Viral Video: ಇವು ಮಕ್ಕಳಲ್ಲ ಕುತ್ತಿಗೆಗೆ ಇಕ್ಕಳ! ಬೈದು, ಒಂದೇಟು ಹಾಕಿ ದರದರನೆ ಎಳೆದೊಯ್ದ ‘ತಾಯಿ’

Kitten: ಯಾರಾದರೂ ಬೈದಿದ್ದರೆ? ಕೋಪ ಬಂದಿತ್ತೆ? ಅಮ್ಮನ ಹಾಲು ಕುಡಿದು ಬೇಸರವಾಗಿ ಏನಾದರೂ ಸ್ನ್ಯಾಕ್ಸ್ ಬೇಕು ಎನ್ನಿಸಿತ್ತೆ? ಒಂದೂ ಗೊತ್ತಿಲ್ಲ. ತನ್ನ ಪಾಡಿಗೆ ತಾನು ಹೀಗೆ ಈ ಬೆಕ್ಕಿನ ಮರಿ ಮೂಲೆಯಲ್ಲಿ ಹೋಗಿ ಕುಳಿತಿದೆ. ಅಮ್ಮನಿಗೋ ಭಯ! ಸರೀ ಬೈದು, ಒಂದೇಟು ತಲೆಗೂ ಕೊಟ್ಟು ಬಾಯಲ್ಲಿ ಕಚ್ಚಿಕೊಂಡು ಮರಳಿದೆ.

Viral Video: ಇವು ಮಕ್ಕಳಲ್ಲ ಕುತ್ತಿಗೆಗೆ ಇಕ್ಕಳ! ಬೈದು, ಒಂದೇಟು ಹಾಕಿ ದರದರನೆ ಎಳೆದೊಯ್ದ 'ತಾಯಿ'
ಮರಿಯನ್ನು ಬೈದು ಒಂದೇಟು ಹಾಕಿ ಎಳೆದೊಯ್ಯುತ್ತಿರುವ ಅಮ್ಮ ಬೆಕ್ಕು
Follow us
ಶ್ರೀದೇವಿ ಕಳಸದ
|

Updated on:Sep 02, 2023 | 11:59 AM

Viral Video: ಒಂದು ಮಗುವನ್ನು ಸಂಭಾಳಿಸುವ ಹೊತ್ತಿಗೆ ತಾಯಿಯಾದವಳಿಗೆ ಸಾಕುಸಾಕೆನ್ನಿಸುತ್ತಿರುತ್ತದೆ. ಅಂಥದ್ದರಲ್ಲಿ ಬೆಕ್ಕು (Cat) ಅಥವಾ ನಾಯಿ ನಾಲ್ಕೈದು ಮರಿಗಳನ್ನು ಹೊತ್ತು ಹೆತ್ತು ಬೆಳೆಸುವುದೆಂದರೆ!? ಈ ಜನ್ಮದಲ್ಲಿ ಇದೇ ಕೊನೇ ಹೆರಿಗೆ ಎಂಬಂಥ ಭಾವ ಆ ಪ್ರಾಣಿಗಳಲ್ಲಿ ಬೇರೂರಿರುತ್ತದೆ. ಇದೀಗ ನೋಡಿ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ವೈರಲ್ ಆಗಿದೆ. ಎಷ್ಟು ಹೇಳಿದರೂ ಮಾತು ಕೇಳದ ಮರಿಯ ಸಲುವಾಗಿ ತಲೆ ಕೆಡಿಸಿಕೊಂಡ ಬೆಕ್ಕಮ್ಮ ಮರಿಯನ್ನು ಸಮಾ ಬೈದು ಅದರ ತಲೆಗೆ ಒಂದು ಏಟು ಕೊಟ್ಟು ಬಾಯಲ್ಲಿ ಹಿಡಿದುಕೊಂಡು ದರದರನೆ ಎಳೆದುಕೊಂಡು ಹೋಗಿದ್ದಾಳೆ!

ಇದನ್ನೂ ಓದಿ : Viral Video: ಬ್ರೇನ್ ಹ್ಯಾಮ್​ರೇಜ್; ಎರಡು ವರ್ಷಗಳಿಂದ ನನ್ನಾಕೆಯ ಮಾತುಗಳಿಗಾಗಿ ಕಾಯುತ್ತಿದ್ದೇನೆ, ಮ್ಯಾಜಿಕ್ ಆಗುವುದೆ?

ನಾಯಿಯನ್ನು ಕಟ್ಟಿಹಾಕಬಹುದು. ಆದರೆ ಬೆಕ್ಕನ್ನು? ಹುಟ್ಟುತ್ತಲೇ ಹರಿದಾಡುವ ಮರಿಗಳನ್ನು ಸಂಭಾಳಿಸುವುದು ನಿಜಕ್ಕೂ ದೊಡ್ಡ ಸವಾಲು. ಅಮ್ಮಬೆಕ್ಕಿಗಂತೂ ಜೀವವೇ ಬಾಯಿಗೆ ಬರುತ್ತಿರುತ್ತದೆ. ಒಂದನ್ನು ಹಿಡಿಯಹೋದರೆ ಇನ್ನೊಂದು, ಇನ್ನೊಂದನ್ನು ಹಿಡಿಯಹೋದರೆ ಮತ್ತೊಂದು, ಮತ್ತೊಂದನ್ನು ಹಿಡಿಯಹೋದರೆ ಮಗದೊಂದು… ಒಟ್ಟು ಅಮ್ಮನ ತಲೆ ಚಿಟ್ಟು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಮ್ಮಬೆಕ್ಕು ಮರಿಯ ತಲೆಗೆ ಏಟು ಕೊಟ್ಟ ವಿಡಿಯೋ

Little kitten gets scolded by its mom for venturing outside the house by u/RealRock_n_Rolla in MadeMeSmile

ನಿನ್ನೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 5,700 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ರಸ್ತೆಯ ಮೂಲೆಯೊಂದರಲ್ಲಿ ಈ ಮರಿಬೆಕ್ಕು ಯಾಕೆ ಹೋಗಿ ಕುಳಿತಿತ್ತೋ ಗೊತ್ತಿಲ್ಲ. ಅಂತೂ ಕೋಪಗೊಂಡ ಅಮ್ಮ ಸರೀ ಹೊಡೆದು ಎಳೆದುಕೊಂಡು ಬಂದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ : Viral Video: ಹೀಗೆ ಪ್ರೀತಿಯಿಂದ ತಬ್ಬಿಕೊಳ್ಳುವುದೇ ಮನುಷ್ಯನ ಜೀವಮಾನದ ಗುರಿ

ನನ್ನ ಅಮ್ಮನೂ ನನಗೆ ಹೀಗೇ ಬೈದು ಹೊಡೆದು ರೋಡಿನಿಂದ ಎಳೆದುಕೊಂಡು ಬರುತ್ತಿದ್ದಳು ಎಂದಿದ್ದಾರೆ ಒಬ್ಬರು. ಎಷ್ಟು ಮುದ್ದಾಗಿ ಏಟು ಕೊಟ್ಟಿದೆ ಅಮ್ಮಬೆಕ್ಕು, ಎಂದೂ ಇಂಥ ದೃಶ್ಯ ನೋಡಿರಲಿಲ್ಲ. ಇದು ಬಹಳ ಮುದ್ದಾಗಿದೆ ಎಂದಿದ್ದಾರೆ ಇನ್ನೊಬ್ಬರು. ನಾನು ನನ್ನ ಮಗಳಿಗೆ ಹೀಗೆ ಮಾಡುವುದು ಎಂದಿದ್ದಾರೆ ಮತ್ತೊಬ್ಬರು. ಅನೇಕರು ಈ ವಿಡಿಯೋ ನೋಡಿ ಬಿದ್ದುಬಿದ್ದು ನಕ್ಕಿದ್ದಾರೆ. ಅಮ್ಮಾ ಬಹಳ ಸ್ಟ್ರಿಕ್ಟ್​! ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:58 am, Sat, 2 September 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್