ಭಾರತದ ಜೊತೆ ಗಟ್ಟಿ ಸಂಬಂಧ ಇದ್ದರೆ ಅಮೆರಿಕಕ್ಕೆ ಆಗುವ ಪ್ರಯೋಜನವೇನು? ವಿವೇಕ್ ರಾಮಸ್ವಾಮಿ ಅನಿಸಿಕೆ ಇದು

India-US Relationship: ಚೀನಾ ಜೊತೆ ಆರ್ಥಿಕವಾಗಿ ಅವಲಂಬಿತವಾಗಿರುವ ಅಮೆರಿಕ ಈಗ ಆ ಬಂಧದಿಂದ ಬಿಡಿಸಿಕೊಳ್ಳಲು ಹತಾಶ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತವು ಅಮೆರಿಕದ ಪಾಲಿಗೆ ವರದಾನದಂತೆ ಕಾಣುತ್ತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ವಿವೇಕ್ ರಾಮಸ್ವಾಮಿ ಈ ಬಗ್ಗೆ ವಿವರಣೆ ನೀಡಿದ್ದಾರೆ.

ಭಾರತದ ಜೊತೆ ಗಟ್ಟಿ ಸಂಬಂಧ ಇದ್ದರೆ ಅಮೆರಿಕಕ್ಕೆ ಆಗುವ ಪ್ರಯೋಜನವೇನು? ವಿವೇಕ್ ರಾಮಸ್ವಾಮಿ ಅನಿಸಿಕೆ ಇದು
ವಿವೇಕ್ ರಾಮಸ್ವಾಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 28, 2023 | 2:49 PM

ನವದೆಹಲಿ, ಆಗಸ್ಟ್ 27: ಅಮೆರಿಕದಲ್ಲಿ ಈಗ ಪಕ್ಷಾತೀತವಾಗಿ ಭಾರತಪರ ಧೋರಣೆ ಕಂಡುಬಂದಿದೆ. ಚೀನಾ ಮೇಲೆ ಆರ್ಥಿಕವಾಗಿ ಅವಲಂಬಿತವಾಗಿರುವ ಅಮೆರಿಕಕ್ಕೆ ಈಗ ಭಾರತದ ನೆರವು ಬಹಳ ಅಗತ್ಯ. ಭಾರತ ಬೆಳೆದಷ್ಟೂ ಅಮೆರಿಕ ಚೀನಾದಿಂದ ದೂರವಾಗಲು ಸಾಧ್ಯವಾಗುತ್ತದೆ. ಹೀಗಾಗಿ, ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳ ನಾಯಕರುಗಳು ಭಾರತದ ಜೊತೆ ಸಂಬಂಧ ಗಟ್ಟಿಗೊಳಿಸುವ ಇರಾದೆ ಹೊಂದಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಭಾರತ ಮತ್ತು ಅಮೆರಿಕ ನಡುವೆ ಗಟ್ಟಿ ಸಂಬಂಧ ಇರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೀನಾ ಜೊತೆಗಿನ ಆರ್ಥಿಕ ಅವಲಂಬನೆಯೊಂದಿಗೆ ಮುಕ್ತರಾಗಲು ಭಾರತದೊಂದಿಗೆ ಅಮೆರಿಕದ ಸಂಬಂಧ ಗಟ್ಟಿಯಾಗಿರಬೇಕು ಎಂದು ವಿವೇಕ್ ರಾಮಸ್ವಾಮಿ ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ಕಳುಹಿಸಿದ ವಿಡಿಯೋ ಸಂದೇಶದಲ್ಲಿ ವಿವೇಕ್ ರಾಮಸ್ವಾಮಿ ಭಾರತ ಮತ್ತು ಅಮೆರಿಕ ಸಂಬಂಧವೃದ್ಧಿಯಿಂದ ಆಗುವ ಅನುಕೂಲತೆಗಳನ್ನು ವಿಶದವಾಗಿ ತಿಳಿಸಿದ್ದಾರೆ.

ಸಮುದ್ರ ಮೂಲಕ ಚೀನಾಗೆ ಸರಕು ಸಾಗಣೆ ತಡೆಯಲು ಭಾರತದಿಂದ ಸಾಧ್ಯ

ಚೀನಾದ ಪ್ರಾಬಲ್ಯಕ್ಕೆ ಅಂಕುಶ ಹಾಕಲು ಭಾರತ ಮತ್ತು ಅಮೆರಿಕ ಮಿಲಿಟರಿ ಸ್ನೇಹದಿಂದ ಹೇಗೆ ಲಾಭ ಆಗುತ್ತದೆ ಎಂದು ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್ ರಾಮಸ್ವಾಮಿ ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ಮೀಸಲು ನಿಧಿಯಲ್ಲಿ ಭಾರೀ ಇಳಿಕೆ; 600 ಬಿಲಿಯನ್ ಡಾಲರ್ ಮಟ್ಟಕ್ಕಿಂತ ಕಡಿಮೆ

ಮಧ್ಯಪ್ರಾಚ್ಯ ದೇಶಗಳಿಂದ ಚೀನಾಗೆ ಸಾಗುವ ಹೆಚ್ಚಿನ ತೈಲ ಸರಬರಾಜು ಮಲಕಾ ಸ್ಟ್ರೇಟ್ (ಸಮುದ್ರ ಮಾರ್ಗ) ಮೂಲಕ ಹೋಗುತ್ತದೆ. ಈ ಮಲಕಾ ಸ್ಟ್ರೇಟ್ ಮಲೇಷ್ಯಾ, ಸಿಂಗಾಪುರ ಹಾದಿಯಲ್ಲಿದೆ. ಇಲ್ಲಿಗೆ ಬರುವ ಮುನ್ನ ಭಾರತಕ್ಕೆ ಸೇರಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮುದ್ರ ಭಾಗದ ಮೂಲಕ ಹಡಗುಗಳು ಸಾಗಿಹೋಗಬೇಕು. ಅವಶ್ಯಕತೆ ಬಿದ್ದರೆ ಭಾರತ ಈ ಹಡಗುಗಳು ಮಲಕಾ ಸ್ಟ್ರೇಟ್​ಗೆ ಹೋಗುವ ಮುನ್ನವೇ ಅಂಡಮಾನ್ ನಿಕೋಬಾರ್ ಬಳಿ ತಡೆಯಬಹುದು ಎಂಬುದು ವಿವೇಕ್ ರಾಮಸ್ವಾಮಿ ಅವರ ತಂತ್ರ.

ರಿಪಬ್ಲಿಕನ್ ಪಕ್ಷದ ನಾಯಕರು ಬಹುತೇಕ ಭಾರತದ ಪರವಾದ ನಿಲುವು ಹೊಂದಿದ್ದಾರೆ. ಹಾಗೆಯೇ, ಆಡಳಿತಾರೂಢ ಡೆಮಾಕ್ರಾಟ್ ಪಕ್ಷದ ನಾಯಕರೂ ಕೂಡ ಭಾರತದ ಪರವಾದ ನೀತಿ ಅನುಸರಿಸುತ್ತಿದ್ದಾರೆ. ಅಮೆರಿಕದ ವಿದೇಶಾಂಗ ಖಾತೆ ಸಹಾಯಕ ಸಚಿವ ಡೊನಾಲ್ಡ್ ಲು ಅವರು ಇತ್ತೀಚೆಗೆ ಭಾರತದ ಆರ್ಥಿಕತೆ ಬಗ್ಗೆ ಮಾತನಾಡುತ್ತಾ, ಅಮೆರಿಕಕ್ಕೆ ಆಗುವ ಲಾಭವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಮಾಮೂಲಿ ಅಕ್ಕಿ ಜೊತೆಗೆ ಬಾಸ್ಮತಿ ಅಕ್ಕಿ ರಫ್ತಿಗೂ ಕೇಂದ್ರದಿಂದ ನಿರ್ಬಂಧ; ಇಲ್ಲಿದೆ ಡೀಟೇಲ್ಸ್

‘ಭಾರತದ ಆರ್ಥಿಕತೆ ಬೆಳೆಯುವುದನ್ನು ನಾವು ಬೆಂಬಲಿಸುತ್ತೇನೆ. ಭಾರತ ಬೆಳೆದಷ್ಟೂ, ಅದಕ್ಕೆ ಲಾಭವಾಗುವುದರ ಜೊತೆಗೆ ಅಮೆರಿಕ ಹಾಗೂ ವಿಶ್ವಕ್ಕೆ ಲಾಭವಾಗುತ್ತದೆ. ಸಿರಿತನದ ಭಾರತವು ಜಾಗತಿಕ ಸಮಸ್ಯೆಗಳನ್ನು ನಿವಾರಿಸುವಷ್ಟು ಸಂಪನ್ಮೂಲ ಹೊಂದಿರುತ್ತದೆ’ ಎಂದು ಡೊನಾಲ್ಡ್ ಲು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Sun, 27 August 23

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ