Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾವಾಲಾ ಕಾವು; ಕಿಲಿ, ನೀಮಾ ಪೌಲ್ ಡ್ಯಾನ್ಸ್​ಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

Jailer : ಈ ಹಾಡಿನಲ್ಲಿ ನುಡಿಸಿದ ಕೊಳಲು ಮಾತ್ರ ಗುಂಗು ಹಿಡಿಸುವಂತಿದೆ ಎಂದಿದ್ದಾರೆ ಆಫ್ರಿಕಾದ ರೀಲ್ ಮೇಕರ್ಸ್​ ಕಿಲಿ ಪೌಲ್​, ನೀಮಾ ಪೌಲ್. ಭಾರತೀಯ ಹಾಡುಗಳಿಗೆ ರೀಲ್ಸ್ ಮಾಡುತ್ತ ಇವರಿಬ್ಬರೂ ಭಾರತಿಯರೇ ಎನ್ನುವಷ್ಟು ಆಪ್ತರೆನ್ನಿಸಿದ್ದಾರೆ ಎಂದಿದ್ದಾರೆ ನೆಟ್ಟಿಗರು. ಲಕ್ಷಾಂತರ ಜನರು ಲೈಕ್ ಮಾಡಿ ಪ್ರತಿಕ್ರಿಯಿಸಿದ್ದಾರೆ ಈ ರೀಲ್ ಅನ್ನು.

Viral Video: ಕಾವಾಲಾ ಕಾವು; ಕಿಲಿ, ನೀಮಾ ಪೌಲ್ ಡ್ಯಾನ್ಸ್​ಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು
ಕಾವಾಲಾ ಹಾಡಿಗೆ ಕಿಲಿ ಪೌಲ್ ಮತ್ತು ನೀಮಾ ಪೌಲ್​ ಡ್ಯಾನ್ಸ್
Follow us
ಶ್ರೀದೇವಿ ಕಳಸದ
|

Updated on:Aug 28, 2023 | 10:47 AM

Kaavaalaa: ಆಫ್ರಿಕಾದ ಅಣ್ಣತಂಗಿ ಜೋಡಿ ಕಿಲಿ ಪೌಲ್ ಮತ್ತು ನೀಮಾ ಪೌಲ್ ಭಾರತೀಯ ಸಿನೆಮಾಗಳ ಹಾಡುಗಳಿಗೆ ರೀಲ್ ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಟ್ರೆಂಡಿಂಗ್​ನಲ್ಲಿರುವ ಹಾಡುಗಳಿಗೆ ಲಿಪ್​ ಸಿಂಕ್ ಮಾಡುತ್ತ, ನರ್ತಿಸುತ್ತ ಗಮನ ಸೆಳೆದವರು ಇವರು. ಈತನಕ ಇವರ ಕಾವಾಲಾ ರೀಲ್​ ಇನ್ನೂ ಕಣ್ಣಿಗೆ ಬಿದ್ದಿಲ್ಲವಲ್ಲ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಪೂರ್ಣವಿರಾಮ ನೀಡಿ. ರಜಿನಿಕಾಂತ ಅಭಿನಯದ ಜೈಲರ್ (Jailer)​ ಚಿತ್ರದಲ್ಲಿ ತಮನ್ನಾ ನರ್ತಿಸಿರುವ ಈ ಹಾಡಿಗೆ ಈ ಸೋದರ ಸೋದರಿ ಭರ್ಜರಿ ಹೆಜ್ಜೆ ಹಾಕಿದ್ದಾರೆ. ನೆಟ್ಟಿಗರೂ ವಾಹ್​ ಎಂದು ಹುರಿದುಂಬಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಮೆಟ್ರೋ; ಯಾರಿಗೆ ಕರೀತೀಯೋ ಕರಿ! ಲೇಡೀಸ್​ ಕೋಚ್​​ನಲ್ಲಿ ನುಗ್ಗಿದ ಯುವಕನ ಆಟಾಟೋಪ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಜು. 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಇತನಕ ಸುಮಾರು 5 ಮಿಲಿಯನ್ ಜರನು ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಹಸ್ರಾರು ಜನರು ಪ್ರತಿಕ್ರಿಯೆಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಮಸಾಯಿಯ ಸಾಂಪ್ರದಾಯಿಕ ತೊಡುಗೆಯಲ್ಲಿ ಈ ಅಣ್ಣತಂಗಿ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕಾವಾಲಾಗೆ ಕಿಲಿ ಮತ್ತು ನೀಮಾ ಹೆಜ್ಜೆ

View this post on Instagram

A post shared by Kili Paul (@kili_paul)

ಭಾರತೀಯರಾದ ನಾವು ನಿಮ್ಮನ್ನು ಬಹಳ ಪ್ರೀತಿಸುತ್ತೇವೆ ಎಂದಿದ್ದಾರೆ ಒಬ್ಬರು. ಇದು ಅತ್ಯುತ್ತಮವಾದ ಪ್ರದರ್ಶನ ಎಂದಿದ್ದಾರೆ ಇನ್ನೊಬ್ಬರು. ನೀಮಾ ಸ್ವಲ್ಪ ಜಾಸ್ತಿ ಬಳುಕಿದ್ದಾರೆ ಇಲ್ಲಿ ಎಂದಿದ್ದಾರೆ ಮಗದೊಬ್ಬರು. ನಿಮ್ಮ ಆಂಗಿಕ ಚಲನೆಗಳು ಬಹಳ ಸುಂದರವಾಗಿ ಮೂಡಿಬಂದಿವೆ ಎಂದಿದ್ದಾರೆ ಇನ್ನೂ ಒಬ್ಬರು. ಎಂದಿನಂತೆ ಅಷ್ಟೇ ಪ್ರೀತಿಯಿಂದ ಪ್ರಸ್ತುತಪಡಿಸಿದ್ದೀರಿ. ಭಾರತದ ಬಗ್ಗೆ ನಿಮಗಿರುವ ಪ್ರೀತಿ ಹೀಗೆಯೇ ಸಾಗಲಿ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಲೈವ್​ನಲ್ಲಿ ಆ್ಯಂಕರ್​​ಗೆಳತಿಯ ಬಳಿ ಪ್ರೇಮನಿವೇದನೆ ಮಾಡಿಕೊಂಡ ರಿಪೋರ್ಟರ್​ಗೆಳೆಯ  

ಕಾವಾಲಾ ಸಿನೆಮಾ ಇದು ಆ್ಯಕ್ಷನ್​ ಮತ್ತು ಹಾಸ್ಯರಸಪೋಷಿತ ಚಿತ್ರ. ರಜನೀಕಾಂತ, ತಮನ್ನಾ ಭಾಟಿಯಾ,  ಶಿವರಾಜಕುಮಾರ್ ಮುಂತಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಹಾಡನ್ನು ಬರೆದಿದ್ದಾರೆ. ಅರುಣರಾಜ್ ಕಾಮರಾಜ್ ಸಂಗೀತ ನೀಡಿದ್ದಾರೆ. ಅರುಣರಾಜ ಕಾಮರಾಜ್ ಈ ಲವಲವಿಕೆಯ ಹಾಡಿನ ಸಾಹಿತ್ಯವನ್ನು ಬರೆದಿದ್ದಾರೆ. ಶಿಲ್ಪಾ ರಾವ್ ಅವರು ಹಾಡಿದ್ದಾರೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:47 am, Mon, 28 August 23

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ