ಪೋಸ್ಟ್‌ಮಾರ್ಟಮ್ ರೂಂನಲ್ಲಿ ತನ್ನಷ್ಟಕ್ಕೆ ಚಲಿಸಿದ ಏಣಿ; ವೈರಲ್ ವಿಡಿಯೋ ಕಂಡು ನೆಟ್ಟಿಗರು ಶಾಕ್
ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಪೋಸ್ಟ್ಮಾರ್ಟಂ ರೂಂನಲ್ಲಿ ತನ್ನಷ್ಟಕ್ಕೆ ತಾನೇ ಚಲಿಸುವ ಬಿದಿರಿನ ಏಣಿಯೊಂದರ ವಿಡಿಯೋ ಜನರನ್ನು ಭಯಭೀತಗೊಳಿಸಿದೆ. ಈ ವಿಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 6.88 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವಿಜ್ಞಾನ ಮತ್ತು ಅಗೋಚರ ಶಕ್ತಿಯ ನಡುವಿನ ವಾದ-ವಿವಾದ ಇನ್ನೂ ಮುಂದುವರೆದೇ ಇದೆ. ಎಲ್ಲವನ್ನೂ ವೈಜ್ಞಾನಿಕವಾಗಿ ಸಾಬೀತುಪಡಿಸಿದ ಆಧುನಿಕ ಯುಗದಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ, ಇಂದಿಗೂ ದೆವ್ವ, ಭೂತ, ಆತ್ಮಗಳೆಂಬ ಶಕ್ತಿಗಳನ್ನು ನಂಬುವವರು ಕೂಡ ಇದ್ದಾರೆ. ವೈಜ್ಞಾನಿಕ ಪ್ರಪಂಚ ಎಷ್ಟೇ ಮುಂದುವರೆದಿದ್ದರೂ ಕೆಲವೊಮ್ಮೆ ವಿಜ್ಞಾನ ಕೂಡ ಕೆಲವು ಘಟನೆಗಳನ್ನು ಸ್ಪಷ್ಟಪಡಿಸಲು ಹೆಣಗಾಡುತ್ತದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಪೋಸ್ಟ್ಮಾರ್ಟಂ ರೂಂನಲ್ಲಿ ತನ್ನಷ್ಟಕ್ಕೆ ತಾನೇ ಚಲಿಸುವ ಬಿದಿರಿನ ಏಣಿಯೊಂದರ ವಿಡಿಯೋ ಜನರನ್ನು ಭಯಭೀತಗೊಳಿಸಿದೆ. ಈ ವೀಡಿಯೊ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ಈ ಏಣಿಯ ವಿಡಿಯೋವನ್ನು ಉತ್ತರ ಪ್ರದೇಶದ ಬರೇಲಿಯಲ್ಲಿರುವ ಎಸ್‌ಆರ್‌ಎಂಎಸ್ ವೈದ್ಯಕೀಯ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ.
ಇದನ್ನೂ ಓದಿ: Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್
ಮನುಷ್ಯರಂತೆಯೇ ಸರಾಗವಾಗಿ ನಡೆಯುತ್ತಿರುವ ಬಿದಿರಿನ ಏಣಿಯ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ‘ವಾಕಿಂಗ್ ಲ್ಯಾಡರ್’ ನ ಈ ತುಣುಕು ಹಲವರಲ್ಲಿ ಭಯ ಸೃಷ್ಟಿಸಿದ್ದರೆ ಇನ್ನು ಕೆಲವರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವೈರಲ್ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಏಣಿಯ ಚಲನೆಯ ಹಿಂದೆ ಅಗೋಚರ ಶಕ್ತಿಯಿದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
कमजोर दिल वाले दूर रहें… बरेली (उत्तर प्रदेश) के SRMS मेडिकल कॉलेज के पोस्टमार्टम हाउस में अपने चारों टांगों से सीढ़ी चलने का वीडियो वायरल हो रहा है। pic.twitter.com/Up9BHq4ChB
— Arvind Chotia (@arvindchotia) August 29, 2023
ಶಬ್ದ ಮಾಡುತ್ತಾ ನಡೆಯುತ್ತಿರುವ ಈ ಏಣಿಯನ್ನು ನೋಡಿದರೆ ಎಂಥವರಿಗೂ ಭಯವಾಗುವುದು ಸಹಜ. ಈ ವಿಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 6.88 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ತಗ್ಗು ಪ್ರದೇಶವಾದ್ದರಿಂದ ಏಣಿ ತನ್ನಷ್ಟಕ್ಕೆ ತಾನು ಮುಂದೆ ಹೋಗಿದೆಯೇ ಹೊರತು ಇದರಲ್ಲಿ ಬೇರಾವ ಮ್ಯಾಜಿಕ್ ಕೂಡ ಇಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.