ಇಂಡಿಗೋ ಗಗನಸಖಿಯರಿಂದ ಇಸ್ರೋ ಮುಖ್ಯಸ್ಥರಿಗೆ ಅದ್ದೂರಿ ಸ್ವಾಗತ; ಎಲ್ಲೆಡೆ ವೈರಲ್ ಆದ ಹೃದಯಸ್ಪರ್ಶಿ ವಿಡಿಯೋ!

ಇಸ್ರೋ ಮತ್ತು ಅದರ ಅದ್ಭುತ ಸಾಧನೆಗಳ ಬಗ್ಗೆ ಜನರು ಹೊಂದಿರುವ ಆಳವಾದ ಗೌರವ ಮತ್ತು ಮೆಚ್ಚುಗೆಯನ್ನು ಈ ವೀಡಿಯೊ ಸುಂದರವಾಗಿ ವಿವರಿಸುತ್ತದೆ. ನಮ್ಮ ರಾಷ್ಟ್ರಕ್ಕೆ ಹೆಮ್ಮೆ ತರುವ ನಮ್ಮ ರಾಷ್ಟ್ರೀಯ ವೀರರನ್ನು ನಾವು ಹೇಗೆ ಪ್ರಶಂಸಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದಕ್ಕೆ ಇದು ಹೃದಯಸ್ಪರ್ಶಿ ವಿಡಿಯೋ ಉದಾಹರಣೆಯಾಗಿದೆ.

ಇಂಡಿಗೋ ಗಗನಸಖಿಯರಿಂದ ಇಸ್ರೋ ಮುಖ್ಯಸ್ಥರಿಗೆ ಅದ್ದೂರಿ ಸ್ವಾಗತ; ಎಲ್ಲೆಡೆ ವೈರಲ್ ಆದ ಹೃದಯಸ್ಪರ್ಶಿ ವಿಡಿಯೋ!
ಇಂಡಿಗೋ ಗಗನಸಖಿಯರಿಂದ ಇಸ್ರೋ ಮುಖ್ಯಸ್ಥರಿಗೆ ಅದ್ದೂರಿ ಸ್ವಾಗತ
Follow us
|

Updated on: Sep 01, 2023 | 2:47 PM

ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ (S Somnath, ISRO) ಇಂಡಿಗೋ ವಿಮಾನದ ಸಿಬ್ಬಂದಿಯಿಂದ (IndiGo Flight) ವಿಶೇಷ ಸ್ವಾಗತವನ್ನು ಪಡೆದ ವಿಡಿಯೋ ಈಗ ಎಲ್ಲಡೆ ವೈರಲ್ (Viral Video) ಆಗಿದೆ. ಪೂಜಾ ಶಾ ಎಂಬ ಗಗನಸಖಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಲಕ್ಷಾಂತರ ಭಾರತೀಯರ ಹೃದಯವನ್ನು ಮುಟ್ಟಿದೆ.

ವಿಡಿಯೋದಲ್ಲಿ ಪೂಜಾ ಶಾ ಅವರು ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಅವರನ್ನು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪರಿಚಯಿಸಿದರು. ಅವರು ಹೆಮ್ಮೆಯಿಂದ ಅವರ ಉಪಸ್ಥಿತಿಯನ್ನು ಘೋಷಿಸಿದರು ಮತ್ತು ಈ ಪ್ರತಿಷ್ಠಿತ ವಿಜ್ಞಾನಿಯನ್ನು ಸ್ವಾಗತಿಸುವಂತೆ ಎಲ್ಲರಿಗೂ ಕೇಳಿಕೊಂಡರು. ಪೂಜಾ, “ನೀವು ನಮ್ಮ ವಿಮಾನದಲ್ಲಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ, ಸರ್. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.” ಎಂದು ಹೇಳಿದ್ದಾರೆ.

View this post on Instagram

A post shared by Pooja Shah (@freebird_pooja)

ಇವರ ಮಾತುಗಳನ್ನು ಕೇಳಿದ ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟಿದರು, ತಮ್ಮ ಉತ್ಸಾಹ ಮತ್ತು ಗೌರವವನ್ನು ತೋರಿಸಿದರು. ಪ್ರಯಾಣಿಕರು ತಮ್ಮ ಆಸನಗಳಿಂದ ತಿರುಗಿ ಇಸ್ರೋ ಅಧ್ಯಕ್ಷರನ್ನು ನೋಡಿದರು.

ಮತ್ತೋರ್ವ ಗಗನಸಖಿ ಆಹಾರ ಮತ್ತು ಪಾನೀಯಗಳ ತಟ್ಟೆಯೊಂದಿಗೆ ಎಸ್ ಸೋಮನಾಥ್ ಅವರ ಬಳಿಗೆ ಬಂದರು. ಅವರು ವಿಜ್ಞಾನಿಗೆ ಮೆಚ್ಚುಗೆಯ ಮಾತುಗಳಿಂದ ತುಂಬಿದ ಒಂದು ಟಿಪ್ಪಣಿಯನ್ನು ಸಹ ಕೊಟ್ಟರು, ಸೋಮನಾಥ್ ಅವರು ಈ ಉಡುಗೊರೆಯನ್ನು ನಗುವಿನಿಂದ ಸ್ವೀಕರಿಸುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಆದಿತ್ಯ L1 ಮಿಷನ್‌ನ ವೆಚ್ಚ ಎಷ್ಟು? ಗುರಿಗಳೇನು ಎಂಬುದನ್ನು ಸರಳ ಪದಗಳಲ್ಲಿ ಅರ್ಥಮಾಡಿಕೊಳ್ಳಿ

ಇಸ್ರೋ ಮತ್ತು ಅದರ ಅದ್ಭುತ ಸಾಧನೆಗಳ ಬಗ್ಗೆ ಜನರು ಹೊಂದಿರುವ ಆಳವಾದ ಗೌರವ ಮತ್ತು ಮೆಚ್ಚುಗೆಯನ್ನು ಈ ವೀಡಿಯೊ ಸುಂದರವಾಗಿ ವಿವರಿಸುತ್ತದೆ. ನಮ್ಮ ರಾಷ್ಟ್ರಕ್ಕೆ ಹೆಮ್ಮೆ ತರುವ ನಮ್ಮ ರಾಷ್ಟ್ರೀಯ ವೀರರನ್ನು ನಾವು ಹೇಗೆ ಪ್ರಶಂಸಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದಕ್ಕೆ ಇದು ಹೃದಯಸ್ಪರ್ಶಿ ವಿಡಿಯೋ ಉದಾಹರಣೆಯಾಗಿದೆ.

ಆಗಸ್ಟ್ 23 ರಂದು, ಭಾರತದ ಮೂನ್ ಮಿಷನ್, ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿತು. ಈ ಮೂಲಕ ಭಾರತವು ಚಂದ್ರನ ಈ ಸವಾಲಿನ ಭಾಗವನ್ನು ತಲುಪಿದ ಮೊದಲ ರಾಷ್ಟ್ರವಾಯಿತು. ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಮತ್ತು ಸಂಶೋಧಕರ ಪ್ರಯತ್ನಗಳಿಗಾಗಿ ಪ್ರಪಂಚದಾದ್ಯಂತ ಅಭಿನಂದನೆಗಳು ಹರಿದುಬಂದಿವೆ.