Viral: ಬೆಂಗಳೂರು; ಎಸ್ಎಸ್ಎಲ್ಸಿ ಮುಗಿಸಿ 38 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆಯಲಿರುವ ಆಟೋ ಚಾಲಕ
Inspirational : ವ್ಯವಸ್ಥೆ ಸರಿ ಇಲ್ಲ, ಸರ್ಕಾರ ಸರಿ ಇಲ್ಲ ಎಂದು ದೂರುವ ಮೊದಲು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಕಲಿಯಬೇಕು. ತಮ್ಮೊಳಗಿನ ಕೊರತೆಯನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಬೆಂಗಳೂರಿನ ಆಟೋ ಚಾಲಕ ಭಾಸ್ಕರ್ 3 ಮತ್ತು 6ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ತಂದೆ. 38 ವರ್ಷಗಳ ನಂತರ ಅವರೀಗ ಮತ್ತೆ ವಿದ್ಯಾರ್ಥಿ!
Bengaluru: ಎಸ್ಎಸ್ಎಲ್ಸಿ ಮುಗಿಸಿ 38 ವರ್ಷಗಳ ನಂತರ ಆಟೋ ಚಾಲಕರೊಬ್ಬರು (Auto Driver) ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ಈ ವಿಷಯವನ್ನು ನಿಧಿ ಅಗರ್ವಾಲ್ ಎನ್ನುವವರು X ನಲ್ಲಿ ಬಹಿರಂಗಪಡಿಸಿದ್ದಾರೆ; ‘ಇಂದು ಆಟೋದಲ್ಲಿ ಹೋಗುತ್ತಿದ್ದಾಗ ಚಾಲಕ ಭಾಸ್ಕರ್ ಅವರೊಂದಿಗೆ ಮಾತಿಗಿಳಿದೆ. ಅವರು ಈವತ್ತಷ್ಟೇ ಪಿಯುಸಿ, ಇಂಗ್ಲಿಷ್ ಪರೀಕ್ಷೆ ಬರೆದೆನೆಂದು ಹೇಳಿದರು. 1985ರಲ್ಲಿ ಶಾಲೆಯನ್ನು ಬಿಟ್ಟಿದ್ದ ಅವರು ಈ ವರ್ಷ ಪಿಯುಸಿ ಪರೀಕ್ಷೆ ಬರೆಯುವುದಾಗಿ ಹೇಳಿದ್ದಾರೆ’. ಇಬ್ಬರು ಮಕ್ಕಳ ತಂದೆಯಾಗಿರುವ ಭಾಸ್ಕರ್ ಇದೀಗ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮನಸ್ಸು ಮಾಡಿದ್ದಾರೆ. ಇವರ ಮಕ್ಕಳು 3 ಮತ್ತು 6ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಇದನ್ನೂ ಓದಿ : Viral: ಗಣಿತ ಪರೀಕ್ಷೆಯಲ್ಲಿ ಸೊನ್ನೆ ಪಡೆದ ಮಗಳು; ಇಂಥ ಅಂಕ ಗಳಿಸಲು ತುಂಬಾ ಧೈರ್ಯ ಬೇಕು ಎಂದ ತಾಯಿ
ಈ ಪೋಸ್ಟ್ ಅನ್ನು ಆ. 26ರಂದು ಪೋಸ್ಟ್ ಮಾಡಲಾಗಿದೆ. 1,500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಮಾಧ್ಯಮದವರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿ ಈ ಆಟೋಚಾಲಕರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿತ್ತು, ದಯವಿಟ್ಟು ಒದಗಿಸುವಿರಾ? ಎಂದು ನಿಧಿ ಅವರಿಗೆ ಕೇಳಿದ್ದಾರೆ.
ಓದಲು ಮನಸ್ಸಿದ್ದರೆ ವಯಸ್ಸು ಯಾವತ್ತೂ ಅಡ್ಡಿಯಲ್ಲ!
“Introducing Baskar ji, my @Olacabs auto companion today. He faced his English paper today, he is writing PUC exams this year after cleaning 10th in 1985. Father of two, with kids in 3rd and 6th grade. His enduring smile was truly motivating! @peakbengaluru pic.twitter.com/5R21YtdomZ
— Nidhi Agarwal (@Ngarwalnidhi) August 26, 2023
ಈ ಹಿಂದೆ, ಬೆಂಗಳೂರಿನ ಆಟೋ ಚಾಲಕರೊಬ್ಬರು ಆರು ಗಂಟೆಗಳ ಕಾಲ ಆಟೋ ಓಡಿಸಿದರೂ ರೂ. 40 ಕೂಲಿ ಪಡೆದೆ ಎಂದು ಹೇಳಿದ ವಿಡಿಯೋ ವೈರಲ್ ಆಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕರಿಗೆ ನೀಡಿದ ಉಚಿತ ಬಸ್ ಯೋಜನೆಯ ಪರಿಣಾಮ ಆಟೋಚಾಲಕರನ್ನು ಬೀದಿಗೆ ತಳ್ಳುತ್ತಿದೆ ಎಂದು ಆ ಚಾಲಕರು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆದರೆ ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವು ಪರಿವರ್ತಿಸಿಕೊಳ್ಳಬೇಕು. ನಮ್ಮಲ್ಲಿರುವ ಕೊರತೆಗಳನ್ನು ನೀಗಿಸಿಕೊಳ್ಳಲು ಪೂರಕವಾದ ವಿಧಾನ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:59 am, Tue, 29 August 23