AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಪಹರಣಕಾರರಿಂದ ಶಾಲಾಬಾಲಕಿಯನ್ನು ರಕ್ಷಿಸಿದ ಬೀದಿನಾಯಿಯ ವಿಡಿಯೋ ವೈರಲ್

Kidnappers: ಬೀದಿನಾಯಿಗಳು ಹಾದುಹೋಗುವವರಿಗೆಲ್ಲ ಬೊಗಳುತ್ತವೆ, ಕಚ್ಚುತ್ತವೆ, ಬೆನ್ನಟ್ಟುತ್ತವೆ ಅಂತೆಲ್ಲ ಬಯ್ಯುವವರೆಲ್ಲ ಒಮ್ಮೆ ಈ ವಿಡಿಯೋ ನೋಡಲೇಬೇಕು. ಶಾಲಾಬಾಲಕಿಯೊಬ್ಬಳು ನಿರ್ಜನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಪಹರಣಕಾರರು ಕಾರಿನಲ್ಲಿ ಬಂದಿದ್ದಾರೆ. ಆಗ ಎಲ್ಲಿಂದಲೋ ಓಡಿಬಂದ ಬೀದಿನಾಯಿ ಇವಳನ್ನು ಕಾಪಾಡಿದೆ. ನೆಟ್ಟಿಗರು ಈ ನಾಯಿಯನ್ನು ದತ್ತು ತೆಗೆದುಕೊಳ್ಳಲು ತಾಮುಂದು ನಾ ಮುಂದು ಎನ್ನುತ್ತಿದ್ದಾರೆ.

Viral Video: ಅಪಹರಣಕಾರರಿಂದ ಶಾಲಾಬಾಲಕಿಯನ್ನು ರಕ್ಷಿಸಿದ ಬೀದಿನಾಯಿಯ ವಿಡಿಯೋ ವೈರಲ್
ಶ್ರೀದೇವಿ ಕಳಸದ
|

Updated on: Aug 28, 2023 | 6:13 PM

Share

Stray Dog: ಬೀದಿನಾಯಿಗಳಿಂದ ಒಂದಿಲ್ಲಾ ಒಂದು ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ. ಹಾಗಾಗಿ ಅವುಗಳು ಸಮಾಜಕ್ಕೆ ಕಂಟಕ, ಅಪಾಯಕಾರಿ ಎಂದು ನಿರ್ಧರಿಸಿ ಎಲ್ಲರೂ ಜರಿಯುವವರೇ. ಅವುಗಳನ್ನು ಶಿಕ್ಷೆಗೆ ಒಳಪಡಿಸುವವರೇ. ಪಾಪ ಅವುಗಳ ತಪ್ಪಾದರೂ ಏನು? ಮೂಲಸೌಲಭ್ಯವಿಲ್ಲದಿದ್ದರೆ ಅವುಗಳಾದರೂ ಏನು ಮಾಡಬೇಕು? ಆದರೆ, ಇದೀಗ ಬೀದಿನಾಯಿಯೊಂದನ್ನು ನೆಟ್ಟಿಗರು ಶಭಾಷ್ ಎಂದು ಹೊಗಳುತ್ತಿದ್ದಾರೆ. ಏಕೆಂದರೆ​  ಬೀದಿನಾಯಿಯೊಂದು ಅಪಹರಣಕಾರರಿಂದ ಶಾಲಾಬಾಲಕಿಯೊಬ್ಬಳನ್ನು ರಕ್ಷಿಸಿ ನೆಟ್ಟಿಗರಿಂದ ಶಭಾಷ್​ ಎನ್ನಿಸಿಕೊಂಡಿದೆ. ವೈರಲ್ (Viral) ಆಗುತ್ತಿರುವ ವಿಡಿಯೋದಡಿ ನೆಟ್ಟಿಗರು ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಚಿಲಿ; ಹುಟ್ಟುತ್ತಿದ್ದಂತೆಯೇ ಅಪಹರಣಕ್ಕೊಳಗಾದ ಮಗ 42 ವರ್ಷಗಳ ನಂತರ ತಾಯಿಯನ್ನು ಭೇಟಿಯಾದ ಕ್ಷಣ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿರ್ಜನವಾದ ಬೀದಿಯೊಂದರಲ್ಲಿ ಬ್ಯಾಗ್​ ಹೊತ್ತುಕೊಂಡು ತನ್ನ ಪಾಡಿಗೆ ತಾ ನಡೆದುಕೊಂಡು ಹೊರಟಿದ್ದಾಳೆ ಈ ಶಾಲಾಬಾಲಕಿ. ಆಗ ಇದ್ದಕ್ಕಿದ್ದಹಾಗೆ ಕಾರ್ ಬರುತ್ತದೆ. ಡ್ರೈವರ್​ ಸೀಟ್​ನಲ್ಲಿ ಕುಳಿತ ವ್ಯಕ್ತಿ ಆಕೆಯನ್ನು ಅಪಹರಿಸು ಪ್ರಯತ್ನಕ್ಕೆ ಮುಂದಾಗುವ ಮೊದಲೇ ಬೀದಿನಾಯಿಯೊಂದು ಓಡಿಬಂದು ಅವನನ್ನು ಕಚ್ಚಲು ನೋಡುತ್ತದೆ. ಅಂತೂ ಅಪಹರಣಕಾರನು ಭಯದಿಂದ ಅಲ್ಲಿಂದ ಪರಾರಿಯಾಗುತ್ತಾನೆ. ಶಾಲಾಬಾಲಕಿ ಮಾತ್ರ ಆಕಸ್ಮಿಕವಾದ ಈ ಘಟನೆಯಿಂದಾಗಿ ಆಘಾತಕ್ಕೆ ಒಳಗಾಗುತ್ತಾಳೆ.

ಅಪಹರಣಕಾರರಿಂದ ಶಾಲಾಬಾಲಕಿಯನ್ನು ರಕ್ಷಿಸಿದ ಬೀದಿನಾಯಿ

ಹತ್ತಿರದ ಕಟ್ಟಡವೊಂದಕ್ಕೆ ಅವಳಡಿಸಿದ ಸಿಸಿಕ್ಯಾಮೆರಾದಲ್ಲಿ ಈ ದೃಶ್ಯಾವಳಿ ದಾಖಲಾಗಿದೆ. X ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು 24.6 ಮಿಲಿಯನ್​ ಜನರು ನೋಡಿದ್ದಾರೆ. 4.7 ಲಕ್ಷ ಜನರು ಲೈಕ್ ಮಾಡಿದ್ದಾರೆ. 41,000 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ನಾಯಿಯ ಸಮಯಪ್ರಜ್ಞೆ ಮತ್ತು ರಕ್ಷಣಾ ಸ್ವಭಾವವನ್ನು ಹೊಗಳಿದ್ಧಾರೆ. ಜೊತೆಗೆ ಈ ನಾಯಿಯನ್ನು ನಾನು ದತ್ತು ಪಡೆಯುತ್ತೇನೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಲಕ್ನೋ; ಬೀದಿಯಲ್ಲಿ ಮೊಮೊ ಮಾರುತ್ತಿರುವ ‘ಇಂಗ್ಲಿಷ್​ ಪ್ರೊಫೆಸರ್’

ನಾಯಿಗಳಿಗಿಂತ ಬೆಕ್ಕುಗಳನ್ನು ಯಾಕೆ ಜನ ಇಷ್ಟಪಡುತ್ತಾರೆ ಎನ್ನುವುದು ನನಗಿನ್ನೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಒಬ್ಬರು. ನಾಯಿಯಿಂದ ಅವನು ಭಯಕ್ಕೆ ಒಳಗಾಗಿಲ್ಲ, ಆದರೆ ಅದರ ಬೊಗಳುವಿಕೆಯಿಂದ ಅಲ್ಲಿ ಉಂಟಾಗುವ ಸನ್ನಿವೇಶವನ್ನು ನೆನಪಿಸಿಕೊಂಡು ಅವನು ಓಟಕಿತ್ತಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ಆಕೆ ಎಷ್ಟೊಂದು ಹೆದರಿದ್ದಳು, ನೀವದನ್ನು ಗಮನಿಸಲಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ನಾಯಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ