Sri Krishna Janmashtami 2023: ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನಾಂಕ, ಪೂಜಾ ಮುಹೂರ್ತ, ಆಚರಣೆ ಹೇಗೆ? ಯಾವ ಮಂತ್ರ ಪಠಣ ಮಾಡಬೇಕು?
ಈ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಎರಡು ಶುಭ ಯೋಗದ ಬಂದಿದೆ. ಈ ದಿನ ರವಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗವನ್ನು ನಿರೂಪಿಸಲಾಗಿದೆ. ಜನ್ಮಾಷ್ಟಮಿಯಂದು ಇಡೀ ದಿನ ಇರುವ ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶುಭ ದಿನವಾಗಿದೆ. ಈ ಯೋಗದಲ್ಲಿ ಮಾಡಿದ ಎಲ್ಲಾ ಕೆಲಸಗಳು ಭಕ್ತರಿಗೆ ಸಾಕಷ್ಟು ಒಳ್ಳೆಯ ಫಲಗಳನ್ನು ಕೊಡುತ್ತದೆ ಎಂದು ನಂಬಲಾಗಿದೆ.
ಪ್ರತಿ ವರ್ಷ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶ್ರೀಕೃಷ್ಣನು ಈ ದಿನದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಹಾಗಾಗಿ ಈ ದಿನವನ್ನು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ ಯಾವಾಗ?
ಈ ವರ್ಷ ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಜನ್ಮಾಷ್ಟಮಿಯಂದು ರಾತ್ರಿ ಬರುತ್ತದೆ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 6 ರಂದು ಬರುತ್ತದೆಯೇ ಅಥವಾ ಸೆಪ್ಟೆಂಬರ್ 7 ರಂದು ಬರುತ್ತದೆಯೇ ಎಂದು ಭಕ್ತರು ಅನಿಶ್ಚಿತರಾಗಿದ್ದಾರೆ. ದೃಕ್ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿ ಸತತ ಎರಡು ದಿನಗಳಲ್ಲಿಯೂ ಆಚರಿಸಲಾಗುತ್ತದೆ. ಅಷ್ಟಮಿ ತಿಥಿ ಸೆಪ್ಟೆಂಬರ್ 06, 2023 ರಂದು ಸಂಜೆ 15:37 ಕ್ಕೆ ಆರಂಭವಾಗಿ ಮತ್ತು ಸೆಪ್ಟೆಂಬರ್ 07, ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ಹಬ್ಬವನ್ನು ಎರಡೂ ದಿನಗಳಲ್ಲಿ ಆಚರಿಸಲಾಗುತ್ತದೆ. ಇನ್ನು ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 09:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10:25 ರವರೆಗೆ ಇರುತ್ತದೆ. ಹೆಚ್ಚಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತದೆ. ಏಕೆಂದರೆ ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಕೃಷ್ಣ ಜನ್ಮೋತ್ಸವ ರಾತ್ರಿ ಒಟ್ಟಿಗೆ ಬಂದ ದಿನವನ್ನು ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ 2023ರ ಪೂಜಾ ಮುಹೂರ್ತ
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪೂಜೆಗೆ ಶುಭ ಸಮಯ ರಾತ್ರಿ 11:57 ಕ್ಕೆ ಪ್ರಾರಂಭವಾಗುತ್ತದೆ. ಗೋಪಾಲನ ಜನ್ಮ ವಾರ್ಷಿಕೋತ್ಸವ ಮತ್ತು ಪೂಜೆ ಮಧ್ಯರಾತ್ರಿ 12.42 ರವರೆಗೆ ಇರುತ್ತದೆ.
ಈ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಎರಡು ಶುಭ ಯೋಗದ ಬಂದಿದೆ. ಈ ದಿನ ರವಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗವನ್ನು ನಿರೂಪಿಸಲಾಗಿದೆ. ಜನ್ಮಾಷ್ಟಮಿಯಂದು ಇಡೀ ದಿನ ಇರುವ ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶುಭ ದಿನವಾಗಿದೆ. ಈ ಯೋಗದಲ್ಲಿ ಮಾಡಿದ ಎಲ್ಲಾ ಕೆಲಸಗಳು ಭಕ್ತರಿಗೆ ಸಾಕಷ್ಟು ಒಳ್ಳೆಯ ಫಲಗಳನ್ನು ಕೊಡುತ್ತದೆ ಎಂದು ನಂಬಲಾಗಿದೆ. ರವಿ ಯೋಗವು ಬೆಳಿಗ್ಗೆ 06:01 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 09:20 ರವರೆಗೆ ಇರುತ್ತದೆ.
ಜನ್ಮಾಷ್ಟಮಿ 2023 ಉಪವಾಸ ಸಮಯ
ಜನ್ಮಾಷ್ಟಮಿ ಉಪವಾಸವನ್ನು ಸಾಮಾನ್ಯವಾಗಿ ಶ್ರೀ ಕೃಷ್ಣನ ಜನನದ ನಂತರ ಆಚರಿಸಲಾಗುತ್ತದೆ. ಈ ವರ್ಷ ಭಕ್ತರು ರಾತ್ರಿ 12:42 ರ ನಂತರ ಜನ್ಮಾಷ್ಟಮಿಯ ವ್ರತ ಆಚರಿಸಬಹುದು. ಅಥವಾ ಮರುದಿನ ಸೂರ್ಯೋದಯದ ನಂತರ ಜನ್ಮಾಷ್ಟಮಿಯನ್ನು ಆಚರಿಸುವುದಾದರೇ, ಭಕ್ತರು ಸಪ್ಟೆಂಬರ್ 7 ರಂದು ಬೆಳಿಗ್ಗೆ 06:02 ರಿಂದ ಆಚರಿಸಬಹುದು.
ಇದನ್ನೂ ಓದಿ: ಕೃಷ್ಣ ರಾಧೆಯ ಕಣ್ಮನ ಸೆಳೆಯುವ ದೃಶ್ಯ ಇಲ್ಲಿದೆ ನೋಡಿ
ಕೃಷ್ಣನಿಗೆ ಯಾವ ಬಣ್ಣ ಪ್ರೀಯ?
ಸನಾತನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದ ಬಣ್ಣ ಹಳದಿ ಬಣ್ಣವಾಗಿದೆ. ಈ ಬಣ್ಣವು ಭಗವಾನ್ ವಿಷ್ಣುವನ್ನು ಮತ್ತು ಬೃಹಸ್ಪತಿ ದೇವರ ಸಂಕೇತವಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಗುರು ಗ್ರಹದ ಪ್ರಭಾವ ಹೆಚ್ಚಾಗುತ್ತದೆ ಎನ್ನಲಾಗಿದೆ. ಹಾಗಾಗಿ ಹೆಚ್ಚಿನ ಜನರು ಮಂಗಳ ಕಾರ್ಯಗಳಲ್ಲಿ ಹಳದಿ ಬಣ್ಣವನ್ನು ಬಳಸುತ್ತಾರೆ.
ಕೃಷ್ಣ ಜನ್ಮಾಷ್ಟಾಮಿಯಂದು ಯಾವ ಮಂತ್ರ ಜಪಿಸಬೇಕು?
-‘ಓಂ ದೇವಿಕಾನಂದನಾಯ ವಿಧ್ಮಹೇ ವಾಸುದೇವಾಯ ಧೀಮಹಿ ತನ್ನೋ ಕೃಷ್ಣಃ ಪ್ರಚೋದಯಾತ್’
– ‘ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ, ಹೇ ನಾಥ ನಾರಾಯಣ ವಾಸುದೇವಂ ಭಜೇ’
-‘ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ ।
ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮೃತಂ ಕೃಧಿ ।।
-”ದೇವಕೀಸುತಂ ಗೋವಿಂದಂ ವಾಸುದೇವ ಜಗತ್ಪತೇ| ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ||
-ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ
-‘ಓಂ ನಮೋ ಭಗವತೇ ಶ್ರೀ ಗೋವಿಂದಾ’
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 1 September 23