ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಮನೆ ಮೇಲೆ GST ಅಧಿಕಾರಿಗಳ ದಾಳಿ, ಮತ್ತೊಂದೆಡೆ ಎಸ್ಆರ್ ಪಾಟೀಲ್ ಭಾವಚಿತ್ರ ಇರುವ ಟೀಶರ್ಟ್, ವಾಲ್ ಕ್ಲಾಕ್ ಜಪ್ತಿ
ಮಾಜಿ ಸಚಿವ ರಾಮಲಿಂಗಾರೆಡ್ಡಿ ಷಡ್ಯಂತ್ರದಿಂದ ದಾಳಿ ನಡೆಸಿದ್ದಾರೆ ಎಂದು BTM ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ವಿರುದ್ಧ ಅನಿಲ್ ಶೆಟ್ಟಿ ಆರೋಪ ಮಾಡಿದ್ದಾರೆ.
ಬೆಂಗಳೂರು: ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಅವರ ಕೋರಮಂಗಲದಲ್ಲಿರುವ ಮನೆ ಮೇಲೆ GST ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮನೆಯಿಂದ 100 ಮೀಟರ್ ಅಂತರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಷಡ್ಯಂತ್ರದಿಂದ ದಾಳಿ ನಡೆಸಿದ್ದಾರೆ ಎಂದು BTM ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ವಿರುದ್ಧ ಅನಿಲ್ ಶೆಟ್ಟಿ ಆರೋಪ ಮಾಡಿದ್ದಾರೆ.
ರಾಮಲಿಂಗ ರೆಡ್ಡಿ ನೀಡಿರುವ ಕಳಪೆ ಕುಕ್ಕರ್ ಹಿನ್ನೆಲೆ ಈ ರೇಡ್ ನಡೆದಿದೆ. ಕಾನೂನನ್ನ ದುರುಪಯೋಗ ಮಾಡಲಾಗಿದೆ. ಅಕ್ರಮವಾಗಿ ನನ್ನ ಮನೆ ಪ್ರವೇಶ ಮಾಡಿದ್ದಾರೆ. ನಾನಿಲ್ಲದೆ ಇರುವಾಗ ನನ್ನ ಮನೆ ರೈಡ್ ಮಾಡಿದ್ದಾರೆ. ನಾನು ದೆಹಲಿಗೆ ಹೋಗಿದ್ದನ್ನ ನೋಡಿ ನಮ್ಮ ಮನೆಗೆ ಬಂದಿದ್ದಾರೆ. ಇದರ ಹಿಂದೆ ರಾಜಕೀಯದ ದೊಡ್ಡ ಷಡ್ಯಂತ್ರ ಇದೆ. ಕಳೆದ 35 ವರ್ಷಗಳಿಂದ ಇಲ್ಲಿ ದೌರ್ಜನ್ಯ ನಡಿತಾನೇ ಇದೆ. ಶಾಸಕ ರಾಮಲಿಂಗ ರೆಡ್ಡಿ ಬೇಕಂತ ರೈಡ್ ಮಾಡಿಸಿದ್ದಾರೆಂದು ಆರೋಪ ಅನಿಲ್ ಶೆಟ್ಟಿ ಆರೋಪಿಸಿದ್ದಾರೆ.
ನಮ್ಮ ಮನೆಯಲ್ಲಿ ಯಾವುದೇ ಒಂದು ವಸ್ತು ಅಕ್ರಮವಾಗಿ ಸಿಕ್ಕರೆ ನಾನು ರಾಜಕೀಯ ಬಿಡ್ತೀನಿ. ಕುಕ್ಕರ್ ವಿತರಣೆ ಮಾಡಿದ ಹಿನ್ನೆಲೆ ಅವರ ಮೇಲೆ FIR ಆಗುತ್ತೆ ಅಂತ ನನ್ನ ಮೇಲೆ ರೇಡ್ ಮಾಡಿಸಿದ್ದಾರೆ. ನಾವೆಲ್ಲರೂ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡುತ್ತೇವೆ. ರಾಮಲಿಂಗಾರೆಡ್ಡಿ ಅವರ ಅಧಿಕಾರ ಇವತ್ತಿಗೆ ಕೊನೆ ಆಗ್ಬೇಕು. ಅವರ ಕುಕ್ಕರ್ ಗಳನ್ನ ಹೊರಗೆ ತರ್ತೇನೆ FIR ಅವಾಗ ಹಾಕ್ಲಿ. ರಾಜಕೀಯ ಷಡ್ಯಂತ್ರಕ್ಕೆ ನನ್ನ ಮನೆ ಬಾಗಿಲನ್ನು ಒಡಿತೀನಿ ಅಂತಿದ್ದಾರೆ. ನಾನು ಡೆಲ್ಲಿಯಲ್ಲಿದ್ದಾಗ 1.30 ಗೆ ಕಾಲ್ ಬಂತು. ನಮ್ಮ ಮನೆಯಲ್ಲಿ ಒಳಗಡೆ ನೋಡ್ಬೇಕು ಅಂತ ಬಂದು ಅವರನ್ನ ತಳ್ಳಿ ಸರ್ಚ್ ಮಾಡಿದ್ದಾರೆ. ಯಾವುದೇ ವಾರೆಂಟ್ ಇಲ್ಲದೇ ಸರ್ಚ್ ಮಾಡಿದ್ದಾರೆ. ನಮ್ಮ ಮನೆ ಕೆಲಸದವರಿಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾರೆ. ನಮ್ಮನ್ನು ಹೆದರಿಸುವ ಕೆಲಸ ಮಾಡ್ತಿದಾರೆ. ಮುಖ್ಯಮಂತ್ರಿ ಅವರಿಗೂ ಈ ವಿಚಾರ ಗೊತ್ತಾಗಿದೆ. ಇದರ ಪ್ರೋಸೆಸ್ ನಮ್ಮೆಲ್ಲರಿಗೂ ಗೊತ್ತು ಪ್ರೊಸಿಜರ್ ಇಲ್ಲದೇ ಅವರು ಬಂದಿದ್ದು ತಪ್ಪು. ಯಾವುದೇ ಮಾಹಿತಿ ಇರ್ಲಿಲ್ಲ, ನಮ್ಮ ಮನೆಯಲ್ಲಿ 1000 ದೀಪ ಜೊತೆಗೆ ಬಿಲ್ ಇದೆ. ರಾಮಲಿಂಗರೆಡ್ಡಿ ಕೊಟ್ಟ ಕಳಪೆ ಕುಕ್ಕರ್ ನನ್ನ ಹತ್ತಿರ ಕೊಟ್ಟು ಹೋಗಿದ್ದಾರೆ. ರಾಮಲಿಂಗ ರೆಡ್ಡಿ ಅವರ ಭಯ ನಮ್ಮ ಜನರಿಗಿದೆ. ನಮಗೋಸ್ಕರ ಹೋರಾಟ ಮಾಡಿ ಅಂತ ನಮ್ಮ ಜನ ನನ್ನ ಬಳಿ ಕೊಟ್ಟಿದ್ದಾರೆ. ನಮ್ಮ ಮನೆಗೆ ಕುಕ್ಕರ್ ಬಾಂಬ್ ಅನ್ನ ಅವರಿಗೆ ತಲುಪಿಸಿ ಎಂದು ನಮ್ಮ ಜನ ಹೇಳಿದ್ದಾರೆ ಎಂದರು.
ಅಕ್ರಮವಾಗಿ ಸಂಗ್ರಹಿಸಿದ್ದ ಟೀಶರ್ಟ್ ಹಾಗೂ ವಾಲ್ ಕ್ಲಾಕ್ ಜಪ್ತಿ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಯರಗಲ್ ಮದರಿ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆಯ ಗೋದಾಮಿನಲ್ಲಿ ಅಕ್ರಮವಾಗಿ ಟೀಶರ್ಟ್ ಹಾಗೂ ವಿವಿಧ ವಸ್ತುಗಳನ್ನು ಸಂಗ್ರಹಿಸಲಾಗಿದ್ದು ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಯಾವುದೇ ಪರವಾನಿಗೆ ಪಡೆಯದೆ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಇಡಲಾಗಿರುವ ಟೀಶರ್ಟ್ ಹಾಗೂ ವಾಲ್ ಕ್ಲಾಕ್ ಪತ್ತೆ ಮಾಡಲಾಗಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ಆರ್ ಪಾಟೀಲ್ ಭಾವಚಿತ್ರ ಹೊಂದಿರುವ ಗೋಡೆ ಗಡಿಯಾರಗಳು ಪತ್ತೆಯಾಗಿವೆ. ಎಸ್ಆರ್ಪಿ ಗುರುತಿರುವ ಟಿ-ಶರ್ಟ್ ಗಳು ಸಿಕ್ಕಿವೆ. ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿಯೇ ಬಿಡು ಬಿಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:11 am, Tue, 28 March 23