AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಿರಿಯಣ್ಣನ ಚಾಳಿ; ದೆಹಲಿ ಮೆಟ್ರೋ ನಂತರ ಇದೀಗ ಮುಂಬೈ ಲೋಕಲ್​ ಟ್ರೇನ್​ನಲ್ಲಿ

Mumbai: ಮೆಟ್ರೋ ರೈಲುಗಳಲ್ಲಿ ನಡೆಯುವ ಚಟುವಟಿಕೆಗಳು ದಿನವೂ ವೈರಲ್ ಆಗುತ್ತಲೇ ಇರುತ್ತವೆ. ರೀಲಿಗರ ಹಾವಳಿಯಂತೂ ಹೇಳತೀರದು. ಲೇಡೀಸ್ ಕೋಚ್​ನಲ್ಲಿ ಪ್ರವೇಶಿಸಿದ ಯುವಕನ ಜಗಳ, ಸುಮ್ಮಸುಮ್ಮನೇ ಹೆಣ್ಣುಮಕ್ಕಳೊಂದಿಗೆ ಜಗಳಕ್ಕಿಳಿದ ಮಹಿಳೆ, ಪರಸ್ಪರ ಜಗಳಕ್ಕಿಳಿದ ಮಹಿಳೆಯರು, ಪುರುಷರು... ಒಂದೇ ಎರಡೇ? ಇದೀಗ ಮುಂಬೈ ಲೋಕಲ್​ ಟ್ರೇನಿನೊಳಗೆ ಏನು ನಡೆದಿದೆ ನೀವೇ ನೋಡಿ.

Viral Video: ಹಿರಿಯಣ್ಣನ ಚಾಳಿ; ದೆಹಲಿ ಮೆಟ್ರೋ ನಂತರ ಇದೀಗ ಮುಂಬೈ ಲೋಕಲ್​ ಟ್ರೇನ್​ನಲ್ಲಿ
ಮುಂಬೈ ಲೋಕಲ್​ ಟ್ರೇನಿನಲ್ಲಿ ಸೀಟಿಗಾಗಿ ಪುರುಷರಿಬ್ಬರ ಜಗಳ
ಶ್ರೀದೇವಿ ಕಳಸದ
|

Updated on:Sep 02, 2023 | 2:04 PM

Share

Mumbai: ಮೆಟ್ರೋದ ಅನುಕೂಲಕರ ಪ್ರಯಾಣಕ್ಕಿಂತ ಅದರೊಳಗೆ ನಡೆಯುವ ಚಟುವಟಿಕೆಗಳಿಂದಾಗಿ ಅದು ಹೆಚ್ಚು ಗಮನ ಸೆಳೆಯುತ್ತಿದೆ. ನಿನ್ನೆಯಷ್ಟೇ ನಾಗಪುರ ಮೆಟ್ರೋದಲ್ಲಿ ಫ್ಯಾಷನ್​ ಷೋ ನಡೆದ ವಿಡಿಯೋ ನೋಡಿದಿರಿ. ದೆಹಲಿ ಮೆಟ್ರೋದಲ್ಲಿ (Delhi Metro) ನಿತ್ಯವೂ ನಡೆಯುವ ಜಗಳ, ರೀಲಿಗರ ಹಾವಳಿಯನ್ನಂತೂ ನೋಡುತ್ತಲೇ ಇದ್ದೀರಿ. ಇದೀಗ ಆ ಗಾಳಿ ಮುಂಬೈ ಲೋಕಲ್​ ಟ್ರೇನಿಗೂ (Mumbai Local Train) ಬಡಿದುಕೊಂಡಿದೆ! ನೋಡಿ ಇದೀಗ ವೈರಲ್ ಆಗಿರುವ ಈ ವಿಡಿಯೋ, ಮುಂಬೈನ ಲೋಕಲ್ ಟ್ರೇನಿನಲ್ಲಿ ಪುರುಷರಿಬ್ಬರೂ ಹೊಡೆದಾಟಕ್ಕಿಳಿದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಂಥ ವಿಡಿಯೋಗಳಿಂದ ತುಂಬಾ ಬೇಸರವಾಗುತ್ತಿದೆ. ಯಾಕೆ ಪೊಲೀಸರು ಇಂಥ ಚಟುವಟಿಕೆಗಳ ಬಗ್ಗೆ ನಿಗಾ ಇಡುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Viral Video: ಹುಲಾ ಹೂಪ್​; ವಿಶ್ವದಾಖಲೆ ಮಾಡಿದ ಕೋಟೇಶ್ವರಿಯ ವೈರಲ್ ವಿಡಿಯೋ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮುಂಬೈನ ಲೋಕಲ್​ ಟ್ರೇನಿನಲ್ಲಿ ಈ ಪುರುಷರಿಬ್ಬರೂ ಸೀಟಿಗಾಗಿ ವಾಗ್ವಾದಕ್ಕಿಳಿದು ಕೊನೆಗೆ ಹೊಡೆದಾಟಕ್ಕಿಳಿದಿದ್ದಾರೆ. ಕಿಕ್ಕಿರಿದ ಕಂಪಾರ್ಟ್​ಮೆಂಟ್​ನಲ್ಲಿಯೂ ಹೀಗೆ ಜಗಳವಾಡಲು ಇವರಿಗೆ ಅವಕಾಶ ಸಿಕ್ಕಿದೆ ಎಂದರೆ!? ಇಂಥ ಜಗಳಗಳನ್ನು ನೋಡಿ ನೋಡಿ ಸಾಕಾಗಿದೆ ಎಂದು ನೆಟ್ಟಿಗರು ಬೇಸರಿಸಿಕೊಳ್ಳುತ್ತಿದ್ದಾರೆ.

ಮುಂಬೈ ಲೋಕಲ್​ ಟ್ರೇನ್​ನಲ್ಲಿ ಹೊಡೆದಾಟ

Kalesh b/w Two Man inside Mumbai locals over seat issues pic.twitter.com/jx8RRrdAJn

ಸಹಪ್ರಯಾಣಿಕರು ಜಗಳವನ್ನು ತಡೆಯಲು ಪ್ರಯತ್ನಿಸಿದ್ದಾರಾದರೂ ಅವರಿಬ್ಬರ ಸಿಟ್ಟು ಮಾತ್ರ ತೀವ್ರತರದಲ್ಲಿದೆ. ಅಂತೂ ದೆಹಲಿ ಮೆಟ್ರೋಗೆ ಇವರು ಸ್ಪರ್ಧೆ ನೀಡುತ್ತಲಿದ್ದಾರೆ ಬಿಡಿ ಎಂದಿದ್ದಾರೆ ನೆಟ್ಟಿಗರು. ಎಲ್ಲಿಯದೋ ಕೋಪವನ್ನು ಇಲ್ಲಿ ತಂದು ಪ್ರದರ್ಶಿಸಿದರೆ ಉಳಿದವರಿಗೆ ತೊಂದರೆ ಅಲ್ಲವೆ? ಎಂದಿದ್ದಾರೆ ಇನ್ನೂ ಕೆಲವರು. ದಯವಿಟ್ಟು ರೈಲ್ವೇ ಪೊಲೀಸ್​ ಇಂಥ ಪ್ರಕರಣಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ಎಂದಿದ್ದಾರೆ ಇನ್ನುಳಿದವರು.

ಇದನ್ನೂ ಓದಿ : Viral Video: ಬ್ರೇನ್ ಹ್ಯಾಮ್​ರೇಜ್; ‘ಎರಡು ವರ್ಷಗಳಿಂದ ನನ್ನಾಕೆಯ ಮಾತುಗಳಿಗಾಗಿ ಕಾಯುತ್ತಿದ್ದೇನೆ, ಮ್ಯಾಜಿಕ್ ಆಗುವುದೆ?’ 

ದೆಹಲಿ ಮೆಟ್ರೋದಲ್ಲಿ ನಾ ಕೂಡ ಒಂದು ದಿನ ಹೀಗೆಯೇ ಜಗಳವಾಡುವೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಿಜಕ್ಕೂ ಈ ವೀರರನ್ನು ಶ್ಲಾಘಿಸುತ್ತೇನೆ, ಯಾರೇ ಜಗಳ ಬಿಡಿಸಲು ಬಂದರೂ ಅವರು ಪರಸ್ಪರರನ್ನು ಬಿಟ್ಟುಕೊಟ್ಟಿಲ್ಲ ನೋಡಿ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:04 pm, Sat, 2 September 23