ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗಿಲ್ಲ ಪ್ರವೇಶ: ಬೆಂಗಳೂರಿನ ಬ್ಯಾಚುಲರ್​ಗಳಿಗೆ ತಲೆಬಿಸಿಯಾದ ಬಾಡಿಗೆ ಮನೆ ನಿಯಮ

ಬ್ಯಾಚುಲರ್​​ಗಳು ಮತ್ತು ಸ್ಪಿನ್‌ಸ್ಟರ್‌ಗಳು ಬಾಡಿಗೆಗೆ ಪಡೆದಿರುವ ಫ್ಲ್ಯಾಟ್​ಗಳಲ್ಲಿ ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂಬ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗಿಲ್ಲ ಪ್ರವೇಶ: ಬೆಂಗಳೂರಿನ ಬ್ಯಾಚುಲರ್​ಗಳಿಗೆ ತಲೆಬಿಸಿಯಾದ ಬಾಡಿಗೆ ಮನೆ ನಿಯಮ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 27, 2023 | 9:00 PM

ಬೆಂಗಳೂರು: ಬ್ಯಾಚುಲರ್​​ಗಳು (Bachelors) ಮತ್ತು ಅವಿವಾಹಿತ ಮಹಿಳೆಯರು ಬಾಡಿಗೆಗೆ ಪಡೆದಿರುವ ಫ್ಲ್ಯಾಟ್​ಗಳಲ್ಲಿ ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂಬ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ನಗರದ ಹೌಸಿಂಗ್ ಸೊಸೈಟಿಯೊಂದು ಹೊರಡಿಸಿರುವ ಈ ಹೊಸ ಮಾರ್ಗಸೂಚಿಯೂ ನೆಟಿಗರನ್ನು ಕೆರಳಿಸುವಂತೆ ಮಾಡಿದೆ. ಈ ಕುರಿತಾಗಿ ಬ್ಯಾಚುಲರ್​ಗಳಿಗೆ ಬೆಂಗಳೂರು ಅಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ಬಾಡಿಗೆ ಬಳಕೆದಾರರೊಬ್ಬರು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಹೌಸಿಂಗ್ ಸೊಸೈಟಿ ಹೊರಡಿಸಿದ ಮಾರ್ಗಸೂಚಿಯನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ಆಗಿದೆ. ಭಾರತದಲ್ಲಿ ಅತಿಥಿ ದೇವೋ ಭವ ಎಂಬ ಪರಿಕಲ್ಪನ ಇದೆ. ಅಥಿತಿಗಳನ್ನು ಮನೆಗೆ ಆಹ್ವಾನ ನೀಡುವುದರ ಹೊರತಾಗಿ, ರಾತ್ರಿ ವೇಳೆಯಲ್ಲಿ ತಂಗಲು ಅನುಮತಿ ಇಲ್ಲ. ಹಾಗೂ ಒಂದು ವೇಳೆ ಇರಲೇಬೇಕಾದ ಪರಿಸ್ಥಿತಿ ಬಂದರೆ ಅತಿಥಿಗಳು ತಮ್ಮ ಗುರುತಿನ ಪುರಾವೆಗಳನ್ನು ನೀಡುವ ಮೂಲಕ ಮ್ಯಾನೇಜರ್ ಅಥವಾ ಅಸೋಸಿಯೇಷನ್ ಕಚೇರಿಯಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಉಲ್ಲಂಘಿಸುವವರಿಗೆ 1,000 ರೂ.ಗಳ ದಂಡ ಅಥವಾ ಮನೆಯಿಂದ ಹೊರಹಾಕಲಾಗುವುದು. ರಾತ್ರಿ 10 ಗಂಟೆಯ ನಂತರ ಜೋರಾಗಿ ಹಾಡು ಹಾಕುವಂತ್ತಿಲ್ಲ. ತಡರಾತ್ರಿವರೆಗೂ ಪಾರ್ಟಿಗಳನ್ನು ಮಾಡಬಾರದು ಮತ್ತು ರಾತ್ರಿ 10 ಗಂಟೆಯ ನಂತರ ಫೋನ್ ಕರೆಗಳಿಗೆ ಕಾರಿಡಾರ್ ಮತ್ತು ಬಾಲ್ಕನಿಗಳನ್ನು ಬಳಸಬಾರದು ಎಂದು ಕೆಲ ಸಾಮಾನ್ಯ ಮಾರ್ಗಸೂಚಿಗಳನ್ನು ಸೊಸೈಟಿ ಉಲ್ಲೇಖಿಸಿದೆ.

ಇದನ್ನೂ ಓದಿ: BS Yediyurappa: ಏಕಾಏಕಿ ಕಲ್ಲು ತೂರಾಟದಿಂದ ನನಗೆ ನೋವಾಗಿದೆ: ಬಿಎಸ್ ಯಡಿಯೂರಪ್ಪ

ಇದು ಹಾಸ್ಟೆಲ್‌ ನಿಯಮಗಳಿಗಿಂತ ಕೆಟ್ಟದಾಗಿದೆ. ನೀವು ಫ್ಲಾಟ್​ನ್ನು ಬಾಡಿಗೆಗೆ ನೀಡಲು ಹಣವನ್ನು ಪಾವತಿಸುತ್ತಿದ್ದೀರಿ. ಒಪ್ಪಂದಗಳ ಪ್ರಕಾರ ನೀವು ಬಾಡಿಗೆಗೆ ನೀಡುತ್ತಿರುವ ಅವಧಿಯವರೆಗೂ ಇದು ನಿಮ್ಮ ಫ್ಲಾಟ್ ಆಗಿರುತ್ತದೆ. ನಿಮ್ಮ ಫ್ಲಾಟ್‌ಗೆ ಯಾರು ಬರುತ್ತಾರೆ, ಹೋಗುತ್ತಾರೆ ಮತ್ತು ನೀವು ಬಾಲ್ಕನಿಯಲ್ಲಿ ಏನು ಮಾಡುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮಗೆ ಬಿಟ್ಟದ್ದು. ಇತ್ತೀಚಿನ ದಿನಗಳಲ್ಲಿ ಹೌಸಿಂಗ್ ಸೊಸೈಟಿಯ  ನಿಯಮಗಳು ತುಂಬಾ ಹಾಸ್ಯಾಸ್ಪದವಾಗುತ್ತಿವೆ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

ಮೊದಲನೇಯ ನಿಯಮವು ಬ್ಯಾಚುಲರ್​ಗಳಿಗೆ ತುಚ್ಛವಾಗಿದೆ. ರಾತ್ರಿ 10 ಗಂಟೆಯ ನಂತರ ಬಾಲ್ಕನಿಗಳಲ್ಲಿ ಅಥವಾ ಸಾಮಾನ್ಯ ಪ್ರದೇಶದಲ್ಲಿ ಯಾವುದೇ ಕರೆಗಳಿಲ್ಲ, ಇದು ಸಾಮಾನ್ಯ ನಿಯಮಗಳಂತೆ ತೋರಿದರು ಬೆಂಬಲಿಸಬಹುದಾಗಿದೆ. ಆದರೆ ಜನರು ಎಷ್ಟು ಜೋರಾಗಿ ಮಾತನಾಡುತ್ತಾರೆ ಎಂಬುವುದು ಅವರಿಗೆ ಬಿಟ್ಟದ್ದು ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾನೆ.

ಇದನ್ನೂ ಓದಿ: ಹಾಸನ ಜೆಡಿಎಸ್ ಪ್ರಚಾರ ಪುಸ್ತಕದಲ್ಲಿ ಭವಾನಿ ರೇವಣ್ಣ ಫೋಟೊ; ಹೆಚ್​ಡಿ ರೇವಣ್ಣ ಹೇಳಿದ್ದೇನು?

ಅದಕ್ಕಾಗಿಯೇ ನಾನು ಹೌಸಿಂಗ್ ಸೊಸೈಟಿಗಳನ್ನು ದ್ವೇಷಿಸುತ್ತೇನೆ. ಕೇವಲ 3-5 ಅಂತಸ್ತಿನ ಕಟ್ಟಡಗಳು ವಾಸಕ್ಕೆ ಅತ್ಯುತ್ತಮವಾಗಿವೆ. ಈ ಸೊಸೈಟಿಗಳಿಗೆ ಹೋಲಿಸಿದರೆ ಇಲ್ಲಿ ಬಾಡಿಗೆಯೂ ಕಡಿಮೆ. ಇದು ಕರುಣಾಜನಕವಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.

ಇವು ಹೌಸಿಂಗ್ ಸೊಸೈಟಿಗಳ ಸಾಮಾನ್ಯ ನಿಯಮಗಳಾಗಿದ್ದು, ಒಂದು ಅವರ ಜೊತೆ ಬದುಕಿ ಅಥವಾ ಅಲ್ಲಿಂದ ಆಚೆ ಬನ್ನಿ. ಜನರು ತೊಂದರೆಗಳನ್ನು ಸೃಷ್ಟಿಸುವುದನ್ನು ನಾನು ನೋಡಿದ್ದೇನೆ. ಅದು ವ್ಯಕ್ತಿಯ ಅನುಭವವನ್ನು ಅವಲಂಬಿಸಿಲ್ಲ. ಜನರು ವಿಶ್ರಾಂತಿಯಿಂದ ಬದುಕಲು ಬಯಸುತ್ತಾರೆ. ಯಾರೂ ತಲೆಕಡೆಸಿಕೊಳ್ಳುವುದಿಲ್ಲ ಹಾಗಾಗಿಯೇ ಅವರು ನಿಯಮಗಳನ್ನು ಮಾಡಿದ್ದಾರೆ ಎಂದು ಇನ್ನೊಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:55 pm, Mon, 27 March 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ