Viral Video: ಒಂದು ಗೋಲ್​ಗಪ್ಪಾಗಾಗಿ ನಡು ರಸ್ತೆಯಲ್ಲಿ ಹೊಡೆದಾಟ: ಕಾದಾಟದ ವೀಡಿಯೋ ವೈರಲ್

ಈ ವೀಡಿಯೋ X (ಮೊದಲಿನ ಟ್ವಿಟ್ಟರ್) ಭಾರಿ ವೈರಲ್ ಆಗಿದೆ. ‘ಘರ್ ಕೆ ಕಳಶ್’ ಎನ್ನುವ ಪೇಜ್ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ಶೇರ್ ಆದ ಕೇಲವೇ ಗಂಟೆಗಳಲ್ಲಿ 2.13ಲಕ್ಷ ಜನ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ 2.1ಸಾವಿರ ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ. ಹಲವರು ಇವರ ಕುಸ್ತಿಯ ಕುರಿತು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಗೋಲ್​ಗಪ್ಪಾ ಮಾರುವವರು ಹೇಗೆ ದುಬಾರಿ ಬೆಲೆಯಿಟ್ಟು, ಗ್ರಾಹಕರನ್ನು ಯಾಮಾರಿಸುತ್ತಾರೆ ಎಂದು ಚರ್ಚಿಸಿದ್ದಾರೆ.

Viral Video: ಒಂದು ಗೋಲ್​ಗಪ್ಪಾಗಾಗಿ ನಡು ರಸ್ತೆಯಲ್ಲಿ ಹೊಡೆದಾಟ: ಕಾದಾಟದ ವೀಡಿಯೋ ವೈರಲ್
ವೈರಲ್ ವೀಡಿಯೋ
Follow us
TV9 Web
| Updated By: ನಯನಾ ಎಸ್​ಪಿ

Updated on:Sep 02, 2023 | 6:24 PM

ಭಾರತದಲ್ಲಿ ಗಲ್ಲಿಗಳಲ್ಲಿ ಕಾದಾಡುವುದನ್ನು ಆಗಾಗ ನೋಡಬಹುದು. ನೀರು ಸಿಗಲಿಲ್ಲವೆಂದೋ, ಮನೆಯ ಎದುರು ವಾಹನ ನಿಲ್ಲಿಸಿದ್ದಾರೆಂದೋ ಜಗಳ ಆಡುವ (Viral Video) ಮಂದಿ ನಮ್ಮಲ್ಲಿದ್ದಾರೆ. ತೀರಾ ಸಾಮಾನ್ಯ ವಿಷಯವನ್ನು ಗಂಭೀರವಾಗಿ ಪರಿಣಮಿಸಿ ಬೀದಿ ಬದಿಯಲ್ಲಿ ಕಾದಾಡುವವರು ಹಲವರಿದ್ದಾರೆ. ಚಿಕ್ಕ ವಿಷಯವನ್ನು ಬಹು ದೊಡ್ಡಾಗಿ ಮಾಡಿಬಿಡುತ್ತೇ ಈ ಜಗಳ. ಈಗ ಅಂತದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಾಮಾನ್ಯವಾಗಿ ಅಂಗಡಿಯವನು ಕೊಡುವ ಕಾಸಿಗೆ ಮೊಸ ಮಾಡಿದಾಗ, ಕಲಬೆರಿಕೆ ಪದಾರ್ಥಗಳನ್ನು ಕೊಟ್ಟಾಗ ಎಲ್ಲಾರು ಪ್ರಶ್ನಿಸುತ್ತಾರೆ. ಇನ್ನೂ ದೊಡ್ಡ ಮೋಸವಾದಾಗ ಗ್ರಾಹಕ ಸಂಬಂಧಿ ನ್ಯಾಯಲಯದ ಮೆಟ್ಟಿಲೇರುತ್ತಾರೆ. ಇಲ್ಲವಾದರೆ ಒಂದೆರಡು ಮಾತಲ್ಲಿ ಸಮಸ್ಯೆ ಬಗೆಹರಿದುಬಿಡುತ್ತದೆ. ಆದರೆ ಎಂದಾದರೂ ಒಂದು ಪಾನಿಪುರಿ ಕೊಟ್ಟಿಲ್ಲವೆಂದು ಜೀವ ಹೋಗುವಂತೆ ಹೊಡಾದಾಡಿಕೊಂಡಿದ್ದನ್ನು ನೋಡಿದ್ದೀರಾ?

ಇಲ್ಲೊಬ್ಬ 10 ರೂಪಾಯಿಗೆ ಕೇವಲ 7 ಗೋಲ್​ಗಪ್ಪಾ ಮಾತ್ರ ನೀಡಿದ್ದಾನೆಂಬ ವಿಷಯ ಈ ಜಗಳಕ್ಕೆ ಕಾರಣವಾಗಿದೆ. ಗ್ರಾಹಕನೊಬ್ಬ 10 ರೂಪಾಯಿಗೆ 7 ಕ್ಕಿಂತ ಹೆಚ್ಚು ಗೋಲ್​ಗಪ್ಪಾ ನೀಡಬೇಕೆಂದು ಅಂಗಡಿಯವನ ಬಳಿ ಕೇಳಿದ್ದಾನೆ. ಅದಕ್ಕೆ ಅಂಗಡಿಯಾತ ಒಪ್ಪಲಿಲ್ಲ. ಈ ಒಂದು ಗೋಲ್​ಗಪ್ಪಾ ಇವರ ಹೊಡೆದಾಟಕ್ಕೆ ಮೂಲವಾಗಿದೆ. ಇವರಿಬ್ಬರ ನಡುವಿನ ಜಗಳ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.

ಇವರ ಈ ಜಗಳವನ್ನು ನೋಡಿ ಕುಸ್ತಿಯ ಹಲವು ಭಂಗಿಗಳಿಗೆ ಹೋಲಿಸಿದ್ದಾರೆ ನೆಟ್ಟಿಗರು. ಇನ್ನೂ ಕೆಲವರು ಕಾದಾಟದ ತೀವ್ರತೆಯನ್ನು ನೋಡಿ ಡಬ್ಲೂಡಬ್ಲೂಎಫ್ ಎಂದು ಬಣ್ಣಿಸಿ ಕಮೆಂಟ್ ಮಾಡಿದ್ದಾರೆ. ಈ ಜಗಳವು ಸಿನಿಮಾದಲ್ಲಿ ತೋರಿಸುವ ಫೈಟ್ ನಂತೆಯೇ ಭಾಸವಾಗುತ್ತಿದೆ ಎಂದು ಹಲವರು ಪ್ರತಿಕ್ರಿಸಿದ್ದಾರೆ. ಗ್ರಾಹಕ ಕಿಶೋರ್ ಕುಮಾರ್ ಗೋಲ್​ಗಪ್ಪಾ ಮಾರುವ ರಾಮ್ ಸೇವಕ್​ನನ್ನು ಎತ್ತಿ ಬಿಸಾಡಿದ್ದಾನೆ. ನಡು ರಸ್ತೆಯಲ್ಲಿಯೇ ಯಾರಿಗೂ ಕ್ಯಾರೆ ಎನ್ನದೆ ಇಬ್ಬರೂ ಹೊಡೆದಾಡಿದ್ದಾರೆ. ಒಂದು ಗೋಲ್​ಗಪ್ಪಾಗೆ ಇಷ್ಟೊಂದು ದೊಡ್ಡ ಜಗಳ ನಡೆದಿರುವುದು ವಿಚಿತ್ರವೆನಿಸಿದೆ.

ಇದನ್ನೂ ಓದಿ : Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್

ಈ ವೀಡಿಯೋ X (ಮೊದಲಿನ ಟ್ವಿಟ್ಟರ್) ಭಾರಿ ವೈರಲ್ ಆಗಿದೆ. ‘ಘರ್ ಕೆ ಕಳಶ್’ ಎನ್ನುವ ಪೇಜ್ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ಶೇರ್ ಆದ ಕೇಲವೇ ಗಂಟೆಗಳಲ್ಲಿ 2.13ಲಕ್ಷ ಜನ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ 2.1ಸಾವಿರ ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ. ಹಲವರು ಇವರ ಕುಸ್ತಿಯ ಕುರಿತು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಗೋಲ್​ಗಪ್ಪಾ ಮಾರುವವರು ಹೇಗೆ ದುಬಾರಿ ಬೆಲೆಯಿಟ್ಟು, ಗ್ರಾಹಕರನ್ನು ಯಾಮಾರಿಸುತ್ತಾರೆ ಎಂದು ಚರ್ಚಿಸಿದ್ದಾರೆ.

Published On - 6:23 pm, Sat, 2 September 23

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ