Krishna Janmashtami 2023: ಜನ್ಮಾಷ್ಟಮಿಯ ದಿನ ಶ್ರೀ ಕೃಷ್ಣನಿಗೆ ಪ್ರಿಯವಾದ ಪಂಚಾಮೃತ ತಯಾರಿಸಿ, ಇದು ಆರೋಗ್ಯಕ್ಕೂ ಉತ್ತಮ
Panchamrita Prasada Recipe: ಇನ್ನೇನು ಜನ್ಮಾಷ್ಟಮಿ ಹಬ್ಬ ಬಂದೇ ಬಿಟ್ಟಿತು. ಜನ್ಮಾಷ್ಟಮಿಯಂದು ನೈವೇದ್ಯ ರೂಪದಲ್ಲಿ ಮಾಡುವ ಪಂಚಾಮೃತವು ಬಹಳ ವಿಶೇಷ. ಶ್ರೀ ಕೃಷ್ಣನಿಗೆ ಪಂಚಾಮೃತವು ಅತ್ಯಂತ ಪ್ರಿಯವಾದುದು, ಹಾಗಾಗಿ ಈ ಬಾರಿಯ ಗೋಕುಲಾಷ್ಟಮಿಯ ದಿನ ಶ್ರೀ ಕೃಷ್ಣನಿಗೆ ಪಂಚಾಮೃತವನ್ನು ನೈವೇದ್ಯವನ್ನಾಗಿ ಅರ್ಪಿಸಿ. ಈ ನೈವೇದ್ಯ ಪ್ರಸಾದ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಾಗಾದರೆ ಇದರ ಆರೋಗ್ಯ ಪ್ರಯೋಜನಗಳು ಮತ್ತು ಪಂಚಾಮೃತವನ್ನು ತಯಾರಿಸುವ ಸರಿಯಾದ ವಿಧಾನವನ್ನು ತಿಳಿಯೋಣ.
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಯಾವುದೇ ಪೂಜೆಯಲ್ಲಿ ಪಂಚಾಮೃತವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೇವಾಲಯಗಳಲ್ಲಿ ದೇವರಿಗೆ ಪಂಚಾಮೃತದ ಅಭಿಶೇಕ ಮಾಡಿ ಅದನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ನೈವೇದ್ಯದ ರೂಪದಲ್ಲಿ ಪಂಚಾಮೃತವನ್ನು ಅರ್ಪಿಸಿ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಪಂಚಾಮೃತವನ್ನು ತಯಾರಿಸಲಾಗುತ್ತದೆ. ಪಂಚಾಮೃತ ಎಂದರೆ ಐದು ಅಮೃತಗಳು. ಈ ಮಿಶ್ರಣಗಳಿಂದ ಮಾಡಿದ ಪಂಚಾಮೃತವನ್ನು ನೈವೇದ್ಯ ರೂಪದಲ್ಲಿ ಶ್ರೀ ಕೃಷ್ಣನಿಗೆ ಅರ್ಪಿಸುವುದರಿಂದ ಶ್ರೀಕೃಷ್ಣ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯಿದೆ. ಪಂಚಾಮೃತವು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಅದನ್ನು ಸೇವಿಸುವುದರಿಂದ ವ್ಯಕ್ತಿಯು ಅನೇಕ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯುತ್ತಾನೆ. ಪಂಚಾಮೃತ ಮಾಡುವ ಸರಿಯಾದ ವಿಧಾನ ಮತ್ತು ಅದರ ಪ್ರಯೋಜನಗಳನ್ನು ತಿಳಿಯೋಣ.
ಪಂಚಾಮೃತವನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
• ಹಸುವಿನ ಹಾಲು
• ಮೊಸರು
• ಹಸುವಿನ ತುಪ್ಪ
• ಜೇನುತುಪ್ಪ
• ಕಲ್ಲು ಸಕ್ಕರೆ ಅಥವಾ ಸಕ್ಕರೆ
• ತುಳಸಿ ಎಲೆ
• ಬಾಳೆಹಣ್ಣು
ಪಂಚಾಮೃತವನ್ನು ತಯಾರಿಸುವ ವಿಧಾನ:
ಪಂಚಾಮೃತವನ್ನು ಮಾಡಲು ಮೊದಲು ಒಂದು ಪಾತ್ರೆಯಲ್ಲಿ ಗಟ್ಟಿ ಮೊಸರರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಅದಕ್ಕೆ ಹಾಲನ್ನು ಸೇರಿಸಿ ಈ ಎರಡು ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಈಗ ಅದಕ್ಕೆ ಜೇನುತುಪ್ಪ, ಹಸುವಿನ ತುಪ್ಪ ಮತ್ತು ಸಕ್ಕರೆ ಅಥವಾ ಕಲ್ಲು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಈ ಮಿಶ್ರಣವನ್ನು ಬೆರೆಸುತ್ತಾ ಇರಿ. ಈ ಮಿಶ್ರಣವು ಸಂಪೂರ್ಣವಾಗಿ ತಯಾರಾದ ಬಳಿಕ ಅದಕ್ಕೆ ಕತ್ತರಿಸಿದ ಬಾಳೆಹಣ್ಣು ಮತ್ತು ಒಣಹಣ್ಣುಗಳನ್ನು ಸೇರಿಸಿ. ಹಾಗೂ ಅದಕ್ಕೆ 8 ರಿಂದ 10 ತುಳಸಿ ಎಲೆಗಳನ್ನು ಸೇರಿಸಿ ಶ್ರೀ ಕೃಷ್ಣನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.
ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನಾಂಕ, ಪೂಜಾ ಮುಹೂರ್ತ, ಆಚರಣೆ ಹೇಗೆ? ಯಾವ ಮಂತ್ರ ಪಠಣ ಮಾಡಬೇಕು?
ಪಂಚಾಮೃತದ ಆರೋಗ್ಯ ಪ್ರಯೋಜನಗಳು:
• ಪಂಚಾಮೃತವು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ.
• ಪಂಚಾಮೃತವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.
• ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ.
• ಇದು ಚರ್ಮಕ್ಕೂ ಪ್ರಯೋಜನಕಾರಿ.
• ಕೂದಲನ್ನು ಆರೋಗ್ಯಕವಾಗಿರಿಸುತ್ತದೆ.
• ನಿಮಗೆ ಸಮಯಕ್ಕೆ ಸರಿಯಾಗಿ ಹಸಿವಾಗದಿದ್ದರೆ, ನೀವು ಪಂಚಾಮೃತವನ್ನು ಸೇವೆ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು.
• ಪಂಚಾಮೃತದ ಸೇವನೆಯಿಂದ ಮನಸ್ಸು ಶಾಂತವಾಗಿರುತ್ತದೆ ಮತ್ತು ಕೋಪ ಬರುವುದಿಲ್ಲ.
• ಆಯುರ್ವೇದದ ಪ್ರಕಾರ ಪಂಚಾಮೃತವನ್ನು ಗರ್ಭಾವಸ್ಥೆಯಲ್ಲಿ ಸೇವಿಸಿದರೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯಕರವಾಗಿರುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: