ಇಡೀ ರಾತ್ರಿ ಮೊಬೈಲ್ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ, ಬೆಂಗಳೂರಿನಲ್ಲಿ ಇಡೀ ಮೊಬೈಲ್ ಅಂಗಡಿ ಭಸ್ಮ
ಇಡೀ ರಾತ್ರಿ ಮೊಬೈಲ್ ಚಾರ್ಜ್ ಇಟ್ಟಿದ್ದಕ್ಕೆ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿಯ ಕೆನ್ನಾಲಿಗೆಗೆ ಮೊಬೈಲ್ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
![ಇಡೀ ರಾತ್ರಿ ಮೊಬೈಲ್ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ, ಬೆಂಗಳೂರಿನಲ್ಲಿ ಇಡೀ ಮೊಬೈಲ್ ಅಂಗಡಿ ಭಸ್ಮ](https://images.tv9kannada.com/wp-content/uploads/2023/03/mobile-fire.jpg?w=1280)
ಬೆಂಗಳೂರು: ಇಡೀ ರಾತ್ರಿ ಮೊಬೈಲ್ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ. ಬೆಂಗಳೂರಿನಲ್ಲೊಂದು ಭಯಾನಕ ಘಟನೆ ಸಂಭವಿಸಿದೆ. ಇಡೀ ರಾತ್ರಿ ಮೊಬೈಲ್ ಚಾರ್ಜ್ ಇಟ್ಟಿದ್ದಕ್ಕೆ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿಯ ಕೆನ್ನಾಲಿಗೆಗೆ ಮೊಬೈಲ್ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಒಂದು ಮೊಬೈಲ್ ಫೋನ್, ನಿರ್ಲಕ್ಷ್ಯದಿಂದ ಇಡೀ ಮೊಬೈಲ್ ಅಂಗಡಿ ಸುಟ್ಟು ಹೋಗಿದೆ. ರಾತ್ರಿ ಮೊಬೈಲ್ ಚಾರ್ಜ್ಗೆ ಇಟ್ಟು ಬೆಳಗ್ಗೆ ನೋಡುವಷ್ಟುರಲ್ಲಿ ಭಾರೀ ಅನಾಹುತ ಸಂಭವಿಸಿದೆ. ಬೆಂಗಳೂರಿನ ವಿಜಯನಗರದಲ್ಲಿ ಬೆಳಗ್ಗೆ 7 ಗಂಟೆಗೆ ಘಟನೆ ನಡೆದಿದೆ. ಅಂಗಡಿ ಮಾಲೀಕ ರಾತ್ರಿ ಮೊಬೈಲ್ ಚಾರ್ಜ್ ಇಟ್ಟು ಮನೆಗೆ ಹೋಗಿದ್ದ. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಮಾಲೀಕನಿಗೆ ಶಾಕ್ ಆಗಿದೆ. ಶಾರ್ಟ್ಸರ್ಕ್ಯೂಟ್ನಿಂದ ಅಂಗಡಿ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಂಬ್ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್ಫೋನ್
ಇಂದು ಸ್ಮಾರ್ಟ್ಫೋನ್ಗಳನ್ನು ಬಳಸದಿರುವವರ ಸಂಖ್ಯೆ ತೀರಾ ಕಡಿಮೆ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್ಗಳು ಸಿಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಮೊಬೈಲ್ಗಳು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಇದರ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್ಫೋನ್ಗಳು ಸ್ಫೋಟಗೊಳ್ಳುವ (Mobile Blast) ಸಂಗತಿಗಳು ಕೂಡ ಹೆಚ್ಚುತ್ತಿದೆ. ಮೊಬೈಲ್ ಸ್ಪೋಟಗೊಂಡ ಸುದ್ದಿ ಇತ್ತೀಚಿನ ದಿನಗಳಲ್ಲಿ ವರದಿ ಆಗುತ್ತಲೇ ಇದೆ. ಇದರಿಂದ ಜೀವ ಹಾನಿ ಸಂಭವಿಸಿದ್ದೂ ಇದೆ. ಇತ್ತೀಚೆಗಷ್ಟೆ ಸ್ಯಾಮ್ಸಂಗ್ (Samsung), ಒನ್ಪ್ಲಸ್ ನಾರ್ಡ್ ಸ್ಮಾರ್ಟ್ಫೋನ್ಗಳು ಸ್ಪೋಟಗೊಂಡಿದ್ದು ಬಳಕೆದಾರರಲ್ಲಿ ಭಯ ಹುಟ್ಟಿಸಿತ್ತು. ಇದೀಗ ಶವೋಮಿ ಸರದಿ. ಶವೋಮಿ ಕಂಪನಿ 2021 ರಲ್ಲಿ ಬಿಡುಗಡೆ ಮಾಡಿದ್ದ ಶವೋಮಿ 11 ಲೈಟ್ ಎನ್ಇ 5ಜಿ (Xiaomi 11 Lite NE 5G) ಸ್ಮಾರ್ಟ್ಫೋನ್ ಬ್ಲಾಸ್ಟ್ ಆದ ಬಗ್ಗೆ ವರದಿ ಆಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:40 am, Tue, 28 March 23