Viral: ಗಣಿತ ಪರೀಕ್ಷೆಯಲ್ಲಿ ಸೊನ್ನೆ ಪಡೆದ ಮಗಳು; ಇಂಥ ಅಂಕ ಗಳಿಸಲು ತುಂಬಾ ಧೈರ್ಯ ಬೇಕು ಎಂದ ತಾಯಿ
Encouraging: ನನ್ನ ಮರ್ಯಾದೆ ಕಳೆದೆ. ನಿನ್ನ ಸಲುವಾಗಿ ಅದೆಷ್ಟು ಖರ್ಚು ಮಾಡುತ್ತೇನೆ. ಕೇಳಿದ್ದೆಲ್ಲ ಕೊಡಿಸುತ್ತೇನೆ ಆದರೂ ನೀ ಹೀಗೆ. ಹೀಗೆ ಮಾರ್ಕ್ಸ್ ತೆಗೆದರೆ ಜೀವನದಲ್ಲಿ ಉದ್ಧಾರವೇ ಆಗಲಾರೆ; ಮಕ್ಕಳು ಕಡಿಮೆ ಅಂಕ ಗಳಿಸಿದಾಗ ಪೋಷಕರು ಹೀಗೆ ಕೂಗಾಡುವುದುಂಟು. ಆದರೆ ಇಲ್ಲೊಬ್ಬ ತಾಯಿ, ತಮ್ಮ ಮಗಳ ಉತ್ತರ ಪತ್ರಿಕೆಯಲ್ಲಿ ಬರೆದಿದ್ದು ಮಾತ್ರ ವಿಭಿನ್ನ.
Parenting: ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದಾಗ ಸಾಮಾನ್ಯವಾಗಿ ಪೋಷಕರು ಮಕ್ಕಳನ್ನು ಬಯ್ದು, ಹೊಡೆದು ಅವಮಾನಿಸುತ್ತಾರೆ ಇಲ್ಲವೇ ಬೆದರಿಸುತ್ತಾರೆ. ಆದರೆ, ಇದೀಗ ವೈರಲ್ ಆಗಿರುವ ಈ X ಪೋಸ್ಟ್ನಲ್ಲಿ ಗಣಿತಕ್ಕೆ ಸೊನ್ನೆ ಪಡೆದ ಮಗಳನ್ನುದ್ದೇಶಿಸಿ ತಾಯಿಯೊಬ್ಬಳು (Mother) ಪ್ರೋತ್ಸಾಹದಾಯಕವಾದ ನೋಟ್ ಬರೆದಿದ್ದಾಳೆ; ‘ನನ್ನ 6ನೇ ತರಗತಿಯ ಗಣಿತ ನೋಟ್‌ಬುಕ್ ಸಿಕ್ಕಿದೆ. ಪ್ರತೀ ಸಲ ಕೆಟ್ಟದಾಗಿ ಪರೀಕ್ಷೆ ಬರೆದಾಗಲೂ ನನ್ನ ಅಮ್ಮ ಪ್ರೋತ್ಸಾಹದಾಯಕವಾದ ನೋಟ್ ಬರೆದು ಸಹಿ ಹಾಕುತ್ತಿದ್ದಳು. ಇಂಥ ಅಮೂಲ್ಯ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ.’ ಈ ಪೋಸ್ಟ್ ನೋಡಿದ ನೆಟ್ಟಿಗರು ಆ ತಾಯಿಯ ಪ್ರೇರಣೆ, ಪ್ರೀತಿ ಮತ್ತು ಔದಾರ್ಯದವನ್ನು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಬಾರ್ಬಿ; ದೋಸೆಗೆ ಸೋಂಕಿದ ಗುಲಾಬಿ ಜ್ವರ, ಓಪನ್ಹೈಮರ್ ದೋಸೆಯೂ ಬೇಕೆನ್ನತ್ತಿರುವ ನೆಟ್ಟಿಗರು
ಝೈನಾಬ್ ಎನ್ನುವವರು X ನಲ್ಲಿ ಆ. 25ರಂದು ಈ ಪೋಸ್ಟ್ ಮಾಡಿದ್ದಾರೆ. ‘ನಾನು 15ಕ್ಕೆ ಸೊನ್ನೆ ಪಡೆದರೂ ನನ್ನ ತಾಯಿ ಸಹಿ ಮಾಡಿ, ‘ಈ ಅಂಕಗಳನ್ನು ಪಡೆಯಲು ತುಂಬಾ ಧೈರ್ಯ ಬೇಕು’ ಎಂದು ಬರೆದಿದ್ದರು. ಅವರ ಈ ಮಾತುಗಳಿಂದಾಗಿ, ನಾನು ಗಣಿತದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುತ್ತಾ ಹೋದೆ. ನಿಮ್ಮ ಮಗುವಿನ ವೈಫಲ್ಯವನ್ನು ಅವಮಾನಿಸದಿದ್ದರೆ ಇದೆಲ್ಲ ಸಾಧ್ಯವಾಗುತ್ತದೆ’ ಎಂದಿದ್ದಾರೆ ಆಕೆ.
ಆ ಉತ್ತರ ಪತ್ರಿಕೆ ಇಲ್ಲಿದೆ
found my grade 6 math notebook and love how precious mother was signing every bad test with an encouraging note for me! pic.twitter.com/AEJc3tUQon
— zainab (Taylor’s version) (@zaibannn) August 25, 2023
ಈತನಕ ಈ ಪೋಸ್ಟ್ ಅನ್ನು 95,000 ಜನರು ನೋಡಿದ್ದಾರೆ. 1,400 ಜನರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಈ ಉತ್ತರಪತ್ರಿಕೆಯಲ್ಲಿ ನಿಮ್ಮ ತಾಯಿ ಬರೆದ ನೋಟ್ ಅಮೂಲ್ಯವಾಗಿದೆ ಎಂದಿದ್ದಾರೆ ಒಬ್ಬರು. ಅದಕ್ಕಾಗಿಯೇ ತಾಯಿ ನಮ್ಮ ಮೊದಲ ಶಿಕ್ಷಕಿ, ಮಾರ್ಗದರ್ಶಕಿ, ಸ್ನೇಹಿತೆ ಮತ್ತು ತತ್ವಜ್ಞಾನಿ. ನಿಮ್ಮ ತಾಯಿ ನಿಮ್ಮನ್ನು ಸಕಾರಾತ್ಮಕ ವಿಧಾನಗಳಿಂದ ಬೆಳೆಸಿದ್ದಾರೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಅಪಹರಣಕಾರರಿಂದ ಶಾಲಾಬಾಲಕಿಯನ್ನು ರಕ್ಷಿಸಿದ ಬೀದಿನಾಯಿಯ ವಿಡಿಯೋ ವೈರಲ್
ಇದು ಎಷ್ಟು ಮುದ್ದಾಗಿದೆ, ನನ್ನ ಕಣ್ಣುಗಳು ತುಂಬಿಬಂದವು ಎಂದಿದ್ದಾರೆ ಇನ್ನೊಬ್ಬರು. ಓಹ್ ಎಲ್ಲ ಮಕ್ಕಳಿಗೂ ಇಂಥ ಪೋಷಕರು ಸಿಗಲಿ ಎಂದಿದ್ದಾರೆ ಮಗದೊಬ್ಬರು. ಇಂಥ ಪೋಷಕರ ಅವಶ್ಯಕತೆ ಸಾಕಷ್ಟು ಬೇಕಿದೆ. ಖಿನ್ನತೆಗೆ ಜಾರುವ ಮಕ್ಕಳನ್ನು ರಕ್ಷಿಸಬೇಕಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:59 am, Tue, 29 August 23