Viral Video: ಕಪ್ಪುಸುಂದರಿಯ ಕನ್ನಡಿಯೊಂದಿಗಿನ ಏಕಾಂತ; ಭಂಗ ಮಾಡಿದ ನೆಟ್ಟಿಗರು

Viral Video: ನಾಯಿ, ಬೆಕ್ಕಿನಮರಿಗಳು ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಇದೀಗ ಕುದುರೆಯನ್ನು ನೋಡಿ. ಕನ್ನಡಿಯೊಳಗೆ ತನ್ನನ್ನು ತಾ ನೋಡಿಕೊಳ್ಳುತ್ತ ಅಚ್ಚರಿಗೆ ಒಳಗಾಗಿದೆ. ಕನ್ನಡಿಯೊಳಗೆ ಇರುವವರು ಯಾರು ಎಂದು ಗೊಂದಲಕ್ಕೆ ಬಿದ್ದಿದೆ. ಕೊನೆಗೆ ತನ್ನಂತೆ ಇರುವವರು ಗೋಡೆಯ ಹಿಂದೆ ಏನಾದರೂ ಅಡಗಿರಬಹುದೆಂದು ಓಡಿ ಹುಡುಕಲೂ ಹೋಗಿದೆಯೇನೋ.

Viral Video: ಕಪ್ಪುಸುಂದರಿಯ ಕನ್ನಡಿಯೊಂದಿಗಿನ ಏಕಾಂತ; ಭಂಗ ಮಾಡಿದ ನೆಟ್ಟಿಗರು
ಕನ್ನಡಿಯಲ್ಲಿ ತನ್ನ ಬಿಂಬವನ್ನು ತಾನೇ ನೋಡಿಕೊಳ್ಳುತ್ತಿರುವ ಕುದುರೆ
Follow us
ಶ್ರೀದೇವಿ ಕಳಸದ
|

Updated on:Sep 01, 2023 | 12:24 PM

Horse: ಲಾಯದೊಳಗೆ ನೇತುಹಾಕಿದ ಕನ್ನಡಿಯೊಳಗೆ ಈ ಬ್ಲ್ಯಾಕ್​ ಬ್ಯೂಟಿ (Black Beauty) ಮುಳುಗಿ ಹೋಗಿದ್ದಾರೆ. ಶ್​! ಏಕಾಂತದಲ್ಲಿರುವ ಅವರನ್ನು ನೋಡಿ ನೀವು ಹೀಗೆಲ್ಲ ನೋಡಿ ತಮಾಷೆ ಮಾಡುವುದು ನಗುವುದು ಸರಿಯೇ? ತಮ್ಮ ಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಂಡ ಅವರಿಗೆ ಅಚ್ಚರಿಯೋ, ಗಾಬರಿಯೋ, ಖುಷಿಯೋ ಇನ್ನೂ ಏನೋ ಆದಂತಿದೆ. ಹಿಂದೆ ಸರಿಯುತ್ತಾರೆ ಮುಂದೆ ಹೋಗುತ್ತಾರೆ, ಕನ್ನಡಿಯೊಳಗಿನ ಪ್ರತಿಬಿಂಬಕ್ಕೆ ಮುತ್ತಿಕ್ಕುತ್ತಾರೆ. ಕೊನೆಗೆ ಏನೋ ಎಂತೋ ಲಾಯದಿಂದ ಓಡಿಯೇ ಹೋಗುತ್ತಾರೆ. ಈ ವಿಡಿಯೋ ನೋಡಿದ ನಿಮಗೂ ನಗು ಬರುತ್ತದೆಯೇ?

ಇದನ್ನೂ ಓದಿ : Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಆ. 30ರಂದು X ನಲ್ಲಿ ಪೋಸ್ಟ್ ಮಾಡಲಾಗಿದೆ. 5.8 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 76,000ಕ್ಕೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ.  ಸುಮಾರು 7,000 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಕನ್ನಡಿಯೊಂದಿಗಿನ ಏಕಾಂತದಲ್ಲಿ ಕಪ್ಪುಸುಂದರಿ

ಇವ ತುಂಬಾ ಮುದ್ದಾಗಿದ್ದಾನೆ ಆದರೆ ನನ್ನಿಂದ ಇವನನ್ನು ಸಾಕಲಾಗುವುದಿಲ್ಲ ಎಂದಿದ್ದಾರೆ ಒಬ್ಬರು. ಇನ್ನೊಂದು ಕುದುರೆಯನ್ನು ಇವನು ಹುಡುಕುತ್ತಿದ್ದಾನೆ ಎಂದು ಇನ್ನೊಬ್ಬರು. ಕೊನೆಯಲ್ಲಿ ಅದು ಓಡುವ ರೀತಿ ಇದೆಯಲ್ಲ, ಅದ್ಭುತ! ಎಂದು ಮತ್ತೊಬ್ಬರು. ಮೇಕಪ್​ ಸಾಮಾನುಗಳೆಲ್ಲ ಎಲ್ಲಿ ಹೋದವು? ಬಹುಶಃ ತರಲು ಅದು ಓಡಿಹೋಯಿತೆ? ಎಂದು ಮಗದೊಬ್ಬರು. ಈ ಕುದುರೆಗಳನ್ನು ನೋಡಿ ಎಂದು ಈ ಕೆಳಗಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ ಇಒಬ್ಬರು.

ಸೀಸಾ ಸೀಸಾ

ಏನೇ ಹೇಳಿ ಹೀಗೆ ವಿಡಿಯೋ ಮಾಡಿ ಏಕಾಂತವನ್ನು ಭಂಗ ಮಾಡಬಾರದಿತ್ತು, ಅದಲ್ಲದೇ ಇಡೀ ಜಗತ್ತು ವಿಡಿಯೋ ನೋಡುವ ಹಾಗೆ ಮಾಡಿದ್ದು ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ. ನಿಮ್ಮಷ್ಟು ಯೋಚಿಸುವ ಬುದ್ಧಿ ಪ್ರಾಣಿಗಳಿಗಿಲ್ಲ, ಅಂಥದ್ದೇನೂ ಆಗಿಲ್ಲ ಎಂದಿದ್ದಾರೆ ಉಳಿದವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:22 pm, Fri, 1 September 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್