AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್

Rescue: ನಿಜಕ್ಕೂ ಈ ಕರುಣಾಳು ಮಹಿಳೆಗೆ ಸಾವಿರ ವಂದನೆ. ಬೇರೆ ಯಾರಾದರೂ ಆಗಿದ್ದರೆ ಅಯ್ಯೋ ಎಂದುಕೊಂಡು ಸುಮ್ಮನೇ ಹೋಗುತ್ತಿದ್ದರು, ಆದರೆ ಈಕೆ ಗೂಬೆಯನ್ನು ರಕ್ಷಿಸಿ ಪಕ್ಷಿಪ್ರೇಮವನ್ನು ಮೆರೆದಿದ್ದಾಳೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ನಾಲೆಯಲ್ಲಿ ಬಿದ್ದ ಗೂಬೆಯನ್ನು ಈ ಮಹಿಳೆ ರಕ್ಷಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.

Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್
ನಾಲೆಯಲ್ಲಿ ಬಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆ
ಶ್ರೀದೇವಿ ಕಳಸದ
|

Updated on:Sep 02, 2023 | 4:13 PM

Share

Rescue: ಏನಾದರೂ ತೊಂದರೆ ಆದರೆ ಅಪಾಯಕ್ಕೆ ಸಿಲುಕಿದರೆ ಕೂಗಿಕೊಳ್ಳಲು ಮತ್ತು ತನ್ನ ಸ್ಥಿತಿಯನ್ನು ಹೇಳಿಕೊಳ್ಳಲು ಮನುಷ್ಯರಿಗೆ ಬಾಯಿ ಇದೆ. ಆದರೆ ಪ್ರಾಣಿ ಪಕ್ಷಿಗಳಿಗೆ? ಅಕಸ್ಮಾತ್ ಯಾರಾದರೂ ಅವುಗಳನ್ನು ನೋಡಿದರೆ, ನೋಡಿಯೂ ಅವುಗಳನ್ನು ರಕ್ಷಿಸುವ ಗೋಜಿಗೆ ಹೋಗುವವರು ಕಡಿಮೆಯೇ. ಒಂದುವೇಳೆ ಯಾರಾದರೂ ರಕ್ಷಣಾ ಕಾರ್ಯಕ್ಕೆ ಮುಂದಾಗುತ್ತಾರೆ ಎಂದರೆ ಅವರು ಖಂಡಿತ ಪ್ರಾಣಿ ಮತ್ತು ಪಕ್ಷಿ ಪ್ರಿಯರೇ (Bird Lovers) ಆಗಿರುತ್ತಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಗೂಬೆಯೊಂದು ನಾಲೆಯಲ್ಲಿ ಬಿದ್ದು ಒದ್ಧಾಡುತ್ತಿದೆ. ಅಲ್ಲಿ ಹಾದು ಹೋಗುತ್ತಿದ್ದ ಮಹಿಳೆಯೊಬ್ಬಳು ಅದನ್ನು ರಕ್ಷಿಸಿದ್ದಾಳೆ. ನೆಟ್ಟಿಗರು ಈಕೆಯ ಕರುಣೆಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯಹಡಗನ್ನು ಏರುವುದು ಹೇಗೆ ಗೊತ್ತೆ? ನೋಡಿ ಈ ವಿಡಿಯೋ

ಸಾಮಾನ್ಯವಾಗಿ ಪಕ್ಷಿಗಳ ರೆಕ್ಕೆಗಳು ನೀರನ್ನು ಹೀರಿಕೊಳ್ಳುವುದಿಲ್ಲ ಹಾಗಾಗಿ ನೀರಿನಲ್ಲಿ ಬಿದ್ದರೂ ಅವುಗಲ ಜೀವಕ್ಕೆ ಅಪಾಯವಾಗಲಾರದು. ಆದರೆ ಗೂಬೆಗಳ ರೆಕ್ಕೆಗಳು ಮಾತ್ರ ಇದರಿಂದ ಹೊರತಾಗಿವೆ. ಇತರೇ ಪಕ್ಷಿಗಳಿಗೆ ಹೋಲಿಸಿದರೆ ಅವು ತುಂಬಾ ಮೌನವಾಗಿರುತ್ತವೆ. ನೀವು ಇಂಥ ಮುದ್ದಾದ ಗೂಬೆಯನ್ನು ರಕ್ಷಿಸಿದ್ದು ನಿಜಕ್ಕೂ ನನ್ನ ಮನಸ್ಸನ್ನು ಕರಗಿಸಿತು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗೂಬೆಯ ರಕ್ಷಣೆ ಮಾಡಿದ ಮಹಿಳೆ

Kind woman rescues a trapped barn owl by u/westcoastcdn19 in HumansBeingBros

7 ಗಂಟೆಗಳ ಹಿಂದೆ ಈ ವಿಡಿಯೋ ಅನ್ನು ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾಗಿದೆ. 12,000 ಜನರು ಲೈಕ್ ಮಾಡಿದ್ದಾರೆ. ಸುಮಾರು 250 ಜನರು ಪ್ರತಿಕ್ರಿಯಿಸಿದ್ದಾರೆ. ಗೂಬೆಯ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಕೆ ಎಷ್ಟು ಪ್ರೀತಿಯಿಂದ ಅದರ ರೆಕ್ಕೆಗಳನ್ನು ಹಿಡಿದು ಮೇಲಕ್ಕೆತ್ತಿದ್ದಾಳೆ ನೋಡಿ ಎಂದಿದ್ಧಾರೆ ಒಬ್ಬರು. ಬಹುಶಃ ಆಕೆ ಗೂಬೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಳೋ ಏನೋ, ಆಕೆಯ ಮಾತಿನಿಂದ ಇದನ್ನು ತಿಳಿಯಬಹುದಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಹುಲಾ ಹೂಪ್​; ವಿಶ್ವದಾಖಲೆ ಮಾಡಿದ ಕೋಟೇಶ್ವರಿಯ ವೈರಲ್ ವಿಡಿಯೋ

ಈ ನಿಶಾಚರಿಗಳನ್ನು ನಾನು ಬಹಳ ಪ್ರೀತಿಸುತ್ತೇನೆ, ಅವುಗಳ ಶಾಂತ ಸ್ವಭಾವ, ಮುದ್ದಾದ ಮುಖ, ಆಹಾ… ಎಂದಿದ್ದಾರೆ ಮಗದೊಬ್ಬರು. ಆ ಗೂಬೆ ಆಕೆಯ ಕೈಯಲ್ಲಿ ಇನ್ನೂ ಮುದ್ದಾಗಿ ಕಾಣುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಛೆ ನನಗೇನಾದರೂ ಈ ಗೂಬೆ ಸಿಕ್ಕಿದ್ದರೆ ಮನೆಗೆ ತಂದು ಸಾಕಿಕೊಳ್ಳುತ್ತಿದ್ದೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:11 pm, Sat, 2 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ