ಯುವತಿ ಪ್ರಕಾರ, ಈ ಜೀವನವನ್ನು ಹೆಚ್ಚು ಆರಾಮದಾಯಕ ಮತ್ತು ಆಸಕ್ತಿದಾಯಕವೆಂದು ಭಾವಿಸುತ್ತಾಳೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ