Raksha Bandhan 2023: ಈ ಬಾರಿಯ ರಕ್ಷಾ ಬಂಧನಕ್ಕೆ ಬಂತು ಖಾದಿ ರಾಖಿ; ದೆಹಲಿಯಲ್ಲಿ ಅನಾವರಣ, ಏನಿದರ ವಿಶೇಷ?

ಖಾದಿ ರಾಖಿಗಳಲ್ಲಿ ತುಳಸಿ, ಟೊಮೇಟೊ, ಬದನೆ ಕಾಳುಗಳನ್ನು ಹಾಕಲಾಗಿದೆ. ಪರಿಣಾಮವಾಗಿ ಅವುಗಳನ್ನು ಬಿಸಾಡಿದಾಗ ಅದರಿಂದ ತುಳಸಿ, ಟೊಮೇಟೊ, ಬದನೆ ಗಿಡಗಳು ಉತ್ಪತ್ತಿಯಾಗಬಹುದು ಎಂಬ ಚಿಂತನೆಯಿಂದ ಇದನ್ನು ಸಿದ್ಧಪಡಿಸಲಾಗಿದೆ ಎಂದುಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾದ ಮನೋಜ್ ಕುಮಾರ್ ತಿಳಿಸಿದ್ದಾರೆ.

Raksha Bandhan 2023: ಈ ಬಾರಿಯ ರಕ್ಷಾ ಬಂಧನಕ್ಕೆ ಬಂತು ಖಾದಿ ರಾಖಿ; ದೆಹಲಿಯಲ್ಲಿ ಅನಾವರಣ, ಏನಿದರ ವಿಶೇಷ?
‘ಖಾದಿ ರಕ್ಷಾಸೂತ್ (ಖಾದಿ ರಕ್ಷಾ)' ಅನ್ನು ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಖಾದಿ ಭವನದಲ್ಲಿ ಬುಧವಾರ ಅನಾವರಣಗೊಳಿಸಲಾಯಿತು
Follow us
Ganapathi Sharma
|

Updated on:Aug 23, 2023 | 7:13 PM

ನವದೆಹಲಿ, ಆಗಸ್ಟ್ 23: ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಖಾದಿ ಕುಶಲಕರ್ಮಿ ಮಹಳೆಯರು ಕೈಯಲ್ಲೇ ತಯಾರಿಸಿದ ‘ಖಾದಿ ರಕ್ಷಾಸೂತ್ (ಖಾದಿ ರಕ್ಷಾ)’ (Khadi Raksha) ಅನ್ನು ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಖಾದಿ ಭವನದಲ್ಲಿ (Khadi Bhavan)  ಬುಧವಾರ ಅನಾವರಣಗೊಳಿಸಲಾಯಿತು. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾದ ಮನೋಜ್ ಕುಮಾರ್ ಅವರು ಖಾದಿ ರಕ್ಷೆಯನ್ನು ಅನಾವರಣಗೊಳಿಸಿದರು. ರಕ್ಷಾ ಬಂಧನಕ್ಕೆ (Raksha Bandhan 2023) ಕೆಲವೇ ದಿನಗಳಿರುವಾಗ ಖಾದಿ ರಾಖಿಯ ಅನಾವರಣವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2023 ರ ಆಗಸ್ಟ್ 7 ರಂದು ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ‘ರಾಷ್ಟ್ರೀಯ ಕೈಮಗ್ಗ ದಿನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ಹಬ್ಬಗಳಲ್ಲಿ ಹೆಚ್ಚು ಹೆಚ್ಚು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸಲು ದೇಶವಾಸಿಗಳಿಗೆ ಮನವಿ ಮಾಡಿದ್ದರು. ನಮ್ಮ ದುಡಿಯುವ ಕುಶಲಕರ್ಮಿಗಳಿಗೆ ಗರಿಷ್ಠ ಉದ್ಯೋಗ ಸಿಗಬೇಕು ಎಂಬ ಅವರ ಪ್ರೇರಣೆಯ ಮಾತುಗಳನ್ನು ಖಾದಿ ರಕ್ಷೆ ಅನಾವರಣಗೊಳಿಸುವ ಮೂಲಕ ಸಾಕಾರಗೊಳಿಸಲಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪ್ರಕಟಣೆ ತಿಳಿಸಿದೆ.

ಖಾದಿ ರಕ್ಷೆ ಅನಾವರಣಗೊಳಿಸಿ ಮಾತನಾಡಿದ ಮನೋಜ್ ಕುಮಾರ್, ‘ಖಾದಿ ರಕ್ಷಾಸೂತ್’ ವಿಶೇಷತೆ ಏನೆಂದರೆ, ಇದನ್ನು ಭಾರತದ ಗ್ರಾಮೀಣ ಭಾಗದ ಕಟ್ಟಿನ (ಚರಕದ ಸಹಾಯದಿಂದ) ಮಹಿಳೆಯರು ಸಿದ್ಧಪಡಿಸಿದ್ದಾರೆ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಮತ್ತು ಇದನ್ನು ತಯಾರಿಸಲು ಯಾವುದೇ ರಾಸಾಯನಿಕಗಳನ್ನು ಬಳಸಲಾಗಿಲ್ಲ. ಉದಾಹರಣೆಗೆ; ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಗ್ರಾಮೋದ್ಯೋಗಿಕ್ ವಿಕಾಸ್ ಸಂಸ್ಥಾನದ ರಾಖಿಯನ್ನು ದೇಸಿ ಹಸುವಿನ ಪವಿತ್ರ ಗೋಮಯದಿಂದ ತಯಾರಿಸಲಾಗುತ್ತದೆ ಎಂದು ತಿಳಿಸಿದರು.

ಖಾದಿ ರಾಖಿಗಳಲ್ಲಿ ತುಳಸಿ, ಟೊಮೇಟೊ, ಬದನೆ ಕಾಳುಗಳನ್ನು ಹಾಕಲಾಗಿದೆ. ಪರಿಣಾಮವಾಗಿ ಅವುಗಳನ್ನು ಬಿಸಾಡಿದಾಗ ಅದರಿಂದ ತುಳಸಿ, ಟೊಮೇಟೊ, ಬದನೆ ಗಿಡಗಳು ಉತ್ಪತ್ತಿಯಾಗಬಹುದು ಎಂಬ ಚಿಂತನೆಯಿಂದ ಇದನ್ನು ಸಿದ್ಧಪಡಿಸಲಾಗಿದೆ. ಇಂತಹ ಹತ್ತಾರು ಖಾದಿ ರಾಖಿಗಳು ದೆಹಲಿಯ ಖಾದಿ ಭವನದಲ್ಲಿ ಮಾರಾಟಕ್ಕೆ ಲಭ್ಯವಿವೆ. ದೇಶದ ವಿವಿಧ ರಾಜ್ಯಗಳಲ್ಲಿ ತಯಾರಾದ ‘ಖಾದಿ ರಕ್ಷಾಸೂತ್’ ದೆಹಲಿಯ ಕನ್ನಾಟ್ ಪ್ಲೇಸ್‌ನ ಖಾದಿ ಭವನದಲ್ಲಿ 20 ರಿಂದ 250 ರೂ. ವರೆಗೆ ವಿವಿಧ ದರದಲ್ಲಿ ಲಭ್ಯವಿದೆ.

ದೆಹಲಿಯ ಖಾದಿ ಭವನದಲ್ಲಿ ಮಾತನಾಡಿದ ಕೆವಿಐಸಿ ಅಧ್ಯಕ್ಷ ಮನೋಜ್ ಕುಮಾರ್, ಈ ವರ್ಷ ಖಾದಿ ರಕ್ಷಾಸೂತ್ ಅನ್ನು ಪ್ರಾಯೋಗಿಕವಾಗಿ ದೆಹಲಿಯ ಕನ್ನಾಟ್ ಪ್ಲೇಸ್‌ನ ಖಾದಿ ಭವನದಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ವರ್ಷ ಅಖಿಲ ಭಾರತ ಮಟ್ಟದಲ್ಲಿ ‘ಖಾದಿ ರಕ್ಷಾಸೂತ್’ ಆರಂಭಿಸಲು ಸಿದ್ಧತೆ ನಡೆದಿದೆ. ಭಾರತದ ರಾಷ್ಟ್ರೀಯ ಪರಂಪರೆಯಾದ ಖಾದಿಯಿಂದ ತಯಾರಿಸಿದ ‘ಖಾದಿ ರಕ್ಷಾಸೂತ’ವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವುದಲ್ಲದೆ, ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಅವರು ಜನರಿಗೆ ಮನವಿ ಮಾಡಿದರು.

ಇದನ್ನೂ ಓದಿ: Raksha Bandhan 2023: ರಕ್ಷಾ ಬಂಧನ ಹಬ್ಬದ ನಿಖರವಾದ ದಿನಾಂಕ ಯಾವುದು? ರಕ್ಷೆ ಕಟ್ಟುವ ಶುಭ ಮುಹೂರ್ತ ಯಾವಾಗ?

ನಮ್ಮ ರಾಷ್ಟ್ರೀಯ ಪರಂಪರೆಯ ಪ್ರತೀಕವಾದ ಖಾದಿಯು ಭಾರತದ ರಾಷ್ಟ್ರೀಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ 9 ವರ್ಷಗಳಲ್ಲಿ ಖಾದಿ ತನ್ನ ‘ಸುವರ್ಣಯುಗ’ವನ್ನು ಕಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ವ್ಯವಹಾರ 1.34 ಲಕ್ಷ ಕೋಟಿ ರೂ. ಆಗಿತ್ತು. ಅಲ್ಲದೆ, ಈ ಆರ್ಥಿಕ ವರ್ಷದಲ್ಲಿ ಖಾದಿ 9.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಖಾದಿಯ ಈ ಹೊಸ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಅವರು ‘ಹೊಸ ಭಾರತದ ಹೊಸ ಖಾದಿ’ಯನ್ನು ಬಟ್ಟೆಯ ಜೊತೆಗೆ ‘ಆಯುಧ’ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ಅವರು ಹೇಳಿದರು. ಇವು ಬಡತನ ನಿರ್ಮೂಲನೆ, ಕುಶಲಕರ್ಮಿಗಳ ಸಬಲೀಕರಣ, ಆಹಾರ ಭದ್ರತೆ, ಮಹಿಳಾ ಸಬಲೀಕರಣ ಮತ್ತು ನಿರುದ್ಯೋಗ ನಿರ್ಮೂಲನೆ ವಿರುದ್ಧದ ಅಸ್ತ್ರಗಳಾಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Pakistan Rakhi Sister :ಅಣ್ಣಯ್ಯ ಪ್ರಧಾನಿ ಮೋದಿ ಭದ್ರತೆ ಬಯಸಿ 31ನೇ ಬಾರಿಗೆ ರಾಖಿ ಕಟ್ಟಲಿರುವ ಪಾಕ್ ತಂಗಿ!

2014 ರಿಂದ ಮೋದಿ ಅವರ ಅತ್ಯಂತ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನ ಆರಂಭಿಕ ಹಂತಗಳಲ್ಲಿ, ಅವರು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸಲು ದೇಶವಾಸಿಗಳನ್ನು ಒತ್ತಾಯಿಸಿದ್ದಾರೆ. ಅದರ ಪರಿಣಾಮ 2013-14ನೇ ಆರ್ಥಿಕ ವರ್ಷಕ್ಕೂ ಮುನ್ನವೇ ನಶಿಸುತ್ತಿದ್ದ ಖಾದಿಗೆ ನಂತರ ಹೊಸ ಜೀವ ಬಂದಿದೆ. ಗ್ರಾಮೀಣ ಕುಶಲಕರ್ಮಿಗಳ ಕೌಶಲಕ್ಕೆ ಈಗ ಗೌರವ ಸಿಗುವುದಲ್ಲದೆ ಅವರ ಕೆಲಸಕ್ಕೆ ತಕ್ಕ ಬೆಲೆಯೂ ಸಿಗುತ್ತಿದೆ. ಅದೇ ಕ್ರಮದಲ್ಲಿ ಕುಶಲಕರ್ಮಿಗಳ ಕೈಗೆ ಹೆಚ್ಚಿನ ಹಣ ನೀಡಲು ಕೆವಿಐಸಿ ‘ಖಾದಿ ರಕ್ಷಾಸೂತ್’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬಾರಿ ರಕ್ಷಾಬಂಧನದ ಸುಸಂದರ್ಭದಲ್ಲಿ ನೀವೂ ಕೂಡ ಖಾದಿಯಿಂದ ಮಾಡಿದ ರಕ್ಷಾಸೂತ್ರವನ್ನು ಮಣಿಕಟ್ಟಿನ ಮೇಲೆ ಕಟ್ಟಿಕೊಂಡು ರಕ್ಷಾಬಂಧನ ಹಬ್ಬವನ್ನು ಆಚರಿಸುವುದು ಮಾತ್ರವಲ್ಲದೆ ಭಾರತದ ಗ್ರಾಮೀಣ ಪ್ರದೇಶದ ಮಹಿಳಾ ಕುಶಲಕರ್ಮಿಗಳ ಮುಖದಲ್ಲಿ ಹೊಸ ನಗುವನ್ನು ಮೂಡಿಸಬೇಕು ಎಂದು ಅವರು ಮನವಿ ಮಾಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:02 pm, Wed, 23 August 23

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ