ಜೈಲಿನಲ್ಲಿದ್ದುಕೊಂಡೇ ಹೆಂಡತಿ-ಮಕ್ಕಳಿಂದ ಗಾಂಜಾ ದಂಧೆ: 13 ಲಕ್ಷ ರೂ. ಮೌಲ್ಯದ ಗಾಂಜಾ ಜೊತೆ ಸಿಕ್ಕಿಬಿದ್ದ ಮಹಿಳೆ
ಪತಿ ಬಳಿಕ ಫೀಲ್ಡ್ಗೆ ಇಳಿದ ಪತ್ನಿ ಗಾಂಜಾ ಮಾರಾಟ ಮಾಡುವುದನ್ನು ಮುಂದುವರೆಸಿದ್ದಾಳೆ. ಗಾಂಜಾ ತರಲು ತನ್ನ ಮೂವರು ಮಕ್ಕಳೇ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ.
ಬೆಂಗಳೂರು: ಜೈಲಿನಲ್ಲಿ ಕೂತು ಕೊಂಡೇ ತನ್ನ ಹೆಂಡತಿ ಮಕ್ಕಳಿಂದ ಆರೋಪಿ ಗಾಂಜಾ ದಂಧೆ ಮುಂದುವರೆಸಿದ್ದು ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಗಾಂಜಾ ದಂಧೆಯಲ್ಲಿ ಒಂದು ತಿಂಗಳ ಹಿಂದೆ ಜೆಜೆ ನಗರ ಪೊಲೀಸರಿಂದ ಅರೆಸ್ಟ್ ಆಗಿ ಜೈಲು ಪಾಲಾಗಿದ್ದ ಮುಜ್ಜು ಎಂಬುವವನ ಹೆಂಡತಿ ನಗ್ಮಾ, ಗಾಂಜಾ ಸಾಗಿಸುವಾಗ ಕಲಾಸಿಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನೂ ಜೈಲಿಗಟ್ಟಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಪರಪ್ಪನ ಅಗ್ರಹಾರ ಸೇರಿದ್ದು ಮಕ್ಕಳು ಅನಾಥರಾಗಿದ್ದಾರೆ. ಈ ಗಂಡ-ಹೆಂಡತಿ ತಮ್ಮ ಚಿಕ್ಕ ಮಕ್ಕಳನ್ನೇ ಬಳಸಿಕೊಂಡಿ ಗಾಂಜಾ ದಂಧೆ ನಡೆಸುತ್ತಿದ್ದರು ಎಂಬುವುದು ಪತ್ತೆಯಾಗಿದೆ.
ಆರೋಪಿ ಮುಜ್ಜು ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದ. ಜೆಜೆ ನಗರ ಪೊಲೀಸರು ಆತನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದರು. ಪತಿ ಬಳಿಕ ಫೀಲ್ಡ್ಗೆ ಇಳಿದ ಪತ್ನಿ ಗಾಂಜಾ ಮಾರಾಟ ಮಾಡುವುದನ್ನು ಮುಂದುವರೆಸಿದ್ದಾಳೆ. ಗಾಂಜಾ ತರಲು ತನ್ನ ಮೂವರು ಮಕ್ಕಳೇ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ. 1,3,7 ವರ್ಷದ ಮೂವರು ಮಕ್ಕಳನ್ನು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಮಕ್ಕಳು, ತಾಯಿ ಜೊತೆ ಹೋಗಿ ಬ್ಯಾಗ್ನಲ್ಲಿ ಗಾಂಜಾ ತಂದು ಡೀಲ್ ಮಾಡುತ್ತಿದ್ದರು ಎಂದು ಮಾಹಿತಿ ಬಯಲಾಗಿದೆ. 26 ಕೆಜೆ ಗಾಂಜಾ ಜೊತೆಗೆ ಸಿಕ್ಕಿಬಿದ್ದ ಮಹಿಳೆಯನ್ನು ಕಲಾಸಿಪಾಳ್ಯ ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಸೈಬರ್ ಸೆಂಟರ್ಗೆ ಹೋಗಿ ಪಾನ್ ಮತ್ತು ಆಧಾರ್ ಲಿಂಕ್ ಮಾಡಿಸುವ ಮುನ್ನ ಇರಲಿ ಎಚ್ಚರ; ದಂಡದ ಹಣಕ್ಕಾಗಿ ನಡೆಯುತ್ತಿದೆ ಮಹಾ ಮೋಸ
ಈಕೆ ಗಾಂಜಾ ತರುತ್ತಿದ್ದಿದ್ದು ಎಲ್ಲಿಂದ?
ಆರೋಪಿ ನಗ್ಮಾ, ವಿಶಾಖಪಟ್ಟಣದಿಂದ ಗಾಂಜಾ ತರುತ್ತಿದ್ದಳು. ತಾಯಿ ತನ್ನ ಮೂವರು ಮಕ್ಕಳನ್ನು ತನ್ನ ಜೊತೆಗೆ ವಿಶಾಖಪಟ್ಟಣಂಗೆ ಕರೆದುಕೊಂಡು ಹೋಗ್ತಿದ್ದಳು. ಒಂದು ದಿನ ಅಲ್ಲೇ ರೂಂ ಮಾಡಿಕೊಂಡು ಇದ್ದು ಮರು ದಿನ ಚೀಲದಲ್ಲಿ ಗಾಂಜಾ ಸಮೇತ ಬೆಂಗಳೂರಿಗೆ ಬರ್ತಿದ್ದಳು. ಮಕ್ಕಳು, ಬ್ಯಾಗ್ ಇದ್ದರೆ ಯಾರೂ ಚೆಕ್ ಮಾಡೋದಿಲ್ಲ. ಕುಟುಂಬಸ್ಥರು ಹೋಗ್ತಿದ್ದಾರೆ ಅಂತಾ ಪೊಲೀಸರು ಸುಮ್ಮನಾಗ್ತಿದ್ರು. ಇದನ್ನೇ ಬಂಡವಾಳ ಮಾಡಿಕೊಂಡು ಬಸ್ ನಲ್ಲೆ ಗಾಂಜಾ ತರ್ತಿದ್ದಳು. ಬೆಂಗಳೂರಿಗೆ ಗಾಂಜಾ ತಂದು ಪರಿಚಯಸ್ಥರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಳು. ಇದೇ ರೀತಿ ವಿಶಾಖಪಟ್ಟಣದಿಂದ ಮಾರ್ಚ್ 20 ರಂದು ಗಾಂಜಾ ತಂದಿದ್ದಳು. ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್ ನಲ್ಲಿ ನಿಂತಿದ್ದಾಗ ಬ್ಯಾಗ್ ಜೊತೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತಳಿಂದ 13 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:34 am, Tue, 28 March 23