AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮನೆಯೊಳಗೇ ಕರು ಸಾಕುತ್ತಿರುವ ಫಾರಿನ್​ ಪುಟ್ಟಿಯ ವಿಡಿಯೋ ವೈರಲ್

Animal Love: ವಿದೇಶಗಳಲ್ಲಿ ಸಾಕುಪ್ರಾಣಿಗಳನ್ನು ಮಕ್ಕಳಂತೆ, ಮನೆಯ ಸದಸ್ಯರಂತೆ ಸಮಾನವಾಗಿ ಕಾಣಲಾಗುತ್ತದೆ ಎನ್ನುವ ವಿಷಯ ಗೊತ್ತಿದ್ದದ್ದೇ. ಹಾಗಾಗಿ ಜೊತೆಯೇ ಊಟ, ಆಟ, ನಿದ್ರೆ, ತಿರುಗಾಟ ಎಲ್ಲವೂ. ಬೆಕ್ಕು ನಾಯಿಗಳನ್ನು ಹೀಗೆ ಪೋಷಿಸುವುದು ಸಹಜ. ಆದರೆ ಆಕಳುಕರುವನ್ನು? ಹೌದು, ಈ ಪುಟ್ಟಿ ಮತ್ತವಳ ಆಕಳಕರುವಿನ ದಿನಚರಿಯ ವಿಡಿಯೋ ಅನ್ನು ನಿಮಗಾಗಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.

Viral Video: ಮನೆಯೊಳಗೇ ಕರು ಸಾಕುತ್ತಿರುವ ಫಾರಿನ್​ ಪುಟ್ಟಿಯ ವಿಡಿಯೋ ವೈರಲ್
ಕರುವಿನ ಪೋಷಣೆಯಲ್ಲಿ ತೊಡಗಿರುವ ಬಾಲಕಿ
ಶ್ರೀದೇವಿ ಕಳಸದ
|

Updated on: Sep 04, 2023 | 1:40 PM

Share

Cow: ಮಕ್ಕಳಿಗೂ ಸಾಕುಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ನಗರಪ್ರದೇಶದ ಪ್ರಾಣಿಪ್ರಿಯ ಮಕ್ಕಳು ಬೆಕ್ಕು, ನಾಯಿಗಳೊಂದಿಗೆ ಬದುಕುತ್ತಾರೆ. ಹಳ್ಳಿಗಳಲ್ಲಿರುವ ಮಕ್ಕಳಂತೂ ಕೇಳುವುದೇ ಬೇಡ, ಬೆಕ್ಕು ನಾಯಿ ಕೋಳಿ ಮೇಕೆ ಹಸು (Animal Lover) ಹೀಗೆ ಪಟ್ಟಿ ಮುಗಿಯುವುದೇ ಇಲ್ಲ. ಅಕಸ್ಮಾತ್ ನಗರ ಮಹಾನಗರದ ಮಕ್ಕಳಿಗೆ ಆಕಳಕರುವನ್ನು ಬೆಕ್ಕು ಅಥವಾ ನಾಯಿಯಂತೆ ಮನೆಯಲ್ಲಿಟ್ಟುಕೊಂಡು ಸಾಕಬೇಕು ಎಂದೆನ್ನಿಸಿದರೆ? ಸದ್ಯಕ್ಕೆ ವಿದೇಶದಲ್ಲಿ ಹೆಣ್ಣುಮಗುವೊಂದು ಆಕಳಕರುವನ್ನು ಮನೆಯಲ್ಲಿಯೇ ಸಾಕಿಕೊಂಡಿರುವ ಈ ವಿಡಿಯೋ ನೋಡಿ. ಈ ಕರುವಿಗೆ ತಾನೇ ಅಮ್ಮನಾಗಿದ್ದಾಳೆ ಈಕೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ನಾನಾ ನಮೂನೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಮೆಕ್ಸಿಕೋ; ಜೆಂಡರ್ ರಿವೀಲ್​ ಪಾರ್ಟಿ, ಸ್ಟಂಟ್​ ವಿಮಾನ ಪತನದಿಂದ ಪೈಲಟ್ ಸಾವು, ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಪ್ರಾಣಿಪ್ರೇಮ ಕಲಿಸುವುದು ಒಳ್ಳೆಯದು. ತುಂಬಾ ಮುದ್ಧಾದ ವಿಡಿಯೋ, ಈ ಮಗು ಬೆಳೆಯುತ್ತಿರುವ ಪರಿಸರ ತುಂಬಾ ಚೆನ್ನಾಗಿದೆ, ಇದು ಧೈರ್ಯವಂತ ಮಗು ಎಂದಿದ್ದಾರೆ ಒಬ್ಬರು. ಬಹಳ ಮುಖ್ಯವಾದ ಕೆಲಸದಲ್ಲಿ ಈ ಹುಡುಗಿ ತೊಡಗಿಕೊಂಡಿದ್ದಾಳೆ. ಪ್ರಾಣಿಗಳಿರುವುದು ಕೊಂದು ತಿನ್ನುವುದಕ್ಕಲ್ಲ, ಅವುಗಳನ್ನು ಹೀಗೆ ಮುದ್ದಾಗಿ ಪೋಷಿಸಬೇಕು ಎಂದಿದ್ದಾರೆ ಇನ್ನೊಬ್ಬರು.

ನೋಡಿ ಪುಟ್ಟಿ ಈ ಕರುವನ್ನು ಸಾಕುವ ಪರಿ

ಆ. 24ರಂದು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯ ಮತ್ತು ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಸರಿ, ಈ ಕರುವಿನ ಅಮ್ಮ ಎಲ್ಲಿ ಹೋಗಿದೆ? ಎಂದು ಕೇಳಿದ್ದಾರೆ ಒಬ್ಬರು. ಪ್ರಾಣಿಗಳು ನಮ್ಮ ಸ್ನೇಹಿತರು, ಇವರುಗಳನ್ನು ನಾವು ಕೊಂದು ತಿನ್ನುವುದಿಲ್ಲ, ಬದುಕಿನುದ್ದಕ್ಕೂ ಸಸ್ಯಾಹಾರಿಯಾಗಿರಬೇಕು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಕ್ಯಾನ್ಸರ್​; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ

ಇಂಥ ಮುದ್ದಾದ ಪ್ರಾಣಿಯನ್ನು ಬಲಿ ಕೊಡಲು ಮನಸ್ಸಾದರೂ ಹೇಗೆ ಬರುತ್ತದೆ ಜನರಿಗೆ? ಎಂದಿದ್ದಾರೆ ಒಬ್ಬರು. ಆ ಪ್ರಾಣಿಗೆ ವಯಸ್ಸಾಗುತ್ತಿದ್ದಂತೆ ಆ ಹುಡುಗಿಯೇ ಅದನ್ನು ತಿನ್ನುತ್ತಾಳೆ! ಎಂದಿದ್ದಾರೆ ಇನ್ನೊಬ್ಬರು. ಕೊವಿಡ್ ಎರಡನೇ ಅಲೆಯ ಪ್ರಭಾವವಿದು ಎಂದಿದ್ದಾರೆ ಮತ್ತೊಬ್ಬರು. ಆದರೂ ನಾವೇಕೆ ಇಂಥ ಮುದ್ದು ಪ್ರಾಣಿಗಳ ಮಾಂಸ ತಿನ್ನುತ್ತೇವೆ ಎಂದಿದ್ದಾರೆ ಮಗದೊಬ್ಬರು. ಲೈಕ್ಸ್​ಗೋಸ್ಕರ ಪ್ರಾಣಿಗಳನ್ನು ಹೀಗೆ ಹರಾಜಿಗಿಡುತ್ತಾರೆ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ