AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಎಲ್ಲಾ ದೇಶಗಳಿಗೂ ತೊಂದರೆ ಕೊಡುವ ಪುಂಡ ದೇಶ; ತಪ್ಪಿಸಿಕೊಳ್ಳುವುದು ಕಷ್ಟ: ಓಆರ್​ಎಫ್ ವಿಪಿ ಅನಿಸಿಕೆ

Business Today India Summit: ಚೀನಾ ಪುಂಡ ದೇಶವಾಗಿ ಪರಿವರ್ತನೆ ಆಗಿದೆ. ಯಾವುದೇ ದೇಶವನ್ನೂ ಬಿಡದೆ ಅದು ಕಾಡುತ್ತಿದೆ. ಅದರ ಸರಬರಾಜು ಸರಪಳಿಯಿಂದ ಹೊರಬರಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ಒಂದುಗೂಡುವುದು ಮುಖ್ಯ ಎನ್ನುವ ಅಭಿಪ್ರಾಯ ಬ್ಯುಸಿನೆಸ್ ಟುಡೆ ಇಂಡಿಯಾ ಸಮಿಟ್ ಕಾರ್ಯಕ್ರಮದಲ್ಲಿ ವ್ಯಕ್ತವಾಗಿದೆ.

ಚೀನಾ ಎಲ್ಲಾ ದೇಶಗಳಿಗೂ ತೊಂದರೆ ಕೊಡುವ ಪುಂಡ ದೇಶ; ತಪ್ಪಿಸಿಕೊಳ್ಳುವುದು ಕಷ್ಟ: ಓಆರ್​ಎಫ್ ವಿಪಿ ಅನಿಸಿಕೆ
ಇಂಡಿಯಾ 100 ಸಮಿಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2023 | 3:40 PM

Share

ನವದೆಹಲಿ, ಆಗಸ್ಟ್ 27: ಚೀನಾದ ಪ್ರಾಬಲ್ಯ ಕಡಿಮೆ ಮಾಡಲು ಭಾರತ ಮತ್ತು ಅಮೆರಿಕ ಒಗ್ಗೂಡಬೇಕು. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಮತ್ತು ಅಮೆರಿಕ ದೇಶಗಳ ಗುಂಪು ಪ್ರಮುಖ ಪಾತ್ರ ವಹಿಸಬೇಕು ಎಂಬ ಅಭಿಪ್ರಾಯಗಳನ್ನು ಹಲವು ಉದ್ಯಮ ನಾಯಕರು, ಬುದ್ಧಿಜೀವಿಗಳು ಅಭಿಪ್ರಾಯಪಟ್ಟಿದ್ದಾರೆ. ಬ್ಯುಸಿನೆಸ್ ಟುಡೇ ಪತ್ರಿಕೆ ವತಿಯಿಂದ ಆಗಸ್ಟ್ 26, ಶನಿವಾರ ನಡೆದ ಇಂಡಿಯಾ 100 ಸಮಿಟ್ ಕಾರ್ಯಕ್ರಮದಲ್ಲಿ (BT at India 100 Summit) ಪಾಲ್ಗೊಂಡ ತಜ್ಞರು ಬಹುತೇಕ ಚೀನಾ ಅವಲಂಬನೆ ತಪ್ಪಿಸುವ ಕುರಿತು ಮಾತನಾಡಿದ್ದಾರೆ. ಯುಎಸ್​ಐಬಿಸಿ ಅಧ್ಯಕ್ಷ ಅತುಲ್ ಕಶ್ಯಪ್ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವೆ ಹೊಸ ಪ್ರಮುಖ ತಂತ್ರಜ್ಞಾನಗಳಾದ ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಡಿಫೆನ್ಸ್ ಮತ್ತು ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಸಹಭಾಗಿತ್ವ ಇರುವುದನ್ನು ಎತ್ತಿತೋರಿಸಿದ್ದಾರೆ.

ಚೀನಾ ಪುಂಡ ದೇಶವಾಗಿ ಬದಲಾಗಿದೆ ಎಂದ ಒಆರ್​ಎಫ್ ವೈಸ್ ಪ್ರೆಸಿಡೆಂಟ್

ಬ್ಯುಸಿನೆಸ್ ಟುಡೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಒಬ್ಸರ್ವರ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ಉಪಾಧ್ಯಕ್ಷ ಗೌತಮ್ ಚಿಕರ್ಮಾನೆ, ಚೀನಾವನ್ನು ರೋಗ್ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿ ಸಂಬಂಧ ಇದ್ದರೆ ಅಮೆರಿಕಕ್ಕೆ ಆಗುವ ಪ್ರಯೋಜನವೇನು? ವಿವೇಕ್ ರಾಮಸ್ವಾಮಿ ಅನಿಸಿಕೆ ಇದು

ಭಾರತ, ಅಮೆರಿಕ ಮತ್ತು ಚೀನಾ ಗುಂಪಿನ ನಾಯಕತ್ವದಲ್ಲಿ ಆರ್ಥಿಕ ಬೆಳವಣಿ ಆಗಬೇಕು ಎನ್ನುವ ವಿಚಾರವನ್ನು ಪ್ರಶ್ನಿಸಿದ ಒಆರ್​ಎಫ್ ವೈಸ್ ಪ್ರೆಸಿಡೆಂಟ್, ಚೀನಾ ಎಲ್ಲಾ ದೇಶಗಳಿಗೂ ತೊಂದರೆ ಕೊಡುತ್ತಿರುವ ಪುಂಡ ದೇಶ ಎಂದಿದ್ದು, ಭಾರತ ಮತ್ತು ಅಮೆರಿಕ ಜಿ2 ಗುಂಪಾಗಬೇಕು ಎಂದು ಸಲಹೆ ಕೊಟ್ಟಿದ್ದಾರೆ.

‘ಚೀನಾ ಈಗ ಪುಂಡ ದೇಶವಾಗಿ ಬದಲಾಗಿದೆ. ಯಾವ ದೇಶವನ್ನೂ ಬಿಡದೇ ಅದು ತೊಂದರೆ ಕೊಡುತ್ತಿದೆ. ಚೀನಾ ಕೈಗೆ ಸಿಕ್ಕ ದೇಶಗಳು ಬಿಡಿಸಿಕೊಳ್ಳಲು ಪರದಾಡುತ್ತಿವೆ’ ಎಂದು ಗೌತಮ್ ಚಿಕರ್ಮಾನೆ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕವಾಗಿ ಚೀನಾದ ಪ್ರಭಾವ ಹೆಚ್ಚುತ್ತಿರುವುದು ಹೌದು. ಚೀನಾದ ಸರಬರಾಜು ಸರಪಳಿಯಿಂದ ಹೊರಬರುವುದು ಸವಾಲಿನ ಕೆಲಸವಾಗಿದೆ. ಚೀನಾದ ನೀತಿ ಮತ್ತು ಆರ್ಥಿಕ ಪ್ರಾಬಲ್ಯವನ್ನು ಎಲ್ಲರೂ ಒಗ್ಗೂಡಿ ಎದುರಿಸಿದರೆ ಅಮೆರಿಕ ಮತ್ತು ಭಾರತ ಮಾತ್ರ ಇರುವ ಜಿ2 ಗುಂಪು ತಯಾರಾಗುತ್ತದೆ ಎಂದು ಒಬ್ಸರ್ವರ್ ರಿಸರ್ಚ್ ಫೌಂಡೇಶನ್​ನ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿಸ್ನೇಹ ಹೊಂದಿದವರಿಗೆ ಉಜ್ವಲ ಆರ್ಥಿಕತೆ: ಜಿ20 ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

25 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವುದು ಹೇಗೆ?

ಹಣಕಾಸು ಸಚಿವಾಲಯದ ಮಾಜಿ ಕಾರ್ಯದರ್ಶಿ ಮತ್ತು ಆರ್ಥಿಕ ನೀತಿ ತಜ್ಞ ಆರ್ ಗೋಪಾಲನ್ ಮಾತನಾಡಿ, 2047ರಷ್ಟರಲ್ಲಿ ಭಾರತ 25 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವ ಗುರಿ ಸಾಕಾರಗೊಳ್ಳಲು ಬೇಕಾದ ಕ್ರಮಗಳ ವಿವರ ನೀಡಿದ್ದಾರೆ. ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ, ಮರುಬಳಕೆ ಶಕ್ತಿಯ ಅಳವಡಿಕೆ, ವ್ಯಾಪಾರ ಐಕ್ಯತೆ ಮತ್ತು ನಾವೀನ್ಯತೆ (ಇನ್ನೋವೇಶನ್) ಬಹಳ ಮುಖ್ಯ. ಕೇಂದ್ರ ಹಾಗೂ ರಾಜ್ಯ ಮಟ್ಟಗಳಲ್ಲಿ ಹೂಡಿಕೆಸ್ನೇಹಿ ವಾತಾವರಣ ಬಹಳ ಅಗತ್ಯ ಎಂದು ಆರ್ ಗೋಪಾನ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ