AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಯುವಕನನ್ನು ಸುಲಿಗೆ ಮಾಡಿದ್ದ ಹನಿಟ್ರ್ಯಾಪ್​ ಗ್ಯಾಂಗ್​ ಅರೆಸ್ಟ್​: ಆರೋಪಿಗಳಿಂದ ಚಿನ್ನದ ಸರ, iPhone ವಶ

ಹನಿಟ್ರ್ಯಾಪ್ ಮುಖಾಂತರ​ ಯುವಕನನ್ನು ಸಲಿಗೆ ಮಾಡಿದ್ದ ಗ್ಯಾಂಗ್​​ ಅನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಯುವಕನನ್ನು ಸುಲಿಗೆ ಮಾಡಿದ್ದ ಹನಿಟ್ರ್ಯಾಪ್​ ಗ್ಯಾಂಗ್​ ಅರೆಸ್ಟ್​: ಆರೋಪಿಗಳಿಂದ ಚಿನ್ನದ ಸರ, iPhone ವಶ
ಬಂಧಿತ ಆರೋಪಿಗಳು
ವಿವೇಕ ಬಿರಾದಾರ
|

Updated on: Mar 27, 2023 | 10:34 PM

Share

ಆನೇಕಲ್: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹನಿಟ್ರ್ಯಾಪ್​ ಪ್ರಕರಣಗಳು ಹೆಚ್ಚುತ್ತಿವೆ. ಹನಿಟ್ರ್ಯಾಪ್ (Honeytrap) ಮುಖಾಂತರ​ ಯುವಕನನ್ನು ಸಲಿಗೆ ಮಾಡಿದ್ದ ಗ್ಯಾಂಗ್​​ ಅನ್ನು ಬನ್ನೇರುಘಟ್ಟ ಪೊಲೀಸರು (Bannerghatta Police) ಬಂಧಿಸಿದ್ದಾರೆ. ರುತಿಕ್ ಅಲಿಯಾಸ್ ವಿಷ್ಣು, ಮೊ.‌ಆಸಿಫ್, ಯಾಸೀನ್ ಪಾಷಾ, ಸಮೀರ್, ಶಾಹಿದ್ ಅಲಿ ಬಂಧಿತ ಆರೋಪಿಗಳು. ರುತಿಕ್​ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಹೇಗೊ ಆಕೆಯ ಇನ್ಸಾಟ್​ಗ್ರಾಂ ಐಡಿ, ಪಾಸ್ವರ್ಡ್​​ ಪಡೆದಿದ್ದಾನೆ.

ನಂತರ ಆಕೆಯ ಐಡಿ ಮುಖಾಂತರ ಶಶಾಂಕ್‌ ಎಂಬ ಯುವಕನಿಗೆ ಮೆಸೆಜ್​ ಮಾಡಿದ್ದಾನೆ. ಹೀಗೆ ಮೆಸೆಜ್​ ಮಾಡುತ್ತಾ ದಿನಗಳು ಉರಿಳಿವೆ. ಅದು 2023ರ ಜನವರಿ 12, ರುತಿಕ್​ ಭೇಟಿಯಾಗು ಎಂದು ಶಶಾಂಕ್​ಗೆ ಮೆಸೆಜ್​ ಮಾಡಿದ್ದಾನೆ. ಮೀಟ್​ ಆಗಲು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಹಕ್ಕಿಪಿಕ್ಕಿ ಬಂಡೆ‌ ಬಳಿ ಬರುವಂತೆ ಹೇಳಿದ್ದಾನೆ.

ಇದನ್ನೂ ಓದಿ: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ ಉದ್ಯಮಿ, ದೂರು ದಾಖಲು

ಇದರಂತೆ ಶಶಾಂಕ್​ ಭೇಟಿಯಾಗಲು ಜೆಪಿ ನಗರದಿಂದ ಬಂದಿದ್ದನು. ಈ ವೇಳೆ ರುತಿಕ್​​, ಶಶಾಂಕ್​ನ್ನು ಭೇಟಿಯಾಗಲು ಯುವತಿಯನ್ನು ಕಳೆಸಿದ್ದಾನೆ. ಇಬ್ಬರೂ ಭೇಟಿಯಾಗುವ ಹೊತ್ತಲ್ಲಿ, ಹಿಂದೆಯೇ ಬಂದ ನಾಲ್ವಾರು ನೀವೇನು ಮಾಡುತ್ತಿದ್ದೀರಾ ಇಲ್ಲಿ ಅಂತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಶಶಾಂಕ್​ ಬಳಿ ಇದ್ದ ಚಿನ್ನದ ಸರ ಮತ್ತು ಐ ಫೋನ್ ಕಿತ್ತುಕೊಂಡು ಗ್ಯಾಂಗ್ ಪರಾರಿಯಾಗಿದ್ದಾರೆ. ದೂರು ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ಚಿನ್ನದ ಸರ ಹಾಗೂ ಐ ಫೋನ್ ವಶ ಪಡಿಸಿಕೊಂಡಿದ್ದಾರೆ.

ಬೇಗೂರು ಪೊಲೀಸರಿಂದ ಕುಖ್ಯಾತ ಹನಿಟ್ರ್ಯಾಪ್​ ಗ್ಯಾಂಗ್​​ ಅರೆಸ್ಟ್

ಇಬ್ಬರು ಮಹಿಳೆಯರು ಸೇರಿ ನಾಲ್ವರು ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್​ನ್ನು ಬೇಗೂರು ಪೊಲೀಸರು ಮಾರ್ಚ್​ 9 ರಂದು ಬಂಧಿಸಿದ್ದರು. ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತರು. ವೆಬ್​ಸೈಟ್ ಮೂಲಕ ಯುವತಿಯರ ಅರೆನಗ್ನ ಫೋಟೋ ಕಳಿಸಿ ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದರು. ಬಳಿಕ ಬೇಗೂರಿನ ಬಾಡಿಗೆ ಕೋಣೆಗೆ ಕರೆಸಿಕೊಳ್ಳುತ್ತಿದ್ದರು. ಅರೆನಗ್ನಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ದೂರುದಾರ ವ್ಯಕ್ತಿಗೆ 10 ಲಕ್ಷ ಹಣಕ್ಕೆ ಗ್ಯಾಂಗ್​ ಬೇಡಿಕೆಯಿಟ್ಟಿದ್ದು, 3 ಲಕ್ಷ ರೂ. ನೀಡಲು ಮುಂದಾಗಿದ್ದ ವ್ಯಕ್ತಿ ಟ್ರ್ಯಾಪ್ ಆಗಿದ್ದನು. ವ್ಯಕ್ತಿ ಓರ್ವನ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆ ಬೇಗೂರು ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಆರೋಪಿಗಳನ್ನು  ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್