AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೆಕ್ಸಿಕೋ; ಜೆಂಡರ್ ರಿವೀಲ್​ ಪಾರ್ಟಿ, ಸ್ಟಂಟ್​ ವಿಮಾನ ಪತನದಿಂದ ಪೈಲಟ್ ಸಾವು, ವಿಡಿಯೋ ವೈರಲ್

Mexico: ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ವಿದೇಶಗಳಲ್ಲಿರುವ ದಂಪತಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಬಹಿರಂಗವಾಗಿ ತಿಳಿಸುವ ಸಮಾರಂಭವನ್ನು ಹಮ್ಮಿಕೊಳ್ಳುವುದು ಸಹಜ. ಆದರೆ ಇದೀಗ ಮೆಕ್ಸಿಕೋದಲ್ಲಿ ಸ್ಟಂಟ್ ವಿಮಾನವು ಪತನಗೊಂಡು​ ಪೈಲಟ್​ ಸ್ಥಳದಲ್ಲಿಯೇ ಅಸುನೀಗಿದ ದುರ್ಘಟನೆ ನಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಈ ವಿಷಯವಾಗಿ ಗಂಭೀರ ಚರ್ಚೆ ನಡೆಸಿದ್ಧಾರೆ.

Viral Video: ಮೆಕ್ಸಿಕೋ; ಜೆಂಡರ್ ರಿವೀಲ್​ ಪಾರ್ಟಿ, ಸ್ಟಂಟ್​ ವಿಮಾನ ಪತನದಿಂದ ಪೈಲಟ್ ಸಾವು, ವಿಡಿಯೋ ವೈರಲ್
ಮೆಕ್ಸಿಕೋದ ಜೆಂಡರ್ ರಿವೀಲ್ ಪಾರ್ಟಿಯಲ್ಲಿ ಸ್ಟಂಟ್ ವಿಮಾನ ಪತನಗೊಳ್ಳುವ ಮೊದಲು
ಶ್ರೀದೇವಿ ಕಳಸದ
|

Updated on: Sep 04, 2023 | 12:46 PM

Share

Gender Reveal Party: ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಮ್ಮ ಕುಟುಂಬ ಮತ್ತು ಆಪ್ತೇಷ್ಟರ ಎದುರು  ದಂಪತಿ ಬಹಿರಂಗಗೊಳಿಸುವ ಈ ಜೆಂಡರ್ ರಿವೀಲ್ ಪಾರ್ಟಿ ವಿದೇಶಗಳಲ್ಲಿ ದೊಡ್ಡ ಸಂಭ್ರಮಾಚರಣೆಯಲ್ಲಿ ನಡೆಯುತ್ತದೆ. ಅದಕ್ಕಾಗಿ ಥೀಮ್ ಆಧಾರಿತ ವೇದಿಕೆ ಅಲಂಕಾರವಂತೂ ಸಾಮಾನ್ಯ. ಆದರೆ ಈಗೀಗ ಸಾಹಸಮಯವಾಗಿ ಇವುಗಳನ್ನು ಆಚರಿಸುವ ಹುಚ್ಚು ಜನರಿಗೆ ಹೆಚ್ಚುತ್ತಿದೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ. ದಂಪತಿ ಅತಿಥಿಗಳೆದುರು ಜೆಂಡರ್​ ರಿವೀಲ್ ಪಾರ್ಟಿ ಆಚರಣೆಗೆ ಸಿದ್ಧವಾಗಿದ್ದಾರೆ. ಈ ಸಂಭ್ರಮಾಚರಣೆಯ ಭಾಗವಾಗಿರುವ ಸ್ಟಂಟ್​ ವಿಮಾನವೊಂದು (Stunt Flight) ಪತನಗೊಂಡು ಪೈಲಟ್ ಸ್ಥಳದಲ್ಲಿಯೇ​ ಸಾವನ್ನಪ್ಪುತ್ತಾನೆ.

ಇದನ್ನೂ ಓದಿ : Viral Video: ಕ್ಯಾನ್ಸರ್​; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೆಕ್ಸಿಕೋದ ಸ್ಯಾನ್​ ಪೆಡ್ರೋದಲ್ಲಿ ಈ ದುರ್ಘಟನೆ ನಡೆದಿದೆ. ಪಾರ್ಟಿ ವೇಳೆ ನೆರೆದ ಅತಿಥಿಗಳೆದುರೇ ಸ್ಟಂಟ್​ ವಿಮಾನವೊಂದು ಪತನಗೊಂಡ ಪರಿಣಾಮ 32 ವರ್ಷದ ಲೂಯೀಸ್ ಏಂಜೆಲ್ ಎಂಬ ಪೈಲಟ್​ ಅಸುನೀಗಿದ್ದಾನೆ. ದುರಂತಕ್ಕೀಡಾದ ವಿಮಾನದ ಅವಶೇಷಗಳಡಿ ಸಿಲುಕಿದ್ದ ಪೈಲಟ್​ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ವಿಫಲವಾಗಿ ಸಾವನ್ನಪ್ಪಿದ.

ಜೆಂಡರ್ ರಿವೀಲ್​ ಪಾರ್ಟಿ ವೇಳೆ ಸ್ಟಂಟ್​ ವಿಮಾನ ಪತನಗೊಂಡ ಕ್ಷಣಗಳು

ಗುಲಾಬಿವರ್ಣವು ಹೆಣ್ಣುಮಗುವಿನ ಆಗಮನವನ್ನು ಸೂಚಿಸುತ್ತದೆ. ನೀಲಿಬಣ್ಣವು ಗಂಡುಮಗುವಿನ ಆಗಮನವನ್ನು ಸೂಚಿಸುತ್ತದೆ. ಆ ಪ್ರಕಾರ Piper PA-25-235 Pawnee ವಿಮಾನವು ಆಕಾಶದಲ್ಲಿ ಗುಲಾಬಿಹೊಗೆಯನ್ನು ಹೊಮ್ಮಿಸುತ್ತ ಹುಟ್ಟುವ ಮಗುವಿನ ಲಿಂಗವನ್ನು ಬಹಿರಂಪಡಿಸಿತು. ಆದರೆ ಕೆಲ ಕ್ಷಣದಲ್ಲಿಯೇ ವಿಮಾನದ ಎಡರೆಕ್ಕೆಯಲ್ಲಿ ಏನೋ ತೊಂದರೆಯುಂಟಾಗಿ ವಿಮಾನವು ಪತನಗೊಂಡಿತು.

ಇದನ್ನೂ ಓದಿ : Viral Video: ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯವನ್ನು ಕಲಿಸುತ್ತೀರಾ? ಬೆಲ್ಜಿಯಮ್​ ವ್ಯಕ್ತಿ ಇವರನ್ನೆಲ್ಲಾ ಕೇಳಿದಾಗ

ನೆಟ್ಟಿಗರು ಇಂಥ ಪಾರ್ಟಿಗಳ ವೈಭವ, ಸಾಹಸ, ಸಂಭ್ರಮಾಚರಣೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇನ್ನಾದರೂ ಜನರು ಇಂಥ ಹುಚ್ಚಾಟಗಳನ್ನು ನಡೆಸುವುದನ್ನು ಬಿಡಬೇಕು ಎಂದು ಹೇಳುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ