Viral Video: ಜಪಾನ್; ಝೀಬ್ರಾ ಕ್ರಾಸಿಂಗ್​ ಮಾಡಿ ರಸ್ತೆ ದಾಟಿದ ಜಿಂಕೆಯ ವಿಡಿಯೋ

Deer : ವನ್ಯಮೃಗಗಳಿಗೆ ಇಷ್ಟೊಂದು ತಾಳ್ಮೆ, ತಿಳಿವಳಿಕೆ ಇದೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಅದರಲ್ಲಿಯೂ ಜಪಾನಿನ ಜಿಂಕೆಗಳು ವಿಶೇಷ ತಾಳ್ಮೆಯನ್ನು ಹೊಂದಿವೆ. ಸಹಾಯ ಮಾಡಿದ ಮನುಷ್ಯರಿಗೆ ಪ್ರತಿಯಾಗಿ ತಲೆಬಾಗಿ ಧನ್ಯವಾದ ತಿಳಿಸುತ್ತವೆ. ನಿಜ್ಕಕೂ ಪ್ರಾಣಿಗಳಿಂದ ಇನ್ನೂ ಎಷ್ಟೆಲ್ಲ ಕಲಿಯುವುದು ಬಾಕಿ ಇದೆಯಲ್ಲ? ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.

Viral Video: ಜಪಾನ್; ಝೀಬ್ರಾ ಕ್ರಾಸಿಂಗ್​ ಮಾಡಿ ರಸ್ತೆ ದಾಟಿದ ಜಿಂಕೆಯ ವಿಡಿಯೋ
ಜಪಾನಿನ ನಾರಾದಲ್ಲಿ ಝೀಬ್ರಾ ಕ್ರಾಸಿಂಗ್ ಮಾಡುತ್ತಿರುವ ಜಿಂಕೆ
Follow us
ಶ್ರೀದೇವಿ ಕಳಸದ
|

Updated on: Aug 28, 2023 | 11:41 AM

Japan: ಕಳೆದ ತಿಂಗಳು ಜಪಾನ್​ನಲ್ಲಿ ಮಳೆ ಬಂದಾಗ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದ ಜಿಂಕೆ, ಸಾರಂಗಗಳ ಹಿಂಡು ವೈರಲ್ ಆದ ವಿಡಿಯೋ ನೋಡಿದ್ದಿರಿ. ಸಹಜೀವನವೆಂದರೆ ಇದು ಎಂದು ಮೆಚ್ಚಿದ್ದಿರಿ ಕೂಡ. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಜಪಾನ್​ ಮೂಲದ್ದೇ. ನಾರಾದಲ್ಲಿರುವ ಜಿಂಕೆಯೊಂದು ವಾಹನದಟ್ಟಣೆ ಇರುವ ರಸ್ತೆಯ ಬಳಿ ಬಂದಿದೆ. ರಸ್ತೆ ದಾಟಲು ತಾಳ್ಮೆಯಿಂದ ಕಾಯ್ದು ತನ್ನ ಸುರಕ್ಷತೆಗಾಗಿ ಝೀಬ್ರಾ ಕ್ರಾಸಿಂಗ್ (Zebra Crossing)​ ಕೂಡ ಬಳಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ನಾನು ಜಿಂಕೆಯ ಈ ಶಿಸ್ತಿನ ನಡೆಗೆ ಶಿರಬಾಗಿ ನಮಿಸುತ್ತೇನೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; ಕಿಲಿ, ನೀಮಾ ಪೌಲ್ ಡ್ಯಾನ್ಸ್​ಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 26ರಂದು ವೈರಲ್ ಆಗಿರುವ ಈ ವಿಡಿಯೋ ಅನ್ನು ಈತನಕ 7.7 ಮಿಲಿಯನ್​ ಜನರು ನೋಡಿದ್ದಾರೆ. 1,52,200 ಜನರು ಲೈಕ್ ಮಾಡಿದ್ದಾರೆ. 15,340 ಜನರು ರೀಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಜಪಾನ್​ನಲ್ಲಿರುವ ಈ ಜಿಂಕೆಗಳಿಗೆ ಇಷ್ಟೊಂದು ತಿಳಿವಳಿಕೆ ಮೂಡಲು ಹೇಗೆ ಸಾಧ್ಯ? ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.

ಝೀಬ್ರಾ ಕಾಸಿಂಗ್​ ಮಾಡುತ್ತಿರುವ ಜಿಂಕೆ

ತನ್ಸು ಯೆಗೆನ್​ ಎನ್ನುವವರು Xನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಸ್ಸು, ಕಾರುಗಳು ಸತತವಾಗಿ ಓಡಾಡುತ್ತಿರುವ ಆ ರಸ್ತೆಯಲ್ಲಿ, ತಾಳ್ಮೆಯಿಂದ ರಸ್ತೆಯಂಚಿಗೆ ನಿಂತು, ಡ್ರೈವರ್​ ಕಾರನ್ನು ನಿಲ್ಲಿಸಿದ್ದನ್ನು ಖಚಿತಪಡಿಸಿಕೊಂಡು ಝೀಬ್ರಾ ಕ್ರಾಸಿಂಗ್ ಮಾಡುತ್ತದೆ ಈ ಜಿಂಕೆ. ಜಿಂಕೆ ತನ್ನ ದಾರಿಯಲ್ಲಿ ತಾನು ಸರಿಯಾಗಿ ಹೊರಟಿದೆ. ಮನುಷ್ಯರು ರಸ್ತೆ ನಿರ್ಮಿಸಿದ್ದಾರೆ ಮತ್ತು ತಮ್ಮ ಓಡಾಟಕ್ಕೆ ಉಪಯೋಗಿಸಿಕೊಂಡಿದ್ದಾರೆ ಎನ್ನುವುದು ಜಿಂಕೆಗೆ ಗೊತ್ತು. ಅದರೂ ಓಡಾಡುತ್ತಿರುವ ವಾಹನಗಳ ಮಧ್ಯೆ ಸಾವಧಾನವಾಗಿ ಚಲಿಸಬೇಕೆನ್ನುವ ಅರಿವೂ ಅದಕ್ಕೆ ದಕ್ಕಿದೆ, ಗ್ರೇಟ್​ ಎಂದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ

ಪ್ರಾಣಿಗಳಲ್ಲಿ ವಿಕಾಸವಾಗಿದೆ, ಮನುಷ್ಯರಲ್ಲಿ ಮಾತ್ರ… ಪ್ರಾಣಿಗಳಿಂದ ಕಲಿಯುವುದು ಇನ್ನೂ ಎಷ್ಟಿದೆಯಲ್ಲವೆ? ಎಂದಿದ್ದಾರೆ ಒಬ್ಬರು. ಎಂಥಾ ಬುದ್ಧಿವಂತ ಜಿಂಕೆ ಇದು ಎಂದಿದ್ದಾರೆ ಇನ್ನೊಬ್ಬರು. ಜಿಂಕೆ ದಾಟಲು ಅನುವು ಮಾಡಿಕೊಟ್ಟ ಕಾರುಗಳ ಚಾಕರಿಗೆ ಜಿಂಕೆಗಳು ಪ್ರತಿಯಾಗಿ ತಲೆಬಾಗಿ ನಮಸ್ಕರಿಸುತ್ತವೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ