AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬ್ರೇನ್ ಹ್ಯಾಮ್​ರೇಜ್; ‘ಎರಡು ವರ್ಷಗಳಿಂದ ನನ್ನಾಕೆಯ ಮಾತುಗಳಿಗಾಗಿ ಕಾಯುತ್ತಿದ್ದೇನೆ, ಮ್ಯಾಜಿಕ್ ಆಗುವುದೆ?’

Brain Hemorrhage : 'ನನ್ನ ಹೆಂಡತಿಯ ತಲೆಗೆ 25-30 ಹೊಲಿಗೆಗಳನ್ನು ಹಾಕಲಾಗಿತ್ತು. 25 ದಿನಗಳ ಕಾಲ ಐಸಿಯು ವಾಸ. ಒಂದು ದಿನ ಆಕೆ ನಕ್ಕಳು ಅದೇ ನನಗೆ ಹಬ್ಬವೆನ್ನಿಸಿತು. ಈಗ ಎರಡು ವರ್ಷಗಳಿಂದ ಆಕೆಯ ಮಾತಿಗಾಗಿ ಕಾಯುತ್ತಿದ್ದೇನೆ. ಮ್ಯಾಜಿಕ್​ನಲ್ಲಿ ನಂಬಿಕೆ ಇದೆ, ಅದು ನನ್ನ ಬದುಕಿನಲ್ಲಿ ಯಾವಾಗ ಘಟಿಸುತ್ತಿದೆ?' ಹೆನ್ರಿ ಜೇಮ್ಸ್ .

Viral Video: ಬ್ರೇನ್ ಹ್ಯಾಮ್​ರೇಜ್; 'ಎರಡು ವರ್ಷಗಳಿಂದ ನನ್ನಾಕೆಯ ಮಾತುಗಳಿಗಾಗಿ ಕಾಯುತ್ತಿದ್ದೇನೆ, ಮ್ಯಾಜಿಕ್ ಆಗುವುದೆ?'
ರಿತಿಕಾ ಮತ್ತು ಹೆನ್ರಿ ಜೇಮ್ಸ್
ಶ್ರೀದೇವಿ ಕಳಸದ
|

Updated on:Sep 02, 2023 | 10:49 AM

Share

Husband Wife: ‘ಮೂರು ವರ್ಷಗಳ ಹಿಂದೆ ರಿತಿಕಾ ಜೊತೆ ಮದುವೆಯಾಯಿತು. ನಮ್ಮ ಕನಸಿನ ಲೋಕದಲ್ಲಿ ಮುಳುಗಿ ಇಡೀ ಜಗತ್ತನ್ನೇ ಮರೆತೆವು. ಒಂದು ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೆ ರಿತಿಕಾಗೆ ಜೋರು ತಲೆನೋವು. ಆಕೆ ತೊದಲತೊಡಗಿದಳು ಕ್ರಮೇಣ ಪ್ರಜ್ಞಾಹೀನ ಸ್ಥಿತಿಗೂ ತಲುಪಿದಳು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಂಆರ್​ಐ (MRI) ಸಿಟಿ ಸ್ಕ್ಯಾನ್  ಮಾಡಿಸಲಾಯಿತು. ಆಕೆ ಬ್ರೇನ್​ ಹ್ಯಾಮ್​ರೇಜ್​ಗೆ (Brain Hemorrhage) ಒಳಗಾಗಿದ್ದಳು. ಶಸ್ತ್ರಚಿಕಿತ್ಸೆ ಮಾಡಿದರೂ ಆಕೆ ಬದುಕುಳಿಯುವುದು ಕಷ್ಟವೆಂಬಂಥ ಪರಿಸ್ಥಿತಿ. ಆದರೂ ಶಸ್ತ್ರಚಿಕಿತ್ಸೆ ನಡೆಯಿತು.’

ಇದನ್ನೂ ಓದಿ : Viral Video: ಹೀಗೆ ಪ್ರೀತಿಯಿಂದ ತಬ್ಬಿಕೊಳ್ಳುವುದೇ ಮನುಷ್ಯನ ಜೀವಮಾನದ ಗುರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಆಕೆಯ ತಲೆಗೆ 25-30 ಹೊಲಿಗೆಗಳನ್ನು ಹಾಕಲಾಗಿತ್ತು. 25 ದಿನಗಳ ಕಾಲ ಐಸಿಯು ವಾಸ. ಒಂದು ದಿನ ಆಕೆ ನಕ್ಕಳು ಅದೇ ನನಗೆ ಹಬ್ಬವೆನ್ನಿಸಿತು. ಈಗ ಎರಡು ವರ್ಷಗಳಿಂದ ಆಕೆಯ ಮಾತಿಗಾಗಿ ಕಾಯುತ್ತಿದ್ದೇನೆ. ಮ್ಯಾಜಿಕ್​ನಲ್ಲಿ ನಂಬಿಕೆ ಇದೆ, ಅದು ನನ್ನ ಬದುಕಿನಲ್ಲಿ ಯಾವಾಗ ಘಟಿಸುತ್ತಿದೆ?’ ಹೆನ್ರಿ ಜೇಮ್ಸ್ .

ರಿತಿಕಾಳ ಪಯಣ ಇಲ್ಲಿದೆ

ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ನಿನ್ನೆಯಷ್ಟೇ ಇನ್​ಸ್ಟಾಗ್ರಾಂನ officialpeopleofindia ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 1 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ರಿತಿಕಾ ಮತ್ತು ಹೆನ್ರಿಯ ಬಂಧವನ್ನು ಶ್ಲಾಘಿಸುತ್ತಿದ್ದಾರೆ. ರಿತಿಕಾ ಬೇಗ ಮೊದಲಿನಂತೆ ಆಗಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ : Viral Video: ದೈತ್ಯಕೊಂಬಿನ ಗೂಳಿಯೊಂದಿಗೆ ಕಾರ್​ ಸವಾರಿ ಮಾಡಿದ ವ್ಯಕ್ತಿ; ಅಯ್ಯಯ್ಯೋ ಎಂದ ನೆಟ್ಟಿಗರು

ನಿಮ್ಮ ಈ ಕಥೆಯನ್ನು ನೋಡಿ ನಾನು ಅತ್ತೇಬಿಟ್ಟೆ. ನಿಮ್ಮ ಹೆಂಡತಿ ಬೇಗ ಹುಷಾರಾಗುತ್ತಾರೆ. ಅವರಲ್ಲಿ ಪಾಸಿಟಿವ್ ಎನರ್ಜಿ ಬಹಳ ಕಾಣುತ್ತಿದೆ. ನೀವು ಕೂಡ ಅವರಿಗೆ ಪಾಸಿಟಿವ್ ಎನರ್ಜಿಯನ್ನು ಕೊಡುತ್ತಾ ಇರ್ರಿ. ನೀವು ಒತ್ತಾಸೆಯಾಗಿ ನಿಂತ ರೀತಿಗೆ ನಾನು ಮೂಕಳಾಗಿದ್ದೇನೆ. ನಿಮ್ಮಿಬ್ಬರಿಗಾಗಿ ನಾನೂ ಪ್ರಾರ್ಥಿಸುತ್ತೇನೆ. ಆ ದೇವರು ನಿಮ್ಮೊಂದಿಗಿದ್ದಾನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ನಾಗಪುರ ಮೆಟ್ರೋದಲ್ಲಿ ಫ್ಯಾಷನ್​ ಷೋ; ಪ್ರಯಾಣಿಕರಿಗೆ ತೊಂದರೆ

ರಿತಿಕಾ ತುಂಬಾ ಗಟ್ಟಿಗಿತ್ತಿ, ಇದನ್ನು ಗೆದ್ದು ಬರುತ್ತೀರಿ ನಮ್ಮೆಲ್ಲರ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದಿದ್ದಾರೆ ಅನೇಕರು. ನಿಮ್ಮ ಗಂಡನೇ ನಿಮಗೆ ಬಲ, ನಿಮಗೆ ಆದಷ್ಟು ಬೇಗ ಮಾತುಗಳು ಮತ್ತೆ ಮರಳಲಿ ಎಂದು ಹಾರೈಸಿದ್ದಾರೆ ಇನ್ನೂ ಕೆಲವರು. ನಿಮ್ಮಿಬ್ಬರ ಪ್ರೀತಿಗೆ ಶರಣು ಎಂದಿದ್ದಾರೆ ಒಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:37 am, Sat, 2 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ