Viral Video: ಬಚ್ನಾ ಏ ಹಸೀನೋ; ಅಬ್ಬಾ ಎಂಥಾ ಶಕ್ತಿ! ಅಮ್ಮ ಮಗಳ ನೃತ್ಯ ನೋಡಿದ ನೆಟ್ಟಿಗರ ಅಚ್ಚರಿ

Dance: ಮಗಳು ವಯೋಸಹಜವಾಗಿ ನರ್ತಿಸಿದ್ದಾಳೆ. ಆದರೆ ಅಮ್ಮನ ಶಕ್ತಿ, ನೃತ್ಯದ ಬಳಕು, ಉತ್ಸಾಹ ಮಾತ್ರ ವಿಶೇಷವಾಗಿದೆ. ನೆಟ್ಟಿಗರು ಈ ಅಮ್ಮ ಮಗಳ ಜೋಡಿಯ ನೃತ್ಯವನ್ನು ನೋಡಿ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ದಯವಿಟ್ಟು ಆದಿವಾಸಿಗಳ ನೃತ್ಯವನ್ನೂ ಮಾಡಿ ಎಂದು ಕೋರಿಕೆ ಸಲ್ಲಿಸುತ್ತಿದ್ದಾರೆ. ಈ ದಿನಕ್ಕೆ ಉತ್ಸಾಹವನ್ನು ತುಂಬಿದ ಇವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

Viral Video: ಬಚ್ನಾ ಏ ಹಸೀನೋ; ಅಬ್ಬಾ ಎಂಥಾ ಶಕ್ತಿ! ಅಮ್ಮ ಮಗಳ ನೃತ್ಯ ನೋಡಿದ ನೆಟ್ಟಿಗರ ಅಚ್ಚರಿ
ಬಚ್ನಾ ಏ ಹಸೀ ಹಿಂದೀ ಟ್ರ್ಯಾಕ್​​ಗೆ ನರ್ತಿಸುತ್ತಿರುವ ಅಮ್ಮ ಮಗಳು
Follow us
ಶ್ರೀದೇವಿ ಕಳಸದ
|

Updated on:Aug 30, 2023 | 10:38 AM

Mother and Daughter: ನೃತ್ಯ ನಮ್ಮ ಮನಸ್ಸು ದೇಹವನ್ನು ತಣಿಸುತ್ತದೆ. ಆಹ್ಲಾದಕರ ಅನುಭವವನ್ನು ನೀಡುತ್ತದೆ. ನಿತ್ಯದ ಜಂಜಾಟಗಳಿಂದ ಮುಕ್ತಿ ಪಡೆಯಲು ಈಗಲೂ ಎಷ್ಟೋ ಮನೆಗಳಲ್ಲಿ ಮನೆಮಂದಿ ನರ್ತಿಸುವ ಅಭ್ಯಾಸವನ್ನಿಟ್ಟುಕೊಂಡಿದ್ದಾರೆ. ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ (Social Media) ಹಾಕುತ್ತಾರೆ ಇನ್ನೂ ಕೆಲವರು ತಮ್ಮ ಪಾಡಿಗೆ. ಇದೀಗ ವೈರಲ್ ಆಗಿರುವ ತಾಯಿ ಮಗಳು ಜೊತೆಯಾಗಿ ನರ್ತಿಸಿದ ವಿಡಿಯೋ ನೋಡಿ. ಬಚ್ನಾ ಏ ಹಸೀನೋ (Bachna Ey Haseeno) ಹಿಂದಿ ಟ್ರ್ಯಾಕ್​ಗೆ ಇವರು ಆಕರ್ಷಕವಾಗಿ ನರ್ತಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಯನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral: ಬೆಂಗಳೂರು; ಎಸ್​ಎಸ್​ಎಲ್​ಸಿ ಮುಗಿಸಿ 38 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆಯಲಿರುವ ಆಟೋ ಚಾಲಕ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ Mom Daughter Dance ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅನ್ನು ನಿನ್ನೆ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು ಒಂದು ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 8,000 ಜನರು ಲೈಕ್ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ಅನ್ನು ನೋಡಿ ಖುಷಿಯಿಂದ ಸ್ಪಂದಿಸುತ್ತಿದ್ದಾರೆ.

ಅಮ್ಮ ಮಗಳ ನೃತ್ಯ ನೋಡಿ

ತುಂಬಾ ಚೆನ್ನಾಗಿ ನರ್ತಿಸಿದ್ದೀರಿ, ದಯವಿಟ್ಟು ಆದಿವಾಸಿಗಳ ಡ್ಯಾನ್ಸ್ ಮಾಡಿ ಎಂದಿದ್ದಾರೆ ಒಬ್ಬರು. ಆಂಟೀ ದಪ್ಪಗಿದ್ದರೂ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ಅಮ್ಮನ ಎನರ್ಜಿ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು. ಅಮ್ಮನಿಗೆ ಮಗಳು ಸ್ಫೂರ್ತಿಯೋ, ಮಗಳಿಗೆ ಅಮ್ಮ ಸ್ಫೂರ್ತಿಯೋ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: ಗಣಿತ ಪರೀಕ್ಷೆಯಲ್ಲಿ ಸೊನ್ನೆ ಪಡೆದ ಮಗಳು; ಇಂಥ ಅಂಕ ಗಳಿಸಲು ತುಂಬಾ ಧೈರ್ಯ ಬೇಕು ಎಂದ ತಾಯಿ

ಆಂಟೀ ಮನಸ್ಸಿನಿಂದ ತಾವಿನ್ನೂ 20 ವರ್ಷದ ಹುಡುಗಿ ಎಂದೇ ಭಾವಿಸಿರಬೇಕು, ಹೀಗೆ ಯೋಚಿಸಿ ಬದುಕುವುದು ಬಹಳ ಒಳ್ಳೆಯದು. ಅದಕ್ಕಾಗಿಯೇ ಅವರು ಇಷ್ಟು ಸಲೀಸಾಗಿ ನರ್ತಿಸಲು ಸಾಧ್ಯವಾಗಿದೆ ಎಂದಿದ್ದಾರೆ ಒಬ್ಬರು. ಅಂತೂ ನೆಟ್ಟಿಗರು ಈ ಅಮ್ಮ ಮಗಳ ಶಕ್ತಿ ಮತ್ತುಉತ್ಸಾಹ ನೋಡಿ ಖುಷಿಗೊಂಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:22 am, Wed, 30 August 23