AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕ್ಯಾನ್ಸರ್​; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ

Husband Wife: ಬದುಕಿನಲ್ಲಿ ಯಾರೂ ಒಂಟಿಯಲ್ಲ, ಎಂಥ ಸಂದರ್ಭದಲ್ಲಿಯೂ ನಮ್ಮನ್ನು ಪ್ರೀತಿಸುವವರು ನಮ್ಮ ಜೊತೆಗೆ ಇದ್ದೇ ಇರುತ್ತಾರೆ ಎನ್ನುವ ಭರವಸೆ ಹುಟ್ಟುವುದು ಇಂಥ ಕಥನಗಳಿಂದಲೇ. ಹೆಂಡತಿಯ ತಲೆಯನ್ನು ಬೋಳಿಸುತ್ತಲೇ ಗಂಡನೂ ತನ್ನ ತಲೆ ಬೋಳಿಸಿಕೊಳ್ಳುತ್ತಾನೆ. ನಂತರ ಮುದ್ದಾಗ ಮಗುವೊಂದು ಇವರಿಬ್ಬರ ಮಡಿಲನ್ನು ತುಂಬುತ್ತದೆ. ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿ.

Viral Video: ಕ್ಯಾನ್ಸರ್​; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ
1. ಕ್ಯಾನ್ಸರ್ ಪೀಡಿತ ಹೆಂಡತಿಗಾಗಿ ತಲೆ ಬೋಳಿಸಿಕೊಂಡ ಗಂಡ. 2.ಅವರ ಮುದ್ದಾದ ಮಗು.
ಶ್ರೀದೇವಿ ಕಳಸದ
|

Updated on: Sep 04, 2023 | 11:26 AM

Share

Cancer: ಈ ಹಿಂದೆ ಸ್ನೇಹಿತೆಗೆ ಕ್ಯಾನ್ಸರ್ ಎಂದಾಗ ಸ್ನೇಹಿತರ ಗುಂಪೊಂದು ತಲೆ ಬೋಳಿಸಿಕೊಂಡಿತ್ತು. ಸ್ನೇಹಿತನ ಅಮ್ಮನಿಗೆ ಕ್ಯಾನ್ಸರ್ ಎಂದಾಗ ಸಲೂನಿನ ಆತನ ಸಹೋದ್ಯೋಗಿಗಳೆಲ್ಲ ತಲೆ ಬೋಳಿಸಿಕೊಂಡಿದ್ದರು. ಇದೀಗ ಕ್ಯಾನ್ಸರ್​ನಿಂದ ಬಳಲುತ್ತಿರುವ ತನ್ನ ಹೆಂಡತಿಗೆ ಬೆಂಬಲಿಸಲು ಗಂಡನೂ ತಲೆ ಬೋಳಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಕ್ಯಾನ್ಸರ್ ರೋಗಿಗಳಿಗೆ (Cancer Patients) ಬೆಂಬಲ ವ್ಯಕ್ತಪಡಿಸಿರುವ ಇಂಥ ಅನೇಕರ​ ಕಥೆಗಳನ್ನು ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ ಯಾವುದನ್ನೂ ಒಬ್ಬರೇ ಹೋರಾಡಬೇಕಿಲ್ಲ, ಖಂಡಿತ ಹೀಗೆ ನಮ್ಮವರೆನ್ನಿಸಿಕೊಂಡವರು ಜೊತೆಯಾಗುತ್ತಾರೆ ಎಂದು ಈ ವಿಡಿಯೋದಲ್ಲಿರುವ ಮಹಿಳೆಗೆ ಧೈರ್ಯ ತುಂಬುತ್ತಿದ್ದಾರೆ. ಹಾಗೆಯೇ ಇವರಿಬ್ಬರ ಮುದ್ಧಾದ ಮಗುವನ್ನು ನೋಡಿ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : Viral Video: ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯವನ್ನು ಕಲಿಸುತ್ತೀರಾ? ಬೆಲ್ಜಿಯಮ್​ ವ್ಯಕ್ತಿ ಇವರನ್ನೆಲ್ಲಾ ಕೇಳಿದಾಗ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗುಡ್​ನ್ಯೂಸ್​​​ ಮೂವ್‌ಮೆಂಟ್‌ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಅನ್ನು ಪೋಸ್ಟ್ ಮಾಡಲಾಗಿದೆ. ಆರಂಭದಲ್ಲಿ ಹೆಂಡತಿಯ ತಲೆಯನ್ನು ಟ್ರಿಮ್ಮರ್​ನಿಂದ ಗಂಡ ಬೋಳಿಸುತ್ತಾನೆ. ನಂತರ ಸ್ವತಃ ತನ್ನ ತಲೆಯನ್ನೂ ಬೋಳಿಸಿಕೊಳ್ಳುತ್ತಾನೆ. ಮೆಟರ್ನಿಟಿ ಫೋಟೋಶೂಟ್​ನ ನಂತರ ಮುದ್ದಾದ ಮಗುವಿನ ಫೋಟೋ ತೆರೆದುಕೊಳ್ಳುತ್ತದೆ.

ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ

ನಿನ್ನೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 5 ಮಿಲಿಯನ್​ ಜನರು ನೋಡಿದ್ದಾರೆ. 1.8 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ಧಾರೆ. ಒಬ್ಬರು, ‘ನಾನು ಹಲವಾರು ವರ್ಷಗಳ ಕಾಲ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಒಬ್ಬ ವ್ಯಕ್ತಿ ಒಂದು ದಿನ ತನ್ನ ಹೆಂಡತಿಯೊಂದಿಗೆ ಬಂದನು. ಅವನ ಕೂದಲುಗಳೆಲ್ಲ ಗಾಢನೀಲಿಯಾಗಿದ್ವು. ಎಲ್ಲರೂ ಅವನನ್ನೇ ನೋಡುತ್ತಿದ್ದರು. ಆಗ ಅವನು ತನ್ನ ಕೂದಲುಗಳ ಬಗ್ಗೆ ಸ್ವತಃ ವರ್ಣಿಸಲಾರಂಭಿಸಿದರು. ಯಾಕೆ ಹೀಗೆ ಮಾಡಿದೆ ಎಂದು ಕೇಳಿದೆ. ಕ್ಯಾನ್ಸರ್​ನಿಂದ ಕೂದಲು ಕಳೆದುಕೊಂಡ ನನ್ನ ಹೆಂಡತಿಯನ್ನು ಬಿಟ್ಟು ಜನ ನನ್ನನ್ನು ನೋಡುತ್ತಾರೆ ಎಂದ’ ಎಂದಿದ್ದಾರೆ.

ಇದನ್ನೂ ಓದಿ : Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು

ವಿಡಿಯೋ ನೋಡಿ ನಾನು ಅಳಲಿಲ್ಲ, ಬದಲಾಗಿ ಧೈರ್ಯ ತಂದುಕೊಂಡೆ. ಜಗತ್ತಿನಲ್ಲಿ ಯಾರೂ ಒಂಟಿಯಲ್ಲ, ಜೊತೆಗಾರರು ಇದ್ದೇ ಇರುತ್ತಾರೆ, ಹಾದಿಯನ್ನು ಸುಗಮಗೊಳಿಸುತ್ತಾರೆ ಎನ್ನುವ ಭರವಸೆ ಮೂಡಿತು ಎಂದು ಒಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!