Viral Video: ಸಮುದ್ರದಲ್ಲಿ ದೈತ್ಯಹಡಗನ್ನು ಏರುವುದು ಹೇಗೆ ಗೊತ್ತೆ? ನೋಡಿ ಈ ವಿಡಿಯೋ
Giant Ship: ಆಕಾಶವನ್ನು ಸೇರುವಂತೆ ಕಾಣುವ ಆ ನೀಲ ಸಮುದ್ರ ಕಂಡರೆ ಯಾರಿಗೂ ಅಚ್ಚರಿಯೇ. ಆ ಸಮುದ್ರದಲ್ಲಿ ತಿಂಗಳಾನುಗಟ್ಟಲೆ ಹೊರಟ ದೊಡ್ಡ ದೊಡ್ಡ ಹಡಗಿನೊಂದಿಗೆ ಸಂಪರ್ಕ ಸಾಧಿಸುವುದು ಹೇಗೆ? ಎನ್ನುವುದು ನಿಮಗೆ ಗೊತ್ತಿದೆಯೇ? ಸಿನೆಮಾಗಳಲ್ಲಿ ಬಹುಶಃ ನೋಡಿರುತ್ತೀರಿ. ಆದರೆ ಅಲ್ಲಿ ಎಡಿಟಿಂಗ್ನ ಸಾಧ್ಯತೆಗಳಿರುತ್ತವೆ. ಇಲ್ಲಿ ಹಾಗಿಲ್ಲ, ಎಲ್ಲವೂ ನೇರಾನೇರ.
Ship: ಕಡಲುಗಳ್ಳರು ಹೀಗೆಯೇ ಹಡಗನ್ನು ಏರುತ್ತಾರೆ ಎನ್ನಿಸುತ್ತದೆ, ಸಿನೆಮಾಗಳಲ್ಲಿ ನೋಡಿರುವ ದೃಶ್ಯವೂ ಇದೇ ತೆರನಾಗಿದೆ. ಅವರೂ ಏಣಿ ಬಳಸಿಯೇ ಏರುತ್ತಾರೆ. ಸಣ್ಣ ದೋಣಿಯಿಂದ ದೊಡ್ಡ ಹಡಗಿಗೆ ನಾನು ಕೂಡ ಹೀಗೆ ಈ ಹಿಂದೆ ಏರಿದ್ದೇನೆ. ಕೆಲವೊಮ್ಮೆ ಪ್ರಯತ್ನ ಸಾಫಲ್ಯವಾಗಿದೆ ಕೆಲವೊಮ್ಮೆ ವಿಫಲ, ಏನೇ ಆಗಲಿ ಆ ಅನುಭವ ಮಾತ್ರ ಥ್ರಿಲ್ಲಿಂಗ್. ಫ್ಲೋರಿಡಾದಲ್ಲಿ (Florida) ನವೆಂಬರ್ನ ಶಾಂತ ರಾತ್ರಿಗಳಲ್ಲಿ ನಾನು ಹೀಗೆಯೇ ಹಡಗನ್ನು ಏರಿದ್ದೇನೆ… ಅಂತೆಲ್ಲ ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ. ರೆಡ್ಡಿಟ್ನಲ್ಲಿ ಈ ವಿಡಿಯೋ ಅನ್ನು 9 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಈತನಕ 25,000 ಜನರು ಲೈಕ್ ಮಾಡಿದ್ದಾರೆ. ಸುಮಾರು 1,000 ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಹಿರಿಯಣ್ಣನ ಚಾಳಿ; ದೆಹಲಿ ಮೆಟ್ರೋ ನಂತರ ಇದೀಗ ಮುಂಬೈ ಲೋಕಲ್ ಟ್ರೇನ್ನಲ್ಲಿ
1966ರಲ್ಲಿವಿಯೆಟ್ನಾಂನ LCM-8 ಲ್ಯಾಂಡಿಂಗ್ ಕ್ರಾಫ್ಟ್‌ನಲ್ಲಿ ಬೋಟ್‌ಸ್ವೈನ್ ಪೈಲಟ್ನನ್ನು ಹಡಗಿಗೆ ಕರೆದೊಯ್ಯುವುದು ಅಥವಾ ಹಡಗಿನಿಂದ ವಾಪಾಸ್ ಕರೆತರುವ ಕೆಲವನ್ನು ನಿರ್ವಹಿಸುತ್ತಿದ್ದೆ. ಆ ದೊಡ್ಡ ಹಡಗುಗಳು ಎಷ್ಟು ವೇಗದಲ್ಲಿ ಚಲಿಸುತ್ತವೆ ಎನ್ನುವುದನ್ನು ಹತ್ತಿರದಿಂದ ನೋಡುವಾಗ ನಿಜಕ್ಕೂ ಅಚ್ಚರಿಯಾಗುತ್ತದೆ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ಒಬ್ಬರು.
ಸಮುದ್ರದಲ್ಲಿ ದೊಡ್ಡ ಹಡಗನ್ನು ಏರುವುದು ಹೀಗೆ
How to enter a giant ship at sea by u/Crypto-Hypto in Damnthatsinteresting
ಈ ರೀತಿ ನನ್ನ ಚಿಕ್ಕಪ್ಪ ಹ್ಯೂಸ್ಟನ್ ಪೈಲಟ್‌ಗಳಿಗೋಸ್ಕರ ಮಾಡುತ್ತಿದ್ದರು. ಅವರು ದೋಣಿಯಲ್ಲಿ ಹೊರಟು ಹಡಗುಗಳನ್ನು ಬಂದರಿನತನಕ ಕರೆತರುತ್ತಿದ್ದರು. ಅವರು ಈ ಕೆಲಸದ ಮೂಲಕ ಸಾಕಷ್ಟು ಹಣ ಸಂಪಾದಿಸಿದರು ಎಂದಿದ್ದಾರೆ ಇನ್ನೊಬ್ಬರು. ಈ ಪ್ರಕ್ರಿಯೆಯಲ್ಲಿ ಹಡಗುಗಳ ಮಧ್ಯೆ ಸ್ಥಿರ ವಿದ್ಯುತ್ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ ಅಲ್ಲವೆ? ಈ ಬಗ್ಗೆ ತಿಳಿದುಕೊಳ್ಳಲು ಕುತೂಹಲಿಯಾಗಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಇಲ್ಲ ಹಾಗೆಲ್ಲ ಏನೂ ಆಗುವುದಿಲ್ಲ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಇವು ಮಕ್ಕಳಲ್ಲ ಕುತ್ತಿಗೆಗೆ ಇಕ್ಕಳ! ಬೈದು, ಒಂದೇಟು ಹಾಕಿ ದರದರನೆ ಎಳೆದೊಯ್ದ ‘ತಾಯಿ’
ಇಲ್ಲ, ಆದರೆ ನೀವು ಬಿದ್ದರೆ, ದೋಣಿಯ ಚಲನೆಯಿಂದ ಉಂಟಾಗುವ ಪ್ರವಾಹ ನಿಮ್ಮನ್ನು ಮುಳುಗಿಸುವ ಅಥವಾ ಪ್ರೊಪೆಲ್ಲರ್ಗಳು ನಿಮ್ಮನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆಯ ಇರುತ್ತದೆ ಎಂದಿದ್ದಾರೆ ಮತ್ತೊಬ್ಬರು. ಒಟ್ಟಾರೆ ನೆಟ್ಟಿಗರು ಈ ವಿಡಿಯೋದಡಿ ಸಾಕಷ್ಟು ಮಾಹಿತಿಪೂರಕ ಮತ್ತು ಅನುಭವಪೂರಕ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ