ಬೆಂಗಳೂರು: ದ್ವಿಚಕ್ರ ಸವಾರನಿಗೆ ಮಾರಕಾಸ್ತ್ರ ತೋರಿಸಿ ದರೋಡೆ! ಭೀತಿಗೊಳಿಸುವ ವಿಡಿಯೋ ಇಲ್ಲಿದೆ
ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಸವಾರನಿಂದ ಮೊಬೈಲ್ ದರೋಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದೆ. ಘಟನೆಯ ದೃಶ್ಯಗಳನ್ನು ನೆಟ್ಟಿಗರು ಟ್ವೀಟ್ ಮಾಡಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಬೆಂಗಳೂರು, ಆಗಸ್ಟ್ 3: ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಸವಾರನ ಮೊಬೈಲ್ ದರೋಡೆ (Robbery) ನಡೆಸಿದ ಘಟನೆ ನಗರದ ಬೆನ್ಸನ್ ಟೌನ್‌ನ ಉಪ-ಪ್ರದೇಶವಾದ ವಿಲಿಯಮ್ಸ್ ಟೌನ್‌ನಲ್ಲಿರುವ ಮುಬೀನ್ ತಾಜ್ ಅಪಾರ್ಟ್‌ಮೆಂಟ್ ಸಂಕೀರ್ಣದ ಬಳಿ ನಡೆದಿದೆ. ಬುಧವಾರ (ಆಗಸ್ಟ್ 2) ನಡೆದ ಘಟನೆ ಸಂಬಂಧ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದರೋಡೆಕೋರರು ದರೋಡೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು maxdudes ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಲಾಗಿದೆ.
ಇದನ್ನೂ ಓದಿ: Insta Love: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದ ಯುವಕನ ಭೇಟಿಗೆ ಬಂದ ವಿವಾಹಿತ ಮಹಿಳೆ, ದರೋಡೆಗೆ ತುತ್ತಾದರು!
ವಿಡಿಯೋದಲ್ಲಿರುವ ಸಮಯದ ಪ್ರಕಾರ, ಈ ಘಟನೆ ಮಧ್ಯಾಹ್ನ 2.35 ರ ಸುಮಾರಿಗೆ ನಡೆದಿದೆ. ದೃಶ್ಯಾವಳಿಯಲ್ಲಿ ಇರುವಂತೆ, ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಹೆಲ್ಮೆಟ್ ಧರಿಸಿದ ಇಬ್ಬರು ದರೋಡೆಕೋರರು ಬಂದ ಅಡ್ಡಗಟ್ಟಿದ್ದಾರೆ. ನಂತರ ಓರ್ವ ಮಾರಕಾಸ್ತ್ರ ತೋರಿಸಿ ದರೋಡೆಗೆ ಇಳಿದಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದಾಗ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗುತ್ತಾನೆ. ಕೊನೆಗೆ ಮೊಬೈಲ್ ಕಸಿದು ಇಬ್ಬರು ಸ್ಥಳದಿಂದ ಪರಾರಿಯಾಗುತ್ತಾರೆ.
@CPBlr yesterday at Williams Town Bangalore. Request you to look into this. pic.twitter.com/SIK6OR3oAs
— maxdudes (@maxdudes1) August 3, 2023
ಟ್ವೀಟ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.”
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ