ಅದೊಂದು ವಿಲಕ್ಷಣ ಪ್ರಪಂಚವಿತ್ತು, ಅಲ್ಲಿ ಅಣ್ಣ-ತಂಗಿ ಮದುವೆಯಾಗುತ್ತಿದ್ದರು! ಯಾವುದಪ್ಪಾ ಆ ವಿಚಿತ್ರ ದೇಶ? ಯಾಕೆ ಹಾಗೆ ಎಂದು ನಿಮಗೆ ತಿಳಿದಿದೆಯೇ?
ಈಜಿಪ್ಟ್‌ನ ರಾಜ ಕುಟುಂಬಗಳಲ್ಲಿ ಅಣ್ಣ, ತಂಗಿ ವಿವಾಹವಾಗುತ್ತಿದ್ದರು. ಕೆಲವೊಮ್ಮೆ ತಂದೆಯೇ ಮಗಳನ್ನು ಮದುವೆ ಆಗುತ್ತಿದ್ದ. 1961 BC ಯಿಂದ 1917 BC ವರೆಗೆ ಆಳಿದ ಸೆನ್ವೊರೆಟ್ ತನ್ನ ಸಹೋದರಿಯನ್ನೇ ಮದುವೆಯಾದ. 1525 BC ಯಿಂದ 1504 BC ವರೆಗೂ ಆಳಿದ ಅಮೆನ್ ಹುಟೆಪ್ I, 51 BC ಯಿಂದ 40 BC ವರೆಗೆ ಆಳಿದ ಆತನ ಸಹೋದರಿ ಕ್ಲಿಯೋಪಾತ್ರ VII ಳನ್ನೇ ವಿವಾಹವಾದ. ಇದರ ಹೊರತಾಗಿ ರಾಮೇಸೆಸ್ ॥ ತನ್ನ ಮಗಳನ್ನೇ ಮದುವೆಯಾಗಿದ್ದ ಎಂದೂ ಹೇಳಲಾಗುತ್ತದೆ.
ರೋಮನ್ ಆಳ್ವಿಕೆಗೂ ಮೊದಲು ರಾಜಮನೆತದಿಂದ ಹೊರತಾದವರಲ್ಲಿ ಒಡಹುಟ್ಟಿದವರ ನಡುವೆ ವಿವಾಹ ಸಂಬಂಧ ಏರ್ಪಡುತ್ತಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಅಂತಹ ಒಡಹುಟ್ಟಿದವರ ನಡುವೆ (Brothers Sisters) ಹೆಚ್ಚು ಹೆಚ್ಚು ವಿವಾಹ ಬಂಧಗಳು ಏರ್ಪಡುತ್ತಿದ್ದವು ಎಂಬ ದಾಖಲೆಗಳೂ ಇವೆ. ಹೊಸ ಸಾಮ್ರಾಜ್ಯದ ಆರಂಭದಿಂದಲೂ ಅಂದರೆ 1550 BC ಯಿಂದ 1070 BC ಅವಧಿಯಲ್ಲಿ, ಈಜಿಪ್ಟಿನ ಪರಿಭಾಷೆಯಲ್ಲಿನ ಬದಲಾವಣೆಗಳ ಫಲವಾಗಿ (Ancient Egyptian Society and Family Life) ಒಡಹುಟ್ಟಿದವರ ವಿವಾಹಗಳನ್ನು ಗುರುತಿಸಲು ಕಷ್ಟವಾಯಿತು.
ಈಜಿಪ್ಟ್ ರಾಜ ಮನೆತನಗಳ (Egyptians) ಬಗ್ಗೆ ನಂಬಲು ಆಗದಂತಹ ಸುದ್ದಿಗಳು ಆಗಾಗ ಹರಿದಾಡುತ್ತವೆ. ಈಜಿಪ್ಟಿನ ರಾಜಮನೆತನಗಳಲ್ಲಿ (Egypt marriage) ಅವರವರ ಸ್ವಂತ ಮನೆಯವರನ್ನೇ ವಿವಾಹವಾಗತೊಡಗಿದ್ದರು. ಆದರೆ, ಇದಕ್ಕೆ ಏನಾದರೂ ಕಾರಣವಿದೆಯೇ? ಅಂದರೆ ಉತ್ತರ ಹೌದು. ಈಜಿಪ್ಟ್‌ನಲ್ಲಿ, ಅದು ರಾಜಮನೆತನದವರಾಗಿರಲಿ ಅಥವಾ ಸಾಮಾನ್ಯ ಕುಟುಂಬಗಳಾಗಿರಲಿ, ಅವರ ಮೊದಲ ಪ್ರಯತ್ನವು ಕುಟುಂಬದವರನ್ನೇ ಮದುವೆಯಾಗುವುದು ಎಂಬುದಾಗಿತ್ತು. ಇನ್ನು ಸಾಮಾನ್ಯ ಜನರಲ್ಲಿ ಒಡಹುಟ್ಟಿದವರ ಮಧ್ಯೆ ವಿವಾಹಗಳು ಏರ್ಪಡುವುದು ಸಾಮಾನ್ಯವಾಗಿದ್ದವು. ಕ್ರಿ.ಪೂ. 20 ರಿಂದ ಕ್ರಿ.ಶ. 395 ರವರೆಗೆ ಮದುವೆಗಳು ಹೀಗೆಯೇ ಮುಂದುವರಿದವು. ಅದು ರೋಮನ್ ರಾಜಪ್ರಭುತ್ವ ಪ್ರಭಾವದ ಅವಧಿ. ಆದರೆ ಆ ಅವಧಿಗೆ ಮೊದಲು ಸಹೋದರ ಸಹೋದರಿಯರ ನಡುವೆ ವಿವಾಹ ನಡೆಯುತ್ತಿದ್ದ ಪ್ರಕರಣಗಳು ಬಹಳ ಕಡಿಮೆ ಇದ್ದವು.
ಈಜಿಪ್ಟ್‌ನ ರಾಜ ಕುಟುಂಬಗಳಲ್ಲಿ ಅಣ್ಣ ಮತ್ತು ತಂಗಿಯರು ವಿವಾಹವಾಗುತ್ತಿದ್ದರು. ಕೆಲವೊಮ್ಮೆ ತಂದೆಯೇ ತನ್ನ ಮಗಳನ್ನು ಮದುವೆಯಾಗುತ್ತಿದ್ದ ಘಟನೆಗಳೂ ಜರುಗುತ್ತಿದ್ದವು. ಉದಾಹರಣೆಗೆ 1961 BC ಯಿಂದ 1917 BC ವರೆಗೆ ಆಳಿದ ಸೆನ್ವೊರೆಟ್ ತನ್ನ ಸಹೋದರಿಯನ್ನೇ ಮದುವೆಯಾದನು. 1525 BC ಯಿಂದ 1504 BC ವರೆಗೂ ಆಳಿದ ಅಮೆನ್ ಹುಟೆಪ್ I, 51 BC ಯಿಂದ 40 BC ವರೆಗೆ ಆಳಿದ ಆತನ ಸಹೋದರಿ ಕ್ಲಿಯೋಪಾತ್ರ VII ಳನ್ನೇ ವಿವಾಹವಾದ. ಇದರ ಹೊರತಾಗಿ ರಾಮೇಸೆಸ್ ॥ ತನ್ನ ಮಗಳನ್ನೇ ಮದುವೆಯಾಗಿದ್ದ ಎಂದೂ ಹೇಳಲಾಗುತ್ತದೆ.
ಈಜಿಪ್ಟಿನ ರಾಜಪ್ರಭುತ್ವದಲ್ಲಿ ಬಹು ಪತ್ನಿತ್ವ ಸಹ ಸಾಮಾನ್ಯವಾಗಿತ್ತು. ರಾಜಪ್ರಭುತ್ವಕ್ಕೆ ಸಂಬಂಧಿಸಿದ ಅನೇಕ ಜನರು ತಮ್ಮ ಸಹೋದರಿಯರನ್ನೇ ಮದುವೆಯಾಗುತ್ತಿದ್ದರು ಎಂದು ತಜ್ಞರು ಹೇಳುತ್ತಾರೆ. ಈಜಿಪ್ಟ್ ನಾಗರಿಕತೆಯಲ್ಲಿ ಒಸಿರಿಸ್ ಮುಖ್ಯ ದೇವರು ಎಂದು ಪರಿಗಣಿಸಲಾಗಿದೆ. ಐಸಿಸ್ ಆತನ ಸಹೋದರಿ ಎಂದು ನಂಬಲಾಗಿದೆ. ಈಜಿಪ್ಟಿನ ರಾಜಪ್ರಭುತ್ವದಲ್ಲಿ ಆತ ತನ್ನನ್ನು ತಾನು ದೇವರು ಎಂದು ಘೋಷಿಸಿಕೊಂಡಿದ್ದ ಎನ್ನಲಾಗುತ್ತದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ