Viral Video: ಲಕ್ನೋ; ಬೀದಿಯಲ್ಲಿ ಮೊಮೊ ಮಾರುತ್ತಿರುವ ‘ಇಂಗ್ಲಿಷ್​ ಪ್ರೊಫೆಸರ್’

Street Food : ಇಂಗ್ಲಿಷ್​ನಲ್ಲಿ ಮಾತನಾಡುತ್ತ ಮೊಮೊ ಮಾರುತ್ತಿರುವ ಲಕ್ನೋದ ಈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಸತ್ಯಾಸತ್ಯತೆಯ ಬಗ್ಗೆ ಗೊಂದಲಕ್ಕೆ ಬಿದ್ದಿದ್ದಾರೆ. ವ್ಯಕ್ತಿಯೊಬ್ಬರ ಬಗ್ಗೆ ತೀರ್ಮಾನಕ್ಕೆ ಬರುವ ರೀತಿ, ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಚರ್ಚಿಸುವ ಪರಿ ನೋಡಿ ಬಹಳ ಸಂತೋಷವಾಗಿದೆ! ಎಂದು ಕೆಲವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Viral Video: ಲಕ್ನೋ; ಬೀದಿಯಲ್ಲಿ ಮೊಮೊ ಮಾರುತ್ತಿರುವ 'ಇಂಗ್ಲಿಷ್​ ಪ್ರೊಫೆಸರ್'
ಲಕ್ನೋದ ಬೀದಿಯಲ್ಲಿ ಇಂಗ್ಲಿಷ್​ನಲ್ಲಿ ಮಾತನಾಡುತ್ತ ಗ್ರಾಹಕರನ್ನು ಸೆಳೆಯುತ್ತಿರುವ ವ್ಯಕ್ತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 28, 2023 | 3:04 PM

Lucknow: ತಾನು ತಯಾರಿಸುವ ಮೊಮೊದ (Momo) ವೈಶಿಷ್ಟ್ಯತೆಯನ್ನು ಇಂಗ್ಲಿಷ್​ನಲ್ಲಿ ಹೇಳುತ್ತಾ, ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಈ ವ್ಯಕ್ತಿ. ಲಕ್ನೋದ ಬೀದಿಯಲ್ಲಿ ಬಾದಾಮ್ ಚಟ್ನಿ, ಶೇಝ್​ವಾನ್ ಸಾಸ್ ಜೊತೆ ಶುಚಿಯಾದ ಮತ್ತು ಸ್ವಾದಿಷ್ಠವಾದ ಮೊಮೊ ಸವಿಯಲು ಗ್ರಾಹಕರನ್ನು ಆಹ್ವಾನಿಸುತ್ತಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ಈ ವಿಡಿಯೋ ನೋಡುತ್ತಿದ್ದಾರೆ ಮತ್ತು ಚರ್ಚಿಸುತ್ತಿದ್ದಾರೆ. ಇಂಗ್ಲಿಷ್​ ಪ್ರೊಫೆಸರ್ (English) ಹೀಗೇಕೆ ಬೀದಿಯಲ್ಲಿ ಮೊಮೊ ಮಾರುವುದೆ? ಎಂದು ಅಚ್ಚರಿಯಿಂದ ಕುತೂಹಲದಿಂದ ಕುಹಕದಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿರುವ ಇನ್ನೊಂದು ನಾಯಿಯನ್ನು ಕಂಡುಹಿಡಿಯಬಹುದೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 6ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನಾನು ಮನೆಯಲ್ಲಿ ಮಾಡಿದ ರುಚಿಯಾದ ಶುಚಿಯಾದ ಮೊಮೊ ಇವು. ಇವುಗಳೊಳಗೆ ತುಂಬಿದ ಖಾದ್ಯವನ್ನು ನೋಡಿ ಮತ್ತು ಹಿಟ್ಟಿನಿಂದ ತಯಾರಿಸಿದ ತೆಳುವಾದ ಪದರಗಳನ್ನು ನೋಡಿ. ಇದರೊಂದಿಗೆ ಸವಿಯಲು ವಿಶಿಷ್ಟವಾದ ಚಟ್ನಿ, ಸಾಸ್ ಇದೆ. ಎರಡು ಗಂಟೆಗಳಲ್ಲಿ ಖಾಲಿಯಾಗುತ್ತವೆ ಎಂದು ನಿರರ್ಗಳವಾಗಿ ಇಂಗ್ಲಿಷ್​ನಲ್ಲಿ ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿದ ಯಾರಿಗೂ ಇವರ ಕಥೆ ಏನಿರಬಹುದು ಎಂಬ ಕುತೂಹಲ ಉಂಟಾಗುವುದು ಸಹಜ.

ಮೊಮೊ ಮಾರುತ್ತಿರುವ ಇಂಗ್ಲಿಷ್ ಪ್ರೊಫೆಸರ್

‘ಈ ಇಂಗ್ಲಿಷ್ ಪ್ರೊಫೆಸರ್​ ಬಾದಾಮ್​ ಚಟ್ನಿ, ಶೇಝ್ವಾನ್​ ಸಾಸ್​ನೊಂದಿಗೆ ಮನೆಯಲ್ಲಿ ತಯಾರಿಸಿದ ಮೊಮೊ ಮಾರುತ್ತಿದ್ದಾರೆ, ಎರಡು ಗಂಟೆಗಳಲ್ಲಿ ಎಲ್ಲ ಮೊಮೊ ಮಾರಾಟವಾಗುತ್ತವೆ’ ಎಂದು ಈ ವಿಡಿಯೋಗೆ ನೋಟ್​ ಬರೆದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರೊಬ್ಬರು, ‘ಇವರು ಪ್ರೊಫೆಸರ್ ಅಲ್ಲ. ಸಣ್ಣ ವ್ಯಾಪಾರವನ್ನು ಆರಂಭಿಸಿದ ಸಾಮಾನ್ಯ ವ್ಯಕ್ತಿ. ತಮ್ಮ ಹೆಂಡತಿಗೆ ಸಹಾಯ ಮಾಡುತ್ತಿದ್ದಾರೆ, ಅಲ್ಲದೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸುವ ಉದ್ದೇಶವಿಟ್ಟುಕೊಂಡು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಅಪಪ್ರಚಾರ ಮಾಡಬೇಡಿ. ಈ ವ್ಯಕ್ತಿಯನ್ನು ನಾನು ಮುಖಾಮುಖಿಯಾಗಿ ಭೇಟಿಯಾಗಿದ್ದೇನೆ. ಒಂದು ಭಾನುವಾರದ ಸಂಜೆ ನಾನು ನನ್ನ ಕುಟುಂಬದೊಂದಿಗೆ ಈ ರಸ್ತೆಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಕಣ್ಣಿಗೆ ಬಿದ್ದರು.’ ಎಂದಿದ್ದಾರೆ.

ಇದನ್ನೂ ಓದಿ: Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು

ಪ್ರೊಫೆಸರ್ ಅಲ್ಲವೆಂದರೆ ಅವರು ಎಂಜಿನಿಯರ್ ಆಗಿರಬೇಕು ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಅಷ್ಟೊಂದು ಬಿಸಿಬಿಸಿಯಾದ ಮೊಮೊಗಳನ್ನು ಪ್ಲಾಸ್ಟಿಕ್​ ಡಬ್ಬಿಯಲ್ಲಿ ಪ್ಯಾಕ್​ ಮಾಡುತ್ತಿರುವುದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ಅನ್ನು ಎಂದಿಗೂ ಇಂಗ್ಲಿಷ್​ ವಿದ್ಯಾರ್ಥಿಗಳಿಗೆ ತೋರಿಸಬೇಡಿ, ನಾನಂತೂ ಇದನ್ನು ನೋಡಿ ಸತ್ತೇ ಹೋದೆ ಎಂದಿದ್ದಾರೆ ಮತ್ತೊಬ್ಬರು. ಇವರ ಬದುಕಿನ ಯಾವ ದುರಂತವರು ಅವರನ್ನು ಈ ರೀತಿ ಮೊಮೊ ಮಾರಲು ಎಡೆಮಾಡಿತೋ? ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:58 pm, Mon, 28 August 23

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್