Viral Video: 24 ವರ್ಷಗಳ ನಂತರ ಶುಭಾ ಮುದ್ಗಲ್​, ಸುಖವಿಂದರ್​ ಸಿಂಗ್​ ಹಾಡಿದ ಈ ಹಾಡು ವೈರಲ್

Viral Song : ನರ್ಸರಿಯಿಂದ ಹಿಡಿದು ಕಿಟ್ಟಿಪಾರ್ಟಿ, ಆಫೀಸ್​ ಪಾರ್ಟಿಗಳ ತನಕ ಈ ಹಾಡಿಗೆ ಹೆಜ್ಜೆ ಹಾಕಿದವರು ಸಾಕಷ್ಟು ಜನರಿದ್ದಾರೆ. ಅವರೆಲ್ಲ ಈ ಹಾಡನ್ನು ಈ ರೀಲ್​ನಲ್ಲಿ ನೋಡಿದರೆ ಮತ್ತೆ ಡ್ಯಾನ್ಸ್​ ಮಾಡಲು ಎದ್ದು ನಿಲ್ಲಬಹುದು. ಇದು ಶುಭಾ ಮುದ್ಗಲ್​, ಸುಖವಿಂದರ್ ಸಿಂಗ್ ಹಾಡಿರುವ ಈ​​ ಹಾಡು ನಿಮ್ಮಲ್ಲಿಯೂ ಉತ್ಸಾಹ ತಂದೀತು.

Viral Video: 24 ವರ್ಷಗಳ ನಂತರ ಶುಭಾ ಮುದ್ಗಲ್​, ಸುಖವಿಂದರ್​ ಸಿಂಗ್​ ಹಾಡಿದ ಈ ಹಾಡು ವೈರಲ್
ಢೋಲ್ನಾ ಹಾಡಿಗೆ ಹೆಜ್ಜೆ ಹಾಕುತ್ತಿರುವ ಯುವತಿಯರು
Follow us
ಶ್ರೀದೇವಿ ಕಳಸದ
|

Updated on:Sep 01, 2023 | 1:44 PM

Pyar Ke Geet: 1999ರಲ್ಲಿ ಬಿಡುಗಡೆಯಾದ ‘ಪ್ಯಾರ್ ಕೇ ಗೀತ್​’ ಆಲ್ಬಮ್​ನಲ್ಲಿ ‘ಢೋಲನಾ’ ಹಾಡನ್ನು ಖ್ಯಾತ ಗಾಯಕರಾದ ಶುಭಾ ಮುದ್ಗಲ್ (Shubha Mudgal)​ ಮತ್ತು ಸುಖವಿಂದರ್ ಸಿಂಗ್ ಹಾಡಿದ್ದಾರೆ. ಈ ಹಾಡೀಗ ವೈರಲ್ ಆಗುತ್ತಿದೆ. ಒಂದು ಸಮಯದಲ್ಲಿ ಪ್ರೀನರ್ಸರಿಯಿಂದ ಹಿಡಿದು ಕಾಲೇಜು ವಾರ್ಷಿಕೋತ್ಸವ ಮತ್ತು ಆಫೀಸ್​ ಪಾರ್ಟಿಗಳಲ್ಲಿ ಕೂಡ ಈ ಹಾಡಿಗೆ ನೃತ್ಯ ಮಾಡಲಾಗುತ್ತಿತ್ತು. ಇದೀಗ ಈ ಇಬ್ಬರು ಯುವತಿಯರು ಈ ಹಾಡಿಗೆ ಭರ್ಜರಿಯಾಗಿ ನರ್ತಿಸಿದ್ದು, ನೆಟ್ಟಿಗರು ಇವರಿಬ್ಬರನ್ನು ಶ್ಲಾಘಿಸುತ್ತಿದ್ದಾರೆ. ಅಬ್ಬಾ ಎಂಥಾ ಎನರ್ಜಿ ಎಂದು ಕೊಂಡಾಡುತ್ತಿದ್ದಾರೆ. ಆ. 16ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಇದೀಗ ಜನರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ : Viral Video: ಕಪ್ಪುಸುಂದರಿಯ ಕನ್ನಡಿಯೊಂದಿಗಿನ ಏಕಾಂತ; ಭಂಗ ಮಾಡಿದ ನೆಟ್ಟಿಗರು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕನಿಷ್ಠಾ ಶರ್ಮಾ ಎನ್ನುವವರು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. 4.9 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ನೀವಿಬ್ಬರೂ ಈ ಹಾಡನ್ನು ಮತ್ತಷ್ಟು ರಂಗೇರಿಸಿದ್ದೀರಿ ಎಂದಿದ್ದಾರೆ ಅನೇಕರು. ನಾನು ಡ್ಯಾನ್ಸ್​ ಪಾರ್ಟನರ್ ಹುಡುಕುತ್ತಿದ್ದೇನೆ ಈ ಹಾಡಿಗಾಗಿಯೇ ಡ್ಯಾನ್ಸ್ ಮಾಡಲು ಎಂದಿದ್ದಾರೆ ಕೆಲವರು.

ಢೋಲನಾ ಹಾಡಿಗೆ ಹೆಜ್ಜೆ ಹಾಕಿರುವ ಯುವತಿಯರು

ಈ ವಿಡಿಯೋ ನೋಡಿ ನನ್ನ ಶಾಲಾದಿನಗಳು ನೆನಪಾದವು ಎಂದಿದ್ದಾರೆ ಒಬ್ಬರು. ನಿಮ್ಮಿಬ್ಬರ ಕಾಸ್ಟ್ಯೂಮ್​ ಬಹಳ ಆಕರ್ಷಕವಾಗಿದೆ ಎಂದು ಮತ್ತೊಬ್ಬರು. ಪರಸ್ಪರ ಹೆಜ್ಜೆ, ಅಭಿನಯ ಸಿಂಕ್ ಆಗಿದೆ ಎಂದು ಇನ್ನೊಬ್ಬರು. ನನಗೂ ಈ ಹಾಡಿಗೆ ಡ್ಯಾನ್ಸ್ ಮಾಡಬೇಕು ಎನ್ನಿಸುತ್ತಿದೆ ಎಂದು ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು

ನನ್ನ ಎನರ್ಜಿಗೆ ಇವರ ಎನರ್ಜಿಗೆ ಪಕ್ಕಾ ಮ್ಯಾಚ್ ಆಗುತ್ತದೆ, ಇವರು ಯಾವ ಊರಿನಲ್ಲಿದ್ದಾರೆ? ಎಂದು ಕೇಳಿದ್ದಾರೆ ಒಬ್ಬರು. ಅವರಿಬ್ಬರಿಗೂ ಚಿಪ್ಸ್ ಬೇಕಿದೆ, ಅದಕ್ಕೆ ಅವರು ಹೀಗೆ ಕುಣಿಯುತ್ತಿದ್ದಾರೆ ಎಂದು ಇನ್ನೊಬ್ಬರು. ಅಂತೂ ಈ ಹಾಡು ಕೇಳಿ ಬಹಳ ದಿನವಾಗಿತ್ತು, ಇಡೀ ದಿನ ನಾ ಈ ಹಾಡಿನ ಗುಂಗಿನಲ್ಲಿಯೇ ಎಂದು ಮತ್ತೊಬ್ಬರು.

ಈ ವಿಡಿಯ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:43 pm, Fri, 1 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್