Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ನಿಂದ ಬಿದ್ದವರಿಗೆ ಸಹಾಯ ಮಾಡಲು ಹೋದ ತಂದೆ, ಮಗ ಅಲ್ಲಿ ನಡೆದಿದ್ದೇ ಬೇರೆ

ರಾತ್ರಿ ಹೊತ್ತು ಅದರಲ್ಲೂ ನಿರ್ಜನ ಪ್ರದೇಶಗಳಲ್ಲಿ ನೀವು ಹೋಗುತ್ತಿದ್ದೀರಿ ಎಂದಾದರೆ ಮೈಯೆಲ್ಲಾ ಕಣ್ಣಾಗಿರಬೇಕು. ಹೀಗೆ ತಂದೆ-ಮಗ ಇಬ್ಬರೂ ಹೋಗುತ್ತಿರುವಾಗ ಎದುರಿನಲ್ಲಿ ಹೋಗುತ್ತಿದ್ದ ಬೈಕ್​ನಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ ಅವರ ಸಹಾಯಕ್ಕೆ ಇಬ್ಬರೂ ಧಾವಿಸಿದ್ದಾರೆ, ಆದರೆ ಅಲ್ಲಿ ನಡೆದಿದ್ದೇ ಬೇರೆ.ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಈ ಘಟನೆ ನಡೆದಿದೆ, ಆ ಇಬ್ಬರು ಬೈಕ್ ಸವಾರರು ಬೇಕಂತಲೇ ಕೆಳಗೆ ಬಿದ್ದಿದ್ದರು.

ಬೈಕ್​ನಿಂದ ಬಿದ್ದವರಿಗೆ ಸಹಾಯ ಮಾಡಲು ಹೋದ ತಂದೆ, ಮಗ ಅಲ್ಲಿ ನಡೆದಿದ್ದೇ ಬೇರೆ
ದರೋಡೆImage Credit source: NDTV
Follow us
ನಯನಾ ರಾಜೀವ್
|

Updated on:Sep 01, 2023 | 3:51 PM

ರಾತ್ರಿ ಹೊತ್ತು ಅದರಲ್ಲೂ ನಿರ್ಜನ ಪ್ರದೇಶಗಳಲ್ಲಿ ನೀವು ಹೋಗುತ್ತಿದ್ದೀರಿ ಎಂದಾದರೆ ಮೈಯೆಲ್ಲಾ ಕಣ್ಣಾಗಿರಬೇಕು. ಹೀಗೆ ತಂದೆ-ಮಗ ಇಬ್ಬರೂ ಹೋಗುತ್ತಿರುವಾಗ ಎದುರಿನಲ್ಲಿ ಹೋಗುತ್ತಿದ್ದ ಬೈಕ್​ನಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ ಅವರ ಸಹಾಯಕ್ಕೆ ಇಬ್ಬರೂ ಧಾವಿಸಿದ್ದಾರೆ, ಆದರೆ ಅಲ್ಲಿ ನಡೆದಿದ್ದೇ ಬೇರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಈ ಘಟನೆ ನಡೆದಿದೆ, ಆ ಇಬ್ಬರು ಬೈಕ್ ಸವಾರರು ಬೇಕಂತಲೇ ಕೆಳಗೆ ಬಿದ್ದಿದ್ದರು. ಸಹಾಯಕ್ಕೆ ತಂದೆ-ಮಗ ಧಾವಿಸಿದಾಗ ಕೊರಳ ಬಳಿ ಚಾಕು ಇಟ್ಟು ಇಬ್ಬರ ಬಳಿ ಇದ್ದ ಹಣವೆನ್ನೆಲ್ಲಾ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರಸ್ವತಿ ನಗರ ಪ್ರದೇಶದಲ್ಲಿ ಮಧ್ಯರಾತ್ರಿಯಲ್ಲಿ ಘಟನೆ ಸಂಭವಿಸಿದೆ, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಈ ಇಬ್ಬರು ತಂದೆ-ಮಗನ ಎದುರು ಬೀಳುವ ನಾಟವಾಡುತ್ತಾರೆ, ಹತ್ತಿರ ಹೋದಾಗ ಇದ್ದುದ್ದೆಲ್ಲವನ್ನೂ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೈಕ್ ಸವಾರರ ಹಿಂದೆ ಹೋಗುತ್ತಿದ್ದ ಸಂತ್ರಸ್ತರು ವಾಹನವನ್ನು ಮೇಲೆತ್ತಲು ಸಹಾಯ ಮಾಡಲು ಮುಂದಾದರು. ಆಗ ಚಾಕು ತೋರಿಸಿದ್ದಾರೆ.

ಮಗ ಓಡಿ ಹೋಗಿದ್ದಾನೆ, ಆದರೆ ತಂದೆಯನ್ನು ಹಿಡಿದುಕೊಂಡ ದುಷ್ಕರ್ಮಿಗಳು ನೆಲಕ್ಕೆ ದಬ್ಬಿದ್ದಾರೆ. ಆರೋಪಿಗಳ ಗುರುತು ಇನ್ನೂ ತಿಳಿದುಬಂದಿಲ್ಲ.

ಮತ್ತಷ್ಟು ಓದಿ: ಬೆಂಗಳೂರು: ದ್ವಿಚಕ್ರ ಸವಾರನಿಗೆ ಮಾರಕಾಸ್ತ್ರ ತೋರಿಸಿ ದರೋಡೆ! ಭೀತಿಗೊಳಿಸುವ ವಿಡಿಯೋ ಇಲ್ಲಿದೆ

ಇಬ್ಬರು ಯಾವುದೇ ದೂರು ದಾಖಲಿಸಿಲ್ಲವಾದರೂ ಘಟನೆಯ ಕುರಿತು ಸ್ಥಳಕ್ಕೆ ತೆರಳಿ ವಿಚಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಫೂಟೇಜ್‌ನಲ್ಲಿನ ದೃಶ್ಯಗಳು ಮಸುಕಾಗಿರುವುದರಿಂದ ಬೈಕ್‌ನ ಸಂಖ್ಯೆಯನ್ನು ಗಮನಿಸುವುದು ಕಷ್ಟಕರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:26 pm, Fri, 1 September 23

ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ