AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ದರೋಡೆಗೆ ಬಂದು ಬ್ಯಾಂಕನ್ನು ಹೊಗಳಿ ಹೋದ ಕಳ್ಳ!

ಬಾಗಿಲು ತೆರೆದು ಕಳ್ಳ ಒಳಗೆ ಹೋಗಿದ್ದರೂ ಲಾಕರ್‌ಗಳನ್ನು ಒಡೆಯಲಾಗಿಲ್ಲ. ಬ್ಯಾಂಕ್​ನಲ್ಲಿ ತನ್ನ ಬೆರಳಚ್ಚುಗಳು ಎಲ್ಲಿಯೂ ಸಿಗದಂತೆ ಎಚ್ಚರ ವಹಿಸಿರುವ ಆತ ಬ್ಯಾಂಕ್ ಭದ್ರತೆಯನ್ನು ಮೆಚ್ಚಿ, ಗುಡ್ ಬ್ಯಾಂಕ್ ಎಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಾನೆ.

Viral News: ದರೋಡೆಗೆ ಬಂದು ಬ್ಯಾಂಕನ್ನು ಹೊಗಳಿ ಹೋದ ಕಳ್ಳ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on:Sep 02, 2023 | 12:29 PM

Share

ಬ್ಯಾಂಕ್​ನಲ್ಲಿ ದರೋಡೆ ಮಾಡಲು ಹೋದ ಕಳ್ಳನೊಬ್ಬನಿಗೆ ಆ ಬ್ಯಾಂಕ್​ನ ಲಾಕರ್​​ಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಇದರಿಂದ ಬೇಸರಗೊಂಡರೂ ಬ್ಯಾಂಕ್​ನ ಭದ್ರತಾ ವ್ಯವಸ್ಥೆಯನ್ನು ಮೆಚ್ಚಿದ ಆತ ಒಳ್ಳೆಯ ಬ್ಯಾಂಕ್ ಎಂದು ಹೊಗಳಿ ಬ್ಯಾಂಕ್​ನ ಮೇಜಿನ ಮೇಲೆ ಚೀಟಿ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಬೆಳಗ್ಗೆ ಬಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗುರುವಾರ ರಾತ್ರಿ ನೆನ್ನಲ್ ಮಂಡಲದಲ್ಲಿರುವ ತೆಲಂಗಾಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಸಿಬ್ಬಂದಿ ಬ್ಯಾಂಕ್​ಗೆ ಬಂದಾಗ ರಾತ್ರಿ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ‘ಆಲಿಯಾ ಭಟ್​ ಬೇಕು’ ಎಂದ ಶಾರುಖ್​ ಖಾನ್​; ವಿಡಿಯೋ ವೈರಲ್​ ಆದ ಬಳಿಕ ನಟಿ ನೀಡಿದ ಪ್ರತಿಕ್ರಿಯೆ ಏನು?

ರಾತ್ರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳ ಲಾಕರ್‌ಗಳನ್ನು ತೆರೆಯಲು ವಿಫಲವಾಗಿದ್ದಾನೆ. ಬ್ಯಾಂಕ್​ನಲ್ಲಿ ತನ್ನ ಬೆರಳಚ್ಚುಗಳು ಎಲ್ಲಿಯೂ ಸಿಗದಂತೆ ಎಚ್ಚರ ವಹಿಸಿರುವ ಆತ ಬ್ಯಾಂಕ್ ಭದ್ರತೆಯನ್ನು ಮೆಚ್ಚಿ, ಗುಡ್ ಬ್ಯಾಂಕ್ ಎಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಾನೆ.

ಬ್ಯಾಂಕ್ ಸಿಬ್ಬಂದಿ ಮರುದಿನ ಬೆಳಗ್ಗೆ ಕಚೇರಿಗೆ ಬಂದಾಗ ಬ್ಯಾಂಕ್​ನ ಮುಖ್ಯ ಬಾಗಿಲನ್ನು ಯಾರೋ ಬಲವಂತವಾಗಿ ತೆರೆಯಲು ಯತ್ನಿಸಿರುವುದು ಗೊತ್ತಾಗಿದೆ. ಬಾಗಿಲು ತೆರೆದು ಕಳ್ಳ ಒಳಗೆ ಹೋಗಿದ್ದರೂ ಲಾಕರ್‌ಗಳನ್ನು ಒಡೆಯಲಾಗಿಲ್ಲ. ಆ ಲಾಕರ್​ನಲ್ಲಿ ಇದ್ದ ಬೆಲೆಬಾಳುವ ವಸ್ತುಗಳು ಹಾಗೇ ಇದ್ದವು. ಮೇಜಿನ ಮೇಲೊಂದು ಚೀಟಿ ಇಟ್ಟು ಹೋಗಿರುವ ಕಳ್ಳ, ನಿಮಗೆ ನನ್ನ ಫಿಂಗರ್‌ಪ್ರಿಂಟ್‌ಗಳು ಸಿಗುವುದಿಲ್ಲ. ನಿಮ್ಮದು ಉತ್ತಮ ಬ್ಯಾಂಕ್. ನಿಮ್ಮ ಬ್ಯಾಂಕ್​ನಿಂದ ನನಗೆ 1 ರೂಪಾಯಿಯನ್ನೂ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ನನ್ನನ್ನು ಹಿಡಿಯಬೇಡಿ ಎಂದು ಆತ ಬರೆದಿಟ್ಟಿದ್ದಾನೆ.

ಕಳ್ಳನ ಚಲನವಲನಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಹಚ್ಚಬಾರದೆಂದು ಅವನು ತನ್ನ ಮುಖವನ್ನು ಮುಚ್ಚಿಕೊಂಡಿದ್ದ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Sat, 2 September 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ