ಕಾಲಾಯ ತಸ್ಮೈ ನಮಃ ATM ಕಾರ್ಡ್ ಗಾತ್ರದಲ್ಲಿ Wedding ಕಾರ್ಡ್!

Wedding card: ದಿವಂಗತ ಕಲಾವಿದರಾದ ಬಿಕೆಎಸ್ ವರ್ಮಾ ಅವರು ಡಾ. ರಾಜ್​ಕುಮಾರ್​​ ಅವರ ಪುತ್ರ ಪುನೀತ್​​ ರಾಜ್​ ಕುಮಾರ್​​ ಅವರ ಲಗ್ನ ಪತ್ರಿಕೆಯನ್ನು ಹೀಗೆಯೇ ನೂರಾರು ಪುಟಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದ್ದರು. ವಿಶೇಷ ಆಹ್ವಾನಿತರಿಗೆ ಆ ವೆಡ್ಡಿಂಗ್​ ಕಾರ್ಡ್​​ ಅಲ್ಲಲ್ಲ ವೆಡ್ಡಿಂಗ್​ ಪುಸ್ತಕವನ್ನು ಕೊಟ್ಟು ಆಹ್ವಾನಿಸಲಾಗಿತ್ತು. ಆದರೆ ಇಲ್ಲಿ ಹೇಳಕ್ಕೆ ಹೊರಟಿರುವುದು ಆಧುನಿಕ ಅಂತರ್ಜಾಲ ಜಗತ್ತಿನ ವಿಷಯವನ್ನು.

ಕಾಲಾಯ ತಸ್ಮೈ ನಮಃ  ATM ಕಾರ್ಡ್ ಗಾತ್ರದಲ್ಲಿ Wedding ಕಾರ್ಡ್!
ATM ಕಾರ್ಡ್ ಗಾತ್ರದಲ್ಲಿ Wedding ಕಾರ್ಡ್!
Follow us
ಸಾಧು ಶ್ರೀನಾಥ್​
|

Updated on: Aug 29, 2023 | 5:11 AM

ಮಾರ್ಟೇರು (ಪಶ್ಚಿಮ ಗೋದಾವರಿ ಜಿಲ್ಲೆ), ಆಗಸ್ಟ್ 29: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಮದುವೆ ಜರುಗುವುದು ಭೂಮಿಯ ಮೇಲಿನ ಸಂಪ್ರದಾಯಗಳು, ವಾಡಿಕೆಗಳು ಮತ್ತು ಆಚರಣೆಗಳ ಪ್ರಕಾರವೇ! ಆದರೆ ಕಾಲಕ್ಕೆ ತಕ್ಕಂತೆ ಜನರು ಬದಲಾಗುತ್ತಿರುವುದರಿಂದ ಮದುವೆ ಸಮಾರಂಭಗಳಲ್ಲಿ ಒಂದಲ್ಲ ಒಂದು ವಿಶಿಷ್ಟ ಶೈಲಿಯನ್ನು ತೋರಿಸುತ್ತಿದ್ದಾರೆ. ಆಕಾಶದೆತ್ತರದ ಚಪ್ಪರ ಹಾಕಿ ಬಹಳ ವಿಜೃಂಭಣೆಯಿಂದ ಮದುವೆ ಮಾಡಿದರಪ್ಪಾ ಎಂದು ಅದ್ಧೂರಿ ಮದುವೆಗಳ ಬಗ್ಗೆ ಜನ ಮಾತನಾಡಿಕೊಳ್ಳುವುದು ಉಂಟು. ಅಂದರೆ ಈ ಮದುವೆ ಅಚರಣೆಗೆ ಆಕಾಶವೇ ಮಿತಿ ಎನ್ನಬಹುದು. ಅಷ್ಟೊಂದು ಅಪಾರ ಅವಕಾಶಗಳು ಇವೆ ಮದುವೆಯನ್ನು ಧಾಂ ಧೂಂ ಅಂತಾ ಮಾಡುವವರಿಗೆ. ಇಲ್ಲೊಬ್ಬ ಮದುಮಗ ಶುಭಲೇಖಾ ಅಂದರೆ ಲಗ್ನಪತ್ರಿಕೆ (Wedding card) ವಿಷಯದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾನೆ.

ಸಾಮಾನ್ಯವಾಗಿ ಮದುವೆ ಆಹ್ವಾನ ಪತ್ರಿಕೆಯಲ್ಲಿ ಪುರಾಣ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಹೇಳುತ್ತಾ ದೊಡ್ಡ ಪುಸ್ತಕದ ಮಾದರಿಯಲ್ಲಿ ಇಡೀ ಕತೆಯನ್ನು ಹೇಳುತ್ತಾ, ವಧೂವರರ ಕುರಿತು ಹೇಳಿ ಆಹ್ವಾನ ಪತ್ರಿಕೆ ಮುದ್ರಿಸುವುದೂ ಉಂಟು. ದಿವಂಗತ ಕಲಾವಿದರಾದ ಬಿಕೆಎಸ್ ವರ್ಮಾ ಅವರು ಡಾ. ರಾಜ್​ಕುಮಾರ್​​ ಅವರ ಪುತ್ರ ಪುನೀತ್​​ ರಾಜ್​ ಕುಮಾರ್​​ ಅವರ ಲಗ್ನ ಪತ್ರಿಕೆಯನ್ನು ಹೀಗೆಯೇ ನೂರಾರು ಪುಟಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದ್ದರು. ವಿಶೇಷ ಆಹ್ವಾನಿತರಿಗೆ ಆ ವೆಡ್ಡಿಂಗ್​ ಕಾರ್ಡ್​​ ಅಲ್ಲಲ್ಲ ವೆಡ್ಡಿಂಗ್​ ಪುಸ್ತಕವನ್ನು ಕೊಟ್ಟು ಆಹ್ವಾನಿಸಲಾಗಿತ್ತು. ಆದರೆ ಇಲ್ಲಿ ಹೇಳಕ್ಕೆ ಹೊರಟಿರುವುದು ಆಧುನಿಕ ಅಂತರ್ಜಾಲ ಜಗತ್ತಿನ ವಿಷಯವನ್ನು. ಈಗೀಗ ಎಟಿಎಂ ಕಾರ್ಡ್​​ (ATM Card) ಬಂದು ಮಾನವನ ಇಡೀ ವ್ಯವಹಾರದ ಬದುಕನ್ನೇ ಬದಲಾಯಿಸಿಬಿಟ್ಟಿದೆ. ಎಟಿಎಂ ಕಾರ್ಡ್ ಮಹತ್ವ ಬಲ್ಲವರೇ ಬಲ್ಲರು. ಆದರೆ ಅದೂ ಈಗ ಬಂದಷ್ಟೇ ವೇಗವಾಗಿ ಪರದೆ ಹಿಂದಕ್ಕೆ ಸರಿಯುತ್ತಿದೆ. ಈಗೇನಿದ್ದರೂ ಜಗತ್ತು ಸ್ಮಾರ್ಟ್​​​ ಆಗಿ ಮೊಬೈಲ್ ಮಯವಾಗಿದೆ. ಎಲ್ಲವೂ ಅದರಲ್ಲೇ​ ಆಗಿಬಿಡುತ್ತಿದೆ.

Also read: ಇಟಲಿಗೆ ಹೋಗಿ ಮದುವೆ ಮಾಡಿಕೊಳ್ಳಬೇಕಿದ್ದ ವರ ಮಹಾಶಯನ ಪಾಸ್ ಪೋರ್ಟ್ ಅನ್ನು ಅಗಿದು ಜಗಿದು

ಇಲ್ಲೊಬ್ಬ ವರಮಹಾಶಯ (Bridegroom) ಏನು ಮಾಡಿದ್ದಾನೆ ಅಂದರೆ ನೀಟಾಗಿ ಚಿಕ್ಕದಾಗಿ ಚೊಕ್ಕದಾಗಿ ಏಟಿಎಂ ಕಾರ್ಡ್ ಗಾತ್ರದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಡಿಜಿಟಲ್​ ಪ್ರಿಂಟ್​ ಹಾಕಿಸಿದ್ದಾರೆ. ಇದರಲ್ಲಿ ಮದುವೆಯ ಸಮಯ, ದಿನಾಂಕ, ಸ್ಥಳ ಮತ್ತು ಎಲ್ಲಾ ವಿವರಗಳನ್ನು ತಿಳಿಯಲು, ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇರಬೇಕು. ಏಕೆಂದರೆ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಏಟಿಎಂ ಕಾರ್ಡ್ ಗಾತ್ರದಲ್ಲಿ QR ಕೋಡ್‌ನೊಂದಿಗೆ ಮುದ್ರಿಸಲಾದ ಈ ಮ್ಯಾಟ್ರಿಮೋನಿಯಲ್ ಮ್ಯಾಗಜೀನ್ ಈಗ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ವೈರಲ್ ಆಗಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಮಂತ್ರ ಮಂಡಲದ ಮಾರ್ಟೇರು ಗ್ರಾಮದ ಚಿರ್ಲಾ ಕೃಷ್ಣಾ ರೆಡ್ಡಿ ಮತ್ತು ಸಿರಿಶಾ ಅವರ ವಿವಾಹ ಇದೇ ಶನಿವಾರ ಸೆಪ್ಟೆಂಬರ್​ 2ರಂದು ನಡೆಯಲಿದೆ. ಇವರ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಕ್ಯೂಆರ್ ಕೋಡ್ ಇರುವ ಎಟಿಎಂ ಕಾರ್ಡ್ ಮುದ್ರಿಸಿ ಬಂಧು ಮಿತ್ರರಿಗೆ ಕಾರ್ಡ್ ನೀಡಿ ಆಹ್ವಾನಿಸಲಾಗಿದೆ. ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುವುದರಿಂದ ಅದನ್ನು ಸ್ಕ್ಯಾನ್ ಮಾಡಿ ಮದುವೆ ನಡೆಯುವ ಸ್ಥಳ, ಸುಮುಹೂರ್ತ, ಭೋಜನ, ಜೋಡಿಯ ವಿವಾಹಪೂರ್ವ ಫೋಟೋಗಳು ಹೀಗೆ ಹಲವು ವಿಷಯಗಳನ್ನು ಅದರಲ್ಲಿ ನೋಡಬಹುದಾಗಿದೆ. ಈ ಕಾರ್ಡ್ ಅನ್ನು ಬೆಂಗಳೂರಿನಲ್ಲಿ ಪ್ರಿಂಟ್ ಮಾಡಿಸಲಾಗಿದೆ ಎಂಬುದು ವಿಶೇಷ. 20 ದಿನಗಳಲ್ಲಿ ಬೆಂಗಳೂರಿನಲ್ಲಿಯೇ ಸಿದ್ಧಪಡಿಸಲಾಗಿದೆ ಎಂದು ವರನ ಸಹೋದರ ಸಂತೋಷ್ ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ