Viral Video: ಹುಲಾ ಹೂಪ್​; ವಿಶ್ವದಾಖಲೆ ಮಾಡಿದ ಕೋಟೇಶ್ವರಿಯ ವೈರಲ್ ವಿಡಿಯೋ

Hula Hoop: ಕೋಟೇಶ್ವರಿಯವರ ಈ ವಿಡಿಯೋ ನೋಡುತ್ತಿದ್ದಂತೆ ಖಂಡಿತ ನೀವೂ ಹುಲಾ ಹೂಪ್​ನ ಹುಚ್ಚು ಹಿಡಿಸಿಕೊಳ್ಳುತ್ತೀರಿ ಎನ್ನಿಸುತ್ತದೆ. ಮಿಲಿಯನ್​ ಜನರು ಇವರ ವಿಡಿಯೋ ನೋಡಿ ಮನಸೋತಿದ್ದಾರೆ. ಒಂದಲ್ಲ ಎರಡಲ್ಲ ಮೂರು ಮೂರು ಕೌಶಲಗಳನ್ನು ಇವರು ಒಟ್ಟಿಗೆ ನಿಭಾಯಿಸುವ ರೀತಿಗೆ ಬೆರಗಾಗಿದ್ದಾರೆ. ಚೆನ್ನೈ ಮೂಲಕ ಕೋಟೇಶ್ವರಿಯವರ ವಿಡಿಯೋಗಳನ್ನು ನೀವೂ ನೋಡಿ.

Viral Video: ಹುಲಾ ಹೂಪ್​; ವಿಶ್ವದಾಖಲೆ ಮಾಡಿದ ಕೋಟೇಶ್ವರಿಯ ವೈರಲ್ ವಿಡಿಯೋ
ತಮಿಳುನಾಡಿನ ಕಲಾವಿದೆ ಎಂ ಕೆ ಕೋಟೇಶ್ವರಿ
Follow us
ಶ್ರೀದೇವಿ ಕಳಸದ
|

Updated on:Sep 02, 2023 | 1:18 PM

Woman: ತೊಡಗಿಕೊಳ್ಳಲು ಆಸಕ್ತಿ ಮತ್ತು ಶ್ರಮಕ್ಕೆ ತೆರೆದುಕೊಳ್ಳಲು ಮನಸ್ಸಿದ್ದರೆ ಸಾಕು. ನಿಂತ ಜಾಗವೇ ರಂಗಭೂಮಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ಈ ಮಹಿಳೆ ಟೆರೇಸಿನ ಮೇಲೆ ಹುಲಾ ಹೂಪ್​ (Hula Hooping) ನೊಂದಿಗೆ ನೃತ್ಯ ಮತ್ತು ಚೆಂಡುಗಳ ಕೈಚಳಕವನ್ನು ತೋರಿದ್ದಾರೆ. ಏಕಕಾಲಕ್ಕೆ ಮೂರು ಕೌಶಲಗಳನ್ನು ಪ್ರಸ್ತುತಪಡಿಸಿದ ಈಕೆಯ ಪ್ರತಿಭೆಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆ. 17ರಂದು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 1.1 ಮಿಲಿಯನ್​ಗಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ಸುಮಾರು 17 ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಾರು ಜನರು ಇವರ ಪ್ರತಿಭೆಯನ್ನು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ : Viral Video: ಇವು ಮಕ್ಕಳಲ್ಲ ಕುತ್ತಿಗೆಗೆ ಇಕ್ಕಳ! ಬೈದು, ಒಂದೇಟು ಹಾಕಿ ದರದರನೆ ಎಳೆದೊಯ್ದ ‘ತಾಯಿ’

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇವರು ಕೋಟೇಶ್ವರಿ ಎಂ.ಕೆ. ತಮಿಳುನಾಡಿನ ಮೂಲದವರು. 1985ರಲ್ಲಿ ಹುಟ್ಟಿದ ಇವರು ಒಂದು ಕಾಲಿನ ಮೇಲೆ ಹುಲಾ ಹೂಪ್​ ಮತ್ತು ಮೂರು ಚೆಂಡುಗಳ ಕೈಚಳಕದೊಂದಿಗೆ ನೃತ್ಯವನ್ನೂ ಪ್ರದರ್ಶಿಸಿ ವಿಶ್ವದಾಖಲೆ ಮಾಡಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ಇವರು ರಿಯಾಲಿಟಿ ಷೋಗಳಲ್ಲಿಯೂ ಭಾಗವಹಿಸಿದ್ದಾರೆ. ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳನ್ನೂ ನೀಡಿದ್ದಾರೆ.

ಕೋಟೇಶ್ವರಿಯವರ ಹುಲಾ ಹೂಪ್​ ಕೌಶಲ

ನೀವು ಎಲ್ಲಿಯೂ ಮೈತೋರಿಸದೇ ನಿಮ್ಮ ಕೌಶಲವನ್ನು ಪ್ರದರ್ಶಿಸಿದ್ದು ಇಷ್ಟವಾಯಿತು ಎಂದು ಅನೇಕರು ಹೇಳಿದ್ದಾರೆ. ಅಬ್ಬಾ ಎಂಥಾ ಪ್ರತಿಭಾನ್ವಿತರು ನೀವು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಇನ್ನೂ ಕೆಲವರು. ನಿಮಗೊಂದು ಬಿಗ್ ಸೆಲ್ಯೂಟ್​ ಮತ್ತು ಗೌರವ ಎಂದಿದ್ದಾರೆ ಮತ್ತೂ ಕೆಲವರು. ಪ್ರತಿಭೆ ಎಂದರೆ ಇದು, ತಮ್ಮದೇ ಆದ ಶೈಲಿಯಲ್ಲಿ ಟ್ರೆಂಡ್ ಸೃಷ್ಟಿಸುವುದು ಎಂದಿದ್ದಾರೆ ಒಬ್ಬರು.

ನೋಡಿ ಕೋಟೇಶ್ವರಿಯವರ ಈ ಪ್ರದರ್ಶನ

ಪ್ರತಿಭೆ ಇಲ್ಲದೆಯೇ ಸುಮ್ಮನೇ ಮೆರೆಯುತ್ತಿರುವ ಪ್ರಸಿದ್ಧರೆಲ್ಲಾ ಈ ವಿಡಿಯೋ ನೋಡಬೇಕು ಎಂದಿದ್ದಾರೆ ಇನ್ನೊಬ್ಬರು. ರೆಸ್ಪೆಕ್ಟ್ ಬಟನ್ ಎಲ್ಲಿದೆ ಎಂದು ಕೇಳಿದ್ದಾರೆ ಇನ್ನೂ ಒಂದಿಷ್ಟು ಜನ. ನಿಜಕ್ಕೂ ಪದಗಳೇ ಹೊಮ್ಮುತ್ತಿಲ್ಲ, ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:17 pm, Sat, 2 September 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ