AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಪರೂಪದ ಪುನರ್ಮಿಲನ; 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ನಾಯಿ

Reunion: ಇನ್ನೆಂದೂ ಕಳೆದುಹೋದ ನಾಯಿ ಮನೆಗೆ ಮರಳುವುದಿಲ್ಲವೇನೋ ಎಂದು ಪೋಷಕರು ಆಸೆಯನ್ನೇ ಬಿಟ್ಟಿದ್ದರು. ಒಂದರಲ್ಲ ಎರಡಲ್ಲ 12 ವರ್ಷಗಳು ಕಳೆದರೂ ನಾಯಿ ಪತ್ತೆಯಾಗದೇ ಇದ್ದಾಗ ಆಶಾಭಾವನೆ ಉಳಿಯುವುದಾದರೂ ಹೇಗೆ? ಆದರೆ ವೃದ್ಧ ಮಿನಿಯನ್​ ಅಂತೂ ತನ್ನ ಪೋಷಕರ ಮಡಿಲು ಸೇರಿದೆ. ನೆಟ್ಟಿಗರು ಹೃದಯಸ್ಪರ್ಶಿಯಾದ ಈ ಘಟನೆ ಓದಿ ಹನಿಗಣ್ಣಾಗುತ್ತಿದ್ದಾರೆ.

Viral: ಅಪರೂಪದ ಪುನರ್ಮಿಲನ; 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ನಾಯಿ
ಹನ್ನೆರಡು ವರ್ಷಗಳ ಮೊದಲು ಮತ್ತು ನಂತರ ಪೋಷಕರೊಂದಿಗೆ ಮಿನಿಯನ್​
ಶ್ರೀದೇವಿ ಕಳಸದ
|

Updated on: Sep 04, 2023 | 9:26 AM

Share

Dog Love : ನಾಲ್ಕೈದು ದಿನಗಳ ನಂತರ, ಎರಡು ವಾರಗಳ ನಂತರ, ತಿಂಗಳುಗಳ ನಂತರ ಹೋಗಲಿ ಒಂದು ವರ್ಷದ ನಂತರ ಕಳೆದುಹೋದ ಸಾಕುಪ್ರಾಣಿಗಳು ಮನೆಗೆ ಮರಳಿದ ಉದಾಹರಣೆಗಳಿವೆ. ಆದರೆ 12 ವರ್ಷಗಳ ನಂತರ? ಹೌದು, 12 ವರ್ಷಗಳ ನಂತರ ಸಾಕುನಾಯಿ ವಾಪಾಸು ತನ್ನ ಮನೆಗೆ ಮರಳಿದೆ. ಅಷ್ಟೇ ಅಲ್ಲಾ, ಮನೆಯಲ್ಲಿದ್ದ ಇತರೇ ನಾಯಿಗಳೊಂದಿಗೆ (Dogs) ಓಡಾಡಿಕೊಂಡು ಆಟವನ್ನೂ ಆಡಿದೆ. ಪೋಷಕರೊಂದಿಗಿನ ಈ ಪುನರ್ಮಿಲನದ ಈ ಫೋಟೋ ನೋಡಿ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ಮ್ಯಾರಿಕೋಪಾ ಕೌಂಟಿ ಎನಿಮಲ್​ ಕೇರ್ ಅಂಡ್​ ಕಂಟ್ರೋಲ್​ ಎಂಬ ಫೇಸ್​ಬುಕ್​ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ : Viral Video: ಮಹಾಬಿಲ್ಲಿ ಹಬ್ಬ! ಹೇಗಿದೆ ಎಲ್ಸಾ ಕುಟ್ಟಿಯ ಓಣಂ ಆಚರಣೆ, ಬನ್ನಿ ನೀವೂ

ಮಿನಿಯನ್​ ಎಂಬ ಈ ನಾಯಿಯನ್ನು ಮ್ಯಾರಿಕೋಪಾ ಕೌಂಟಿ ಎನಿಮಲ್ ಕೇರ್ ಅಂಡ್ ಕಂಟ್ರೋಲ್​ನ ಕ್ಷೇತ್ರಾಧಿಕಾರಿಯೊಬ್ಬರು ರಕ್ಷಿಸಿದ್ದಾರೆ. ವಯಸ್ಸಾಗಿರುವ ಈ ನಾಯಿ ಸಂಕೋಚದಿಂದ, ದುಃಖದಿಂದ ಬಾಲವನ್ನೂ ಅಲ್ಲಾಡಿಸದೇ ನಿಂತಿತ್ತು. ನಂತರ ಅದರ ಮೈಕ್ರೋಚಿಪ್​​ ಸಹಾಯದಿಂದ ಪೋಷಕರ ಸಂಪರ್ಕ ಸಂಖ್ಯೆ ಪತ್ತೆ ಹಚ್ಚಿ ಅವರಿಗೆ ಒಪ್ಪಿಸಲಾಯಿತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೀನಿಯನ್​ ಹನ್ನೆರಡು ವರ್ಷಗಳ ಮೊದಲು ಮತ್ತು ಈಗ

ಮಿನಿಯನ್ ಪೋಷಕರು ಕರೆದೊಯ್ಯಲು ಬಂದಾಗ, ಬಹುಶಃ ಗುರುತಿಸಲು ಸಮಯ ತೆಗೆದುಕೊಳ್ಳಬಹುದು ಎಂದುಕೊಳ್ಳಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಅವರನ್ನು ನೋಡಿ ತಕ್ಷಣವೇ ಬಾಲ ಅಲ್ಲಾಡಿಸತೊಡಗಿತು. ಅವರೊಂದಿಗೆ ಹೋಗಲು ಉತ್ಸಾಹವನ್ನೂ ತೋರಿತು. 2011ರಲ್ಲಿ ಮತ್ತು ಆಗಸ್ಟ್​ 30, 2023ರಂದು ತೆಗೆದ ಮಿನಿಯನ್​ ತನ್ನ ಪೋಷಕರೊಂದಿಗೆ ತೆಗೆಸಿಕೊಂಡ ಫೋಟೋಗಳೇ ಈ ಪುನರ್ಮಿಲನಕ್ಕೆ ಸಾಕ್ಷಿ.

ಇದನ್ನೂ ಓದಿ : Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್

ಈತನಕ ಈ ಫೇಸ್​ಬುಕ್ ಪೋಸ್ಟ್​ಗೆ 1,100 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 400ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. 175 ಜನರು ಪ್ರತಿಕ್ರಿಯಿಸಿದ್ದಾರೆ. ಅಬ್ಬಾ! ಇದು ಅದ್ಭುತ, ನನ್ನ ಕಣ್ಣಲ್ಲಿ ನೀರಾಡುತ್ತಿದೆ, ಆ ಮಗು ಚೆನ್ನಾಗಿರಲಿ. 12 ವರ್ಷ ಹೇಗಿತ್ತೋ ಏನೋ ಎಲ್ಲಿತ್ತೋ ಪಾಪ ಎಂದು ಅನೇಕರು ಹೇಳಿದ್ದಾರೆ. ಇದು ನಿಜಕ್ಕೂ ನಂಬಲು ಅಸಾಧ್ಯವಾದಂಥದ್ದು. ಒಟ್ಟಿನಲ್ಲಿ ಅವ ಚೆನ್ನಾಗಿರಲಿ. ಪೋಷಕರೊಂದಿಗೆ ಮತ್ತು ಮನೆಯಲ್ಲಿರುವ ನಾಯಿಗಳೊಂದಿಗೆ ಸಂತೋಷದಿಂದ ಇರಲಿ. ವೃದ್ಧಾಪ್ಯದಲ್ಲಿ ಆದರೂ ಅವನು ಎಲ್ಲಾ ರೀತಿಯಿಂದ ಚೆನ್ನಾಗಿರಲಿ ಎಂದು ಅನೇಕರು ಹಾರೈಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ