Viral Video: ಹೀಗೆ ಪ್ರೀತಿಯಿಂದ ತಬ್ಬಿಕೊಳ್ಳುವುದೇ ಮನುಷ್ಯನ ಜೀವಮಾನದ ಗುರಿ

Cat Lover: ಪ್ರಾಣಿಪ್ರಿಯರು ಒಂದು ಕ್ಷಣವೂ ಅವುಗಳನ್ನು ಅಗಲಿ ಇರಲಾರರು. ಮನೆಯ ಸದಸ್ಯರಂತೆಯೇ ಅವುಗಳನ್ನು ಜೋಪಾನಿಸುತ್ತಾರೆ, ಪ್ರೀತಿಸುತ್ತಾರೆ. ಪ್ರಾಣಿಗಳೂ ತಮ್ಮ ಪೋಷಕರನ್ನು ಅಗಲಿ ಇರಲಾರವು. ಸದಾ ಅವರ ಮೈಗಂಟಿಕೊಂಡೇ ಪ್ರೀತಿಯನ್ನು ನಿರೀಕ್ಷಿಸುತ್ತಾ ಇರುತ್ತವೆ. ಬೆಚ್ಚನೆಯ ಭದ್ರ ಭಾವಕ್ಕಾಗಿ ಹಾತೊರೆಯುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ಬೆಕ್ಕಿನ ವಿಡಿಯೋ ಗಮನಿಸಿ.

Viral Video: ಹೀಗೆ ಪ್ರೀತಿಯಿಂದ ತಬ್ಬಿಕೊಳ್ಳುವುದೇ ಮನುಷ್ಯನ ಜೀವಮಾನದ ಗುರಿ
ಹೀಗೇ ಇರೋಣ
Follow us
ಶ್ರೀದೇವಿ ಕಳಸದ
|

Updated on: Sep 01, 2023 | 6:25 PM

Cat: ತನ್ನನ್ನು ಎತ್ತಿಕೊಂಡಿರುವ ಪೋಷಕರನ್ನು ತಬ್ಬಿಕೊಂಡಿರುವ ಈ ಬೆಕ್ಕು ಅವರ ಕಣ್ಣುಗಳ ಸ್ಪಂದನೆಗಾಗಿ ಕಾಯುತ್ತಿದೆ. ಫೋನ್​ ಕೆಳಗಿಟ್ಟು ವಿಡಿಯೋ ನಿಲ್ಲಿಸಿ ಯಾವಾಗ ತನ್ನ ಕಣ್ಣಿಗೆ ಕಣ್ಣು ಕೊಡುವರೋ ಎಂದು ಅದು ಕಾಯುತ್ತಿದೆ. ಇನ್​ಸ್ಟಾಗ್ರಾಂನ (Instagram) ಕ್ಯಾಟ್ಸ್​ ಆಫ್​ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿ ಕರಗುತ್ತಿದ್ದಾರೆ. ಆ. 21ರಂದು ಈ ವಿಡಿಯೋ ಮಾಡಲಾಗಿದೆ. ಈತನಕ 1.5 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ : Viral Video: ನಾಗಪುರ ಮೆಟ್ರೋದಲ್ಲಿ ಫ್ಯಾಷನ್​ ಷೋ; ಪ್ರಯಾಣಿಕರಿಗೆ ತೊಂದರೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮನುಷ್ಯನಿಗೆ ಇದಕ್ಕಿಂತ ಉತ್ತಮವಾದ ಗುರಿ ಜೀವನದಲ್ಲಿ ಬೇರೆ ಏನಿದೆ? ಎಂದು ಕೇಳಿದ್ದಾರೆ ನೆಟ್ಟಿಗರು. ಹೌದು ಇಷ್ಟು ಆಪ್ತವಾದ ಬಂಧ ದೊರೆಯುವುದು ಪ್ರಾಣಿಗಳಿಂದ ಮಾತ್ರ ಎಂದಿದ್ದಾರೆ ಕೆಲವರು. ಅದರಲ್ಲಿಯೂ ಬೆಕ್ಕಿನಿಂದ ಮಾತ್ರ ಎಂದಿದ್ದಾರೆ ಒಂದಿಷ್ಟು ಜನ. ಸಾಕುಪ್ರಾಣಿಗಳಷ್ಟು ಆಪ್ತ ಬಂಧ ಮನುಷ್ಯರಿಂದ ಸಾಧ್ಯವೇ ಇಲ್ಲ ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.

ಬೆಕ್ಕು ತನ್ನ ಪೋಷಕರನ್ನು ತಬ್ಬಿಕೊಂಡಿರುವ ವಿಡಿಯೋ

ತನ್ನ ಉಗುರುಗಳು ಪೋಷಕರಿಗೆ ನಾಟದಂತೆ ಮೆಲ್ಲನೇ ಅವುಚಿಕೊಳ್ಳುವ ಬೆಕ್ಕಿನ ಆ ಮುದ್ದಾದ ರೀತಿಯನ್ನು ಗಮನಿಸಿ ಎಂದಿದ್ದಾರೆ ಒಬ್ಬರು. ಇದು ತುಂಬಾ ಮುದ್ಧಾದ ಮಗು, ನನಗೆ ಬೇಕು ಎಂದಿದ್ದಾರೆ ಮತ್ತೊಬ್ಬರು. ತನ್ನ ಪೋಷಕರೊಂದಿಗೆ ಗಾಢವಾದ ಪ್ರೀತಿಯಲ್ಲಿ ಬಿದ್ದಿದೆ ಇದು ಎಂದಿದ್ದಾರೆ ಮಗದೊಬ್ಬರು. ಅದಕ್ಕೇ ನಾನು ಜಿಂಜರ್​ ಬೆಕ್ಕನ್ನು ಇಷ್ಟಪಡುತ್ತೇನೆ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : Viral Video: 24 ವರ್ಷಗಳ ನಂತರ ಶುಭಾ ಮುದ್ಗಲ್​, ಸುಖವಿಂದರ್​ ಸಿಂಗ್​ ಹಾಡಿದ ಈ ಹಾಡು ವೈರಲ್

ನನಗೆ ನಾಯಿಗಳು ಇಷ್ಟವಾದರೂ ಪ್ರೀತಿಸುವ ವಿಷಯದಲ್ಲಿ ಬೆಕ್ಕೇ ಬೇಕು ಎಂದಿದ್ದಾರೆ ಮತ್ತೊಬ್ಬರು. 15 ಸೆಕೆಂಡುಗಳ ಕಾಲ ಮಾತ್ರ ಇದರ ಪೋಷಕರು ಹೀಗೆ ಮಾಡಿ ಇಡೀ ದಿನ ಇದನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ, ಇದು ಕೇವಲ ವಿಡಿಯೋಗಾಗಿ ಎಂದಿದ್ದಾರೆ ಮಗದೊಬ್ಬರು. ಒಟ್ಟಾರೆಯಾಗಿ ಇದು ಬಹಳ ಆಪ್ತವಾದ ವಿಡಿಯೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ