Reynolds 045 Fine Carbure ಪೆನ್ ಇನ್ನು ಗತ ಇತಿಹಾಸವಾ? ರೇನಾಲ್ಡ್ಸ್ ಕಂಪನಿ ಹೇಳುವುದೇನು? ಭಾರತೀಯರಿಗೆ ಯಾಕೆ ಇದು ಅಚ್ಚುಮೆಚ್ಚು?

Rumours About Iconic Reynolds Pen: ಅಮೆರಿಕ ಮೂಲದ ರೇನಾಲ್ಡ್ಸ್ ಪೆನ್ ಭಾರತೀಯರ ಪಾಲಿಗೆ ಭಾರತೀಯ ಕಂಪನಿಯೇ ಆಗಿದೆ. ಎಂಬತ್ತು, ತೊಂಬತ್ತರ ದಶಕದಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಪೆನ್ ರೇನಾಲ್ಡ್ಸ್​ನದ್ದಾಗಿದೆ. ಆದರೆ, ರೇನಾಲ್ಡ್ಸ್​ನ ಜನಪ್ರಿಯ 045 ಫೈನ್ ಕಾರ್ಬುರೆ ಪೆನ್ ಸರಬರಾಜು ನಿಂತುಹೋಗುತ್ತದೆ ಎಂಬಂತಹ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಇದೆಲ್ಲವೂ ಸುಳ್ಳು ಎಂದು ರೇನಾಲ್ಡ್ಸ್ ಹೇಳಿದೆ.

Reynolds 045 Fine Carbure ಪೆನ್ ಇನ್ನು ಗತ ಇತಿಹಾಸವಾ? ರೇನಾಲ್ಡ್ಸ್ ಕಂಪನಿ ಹೇಳುವುದೇನು? ಭಾರತೀಯರಿಗೆ ಯಾಕೆ ಇದು ಅಚ್ಚುಮೆಚ್ಚು?
ರೇನಾಲ್ಡ್ಸ್ 045 ಫೈನ್ ಕಾರ್ಬುರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2023 | 11:44 AM

ಪೆನ್​ಗಳ ಬ್ರ್ಯಾಂಡ್ ರೇನಾಲ್ಡ್ಸ್ (Reynolds Pen International Company) ಹೆಸರು ಯಾರು ಕೇಳಿಲ್ಲ..! ಅದರಲ್ಲೂ ಭಾರತೀಯರ ಜನಮಾನಸಕ್ಕೆ ರೇನಾಲ್ಡ್ಸ್ ಹೆಸರು ಚಿರಪರಿಚಿತ. ರೇನಾಲ್ಡ್ಸ್ 045 ಫೈನ್ ಕಾರ್ಬುರೆಯಂತೂ (Reynolds 045 Fine Carbure) ವಿದ್ಯಾರ್ಥಿಗಳಿಂದ ಹಿಡಿದು ಸರ್ಕಾರಿ ಕಚೇರಿಯ ಕ್ಲರ್ಕ್​ಗಳವರೆಗೂ ಬಹಳ ಸಾಮಾನ್ಯವಾಗಿ ಬಳಕೆಯಾಗುವ ಪೆನ್. ಇದೀಗ ಈ ಐಕಾನಿಕ್ ಪೆನ್ ಸರಬರಾಜು ನಿಂತಿದೆ. ಅದೀಗ ಗತ ಇತಿಹಾಸ ಸೇರಲಿದೆ ಎಂಬಂತಹ ವರ್ತಮಾನವೊಂದು ಬಹಳ ಮಂದಿಯನ್ನು ಬೆಚ್ಚಿಬೀಳಿಸಿದೆ. ಟ್ವಿಟ್ಟರ್ (ಎಕ್ಸ್) ಪ್ಲಾಟ್​ಫಾರ್ಮ್​ನ ಜನಪ್ರಿಯ ಖಾತೆಗಳಲ್ಲೊಂದಾದ ಮೆಮೋರಬಲ್ ನೈನ್ಟೀಸ್ (@memorable_90s) ಆಗಸ್ಟ್ 24ರಂದು ಈ ವಿಚಾರವನ್ನು ಪೋಸ್ಟ್ ಮಾಡಿ, ಯುಗಾಂತ್ಯ ಎಂದು ಹೇಳಿದ್ದರು. ಇದು ಬಹಳ ವೈರಲ್ ಆಗಿ, ಬಹಳ ಜನರು ಸ್ಪಂದಿಸಿ ಖೇದ ವ್ಯಕ್ತಪಡಿಸಿದ್ದರು.

ಇದೆಲ್ಲಾ ಸುಳ್ಳು ಎಂದ ರೇನಾಲ್ಡ್ಸ್ ಕಂಪನಿ?

ರೇನಾಲ್ಡ್ಸ್ ಪೆನ್ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು. ನಾವು ಭಾರತದಲ್ಲಿ ವ್ಯವಹಾರ ವಿಸ್ತರಿಸಲು ಯೋಜಿಸುತ್ತಿದ್ದೇವೆ. ಯಾರೂ ಕೂಡ ಸುಳ್ಳು ಮಾಹಿತಿ ನಂಬಬೇಡಿ ಎಂದು ರೇನಾಲ್ಡ್ಸ್ ಇಂಡಿಯಾದ ಮ್ಯಾನೇಜ್ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದೆ.

‘ವಿವಿಧ ಮಾಧ್ಯಗಳಲ್ಲಿ ರೇನಾಲ್ಡ್ಸ್ ಬಗ್ಗೆ ಸುಳ್ಳು ಮಾಹಿತಿ ಹಬ್ಬಿದೆ. ಭಾರತದಲ್ಲಿ 45 ವರ್ಷ ವ್ಯವಹಾರದ ನಂಟು ಹೊಂದಿರುವ ರೇನಾಲ್ಡ್ಸ್ ಸಂಸ್ಥೆ ಗುಣಮಟ್ಟ ಮತ್ತು ನಾವೀನ್ಯತೆಗೆ ಆದ್ಯತೆ ಕೊಡುತ್ತಾ ಬಂದಿದೆ. ಭಾರತದಲ್ಲಿ ಬರವಣಿಗೆ ವ್ಯವಹಾರವನ್ನು ಬೆಳೆಸುವ ಮತ್ತು ವಿಸ್ತರಿಸುವ ಭವಿಷ್ಯದ ಯೋಜನೆ ಹೊಂದಿದ್ದೇವೆ. ಸರಿಯಾದ ಮಾಹಿತಿಗೆ ನಮ್ಮ ವೆಬ್​ಸೈಟ್ ಮತ್ತು ಸೋಷಿಯಲ್ ಮೀಡಿಯಾ ಚಾನಲ್​ಗಳನ್ನು ನೋಡಿ. ನೀವು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಅತಿಪ್ರಮುಖ ಆದ್ಯತೆಯಾಗಿದೆ’ ಎಂದು ರೇನಾಲ್ಡ್ಸ್ ಇಂಡಿಯಾ ಮ್ಯಾನೇಜ್ಮೆಂಟ್ ತನ್ನ ಇನ್ಸ್​ಟಾಗ್ರಾಮ್ ಖಾತೆಯಿಂದ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಚೀನಾ ಎಲ್ಲಾ ದೇಶಗಳಿಗೂ ತೊಂದರೆ ಕೊಡುವ ಪುಂಡ ದೇಶ; ತಪ್ಪಿಸಿಕೊಳ್ಳುವುದು ಕಷ್ಟ: ಓಆರ್​ಎಫ್ ವಿಪಿ ಅನಿಸಿಕೆ

ರೇನಾಲ್ಡ್ಸ್​ನ 045 ಹೆಸರಿಗೆ ಕಾರಣವೇನು?

ರೇನಾಲ್ಡ್ಸ್ ಪೆನ್​ಗಳು ಭಾರತಕ್ಕೆ ಬಂದು 45 ವರ್ಷ ಆಗಿದೆ. ರೇನಾಲ್ಡ್ಸ್ 045 ಫೈನ್ ಕಾರ್ಬುರೆ ಪೆನ್​ಗೆ ಆ ಹೆಸರು ಬರಲು ಇದು ಕಾರಣವಲ್ಲ. ರೇನಾಲ್ಡ್ಸ್ ಕಂಪನಿ ಅಮೆರಿಕದ ಮಿಲ್ಟನ್ ರೇನಾಲ್ಡ್ಸ್ ಅವರಿಂದ ಶುರುವಾಗಿದ್ದು. ಅಮೆರಿಕದಲ್ಲಿ 1945ರಲ್ಲಿ ಇದು ತನ್ನ ಪೆನ್​ಗಳನ್ನು ಬಿಡುಗಡೆ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಇದರ 045 ಫೈನ್ ಕಾರ್ಬುರೆ ಪೆನ್​ನ ಹೆಸರು ಈ ಇತಿಹಾಸದ ಸ್ಮರಣೆಯಾಗಿದೆ.

ಉಚ್ಚತಮ ಗುಣಮಟ್ಟಕ್ಕೆ ಹೆಸರಾದ ರೇನಾಲ್ಡ್ಸ್ ಪೆನ್ ಭಾರತೀಯ ಕಂಪನಿಯೇ ಆಗಿಹೋಗಿದೆ

1945ರಲ್ಲಿ ಅಮೆರಿಕದಲ್ಲಿ ವ್ಯವಹಾರ ಆರಂಭಿಸಿದ ರೇನಾಲ್ಡ್ಸ್ 1948ರಲ್ಲಿ ಯೂರೋಪಿಯನ್ ಮಾರುಕಟ್ಟೆ ಪ್ರವೇಶಿಸಿತು. 1959ರಲ್ಲಿ ಸೌತ್ ಆಫ್ರಿಕಾದಲ್ಲಿ ಶುರುವಾಯಿತು. ಬಳಿಕ ಮೆಕ್ಸಿಕೋ, ಫ್ರಾನ್ಸ್, ಭಾರತದಲ್ಲಿ ಇದರ ಅಂಗಸಂಸ್ಥೆಗಳು ಪ್ರಾರಂಭವಾದವು.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಬ್ಯಾಂಕುಗಳಿಗೆ 16 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ ಇದೆ, ಇದಲ್ಲಿದೆ ಪಟ್ಟಿ

ಭಾರತದಲ್ಲಿ ಎಪ್ಪತ್ತರ ದಶಕದ ಅಂತ್ಯಕ್ಕೆ ರೇನಾಲ್ಡ್ಸ್ ಪೆನ್​ಗಳು ಶುರುವಾಗಿದ್ದು. ರೇನಾಲ್ಡ್ಸ್​ನಿಂದ ಉತ್ಪನ್ನದ ಲೈಸೆನ್ಸ್ ಪಡೆದ ಜಿಎಂ ಪೆನ್ಸ್ ಇಂಟರ್​ನ್ಯಾಷನಲ್ ಸಂಸ್ಥೆ ಇದನ್ನು ತಯಾರಿಸುತ್ತಿತ್ತು. ಕಡಿಮೆಬೆಲೆಗೆ ಉತ್ತಮ ಗುಣಮಟ್ಟದ ಬಾಲ್​ಪೆನ್​ಗಳನ್ನು ರೇನಾಲ್ಡ್ಸ್ ನೀಡುತ್ತಿತ್ತು. ಬೇರೆ ಕಂಪನಿಗಳೂ ಬಾಲ್ ಪಾಯಿಂಟ್ ಪೆನ್​ಗಳನ್ನು ತಯಾರಿಸುತ್ತಿದ್ದರೂ ಅವುಗಳಿಂದ ಇಂಕ್ ಲೀಕ್ ಆಗುವುದು ಇತ್ಯಾದಿ ಹಲವು ಸಮಸ್ಯೆಗಳಿದ್ದವು. ಆದರೆ ರೇನಾಲ್ಡ್ಸ್ ಪೆನ್​ಗಳು ಈ ಸಮಸ್ಯೆಯನ್ನು ದೂರ ಮಾಡಿದ್ದವು. ಅಂತೆಯೇ ಇದು ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ಉದ್ಯೋಗಿಗಳು ಇತ್ಯಾದಿ ಬರವಣಿಗೆ ಅಗತ್ಯ ಇರುವ ಎಲ್ಲರಿಗೂ ಅಚ್ಚುಮೆಚ್ಚನ ಪೆನ್ ಎನಿಸಿತು.

2016ರಲ್ಲಿ ಜಿಎಂ ಪೆನ್ಸ್ ಇಂಟರ್​ನ್ಯಾಷನಲ್ ಸಂಸ್ಥೆ ರೇನಾಲ್ಡ್ಸ್ ಪೆನ್ ಉತ್ಪಾದನೆಯನ್ನು ನಿಲ್ಲಿಸಿ ತಮ್ಮದೇ ಬ್ರ್ಯಾಂಡ್ ಪೆನ್ ತಯಾರಿಸತೊಡಗಿತು. ಇದಾದ ಬಳಿಕ ರೇನಾಲ್ಡ್ಸ್ ಸಂಸ್ಥೆ ಫ್ಲೇರ್ ಪೆನ್ಸ್ ಎಂಬ ಕಂಪನಿಗೆ ಲೈಸೆನ್ಸ್ ನೀಡಿದೆ. ಚೆನ್ನೈನಲ್ಲಿ ಇದರ ಆರ್ ಅಂಡ್ ಡಿ ಇದೆ. ಇಂದು ರೇನಾಲ್ಡ್ಸ್ ಪೆನ್​ಗಳು 70 ದೇಶಗಳಲ್ಲಿ ಮಾರಾಟವಾಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ