AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಾವುಗಳೊಂದಿಗೆ ಹಾಯಾಗಿ ನಿದ್ರಿಸುವ ಬಾಲಕಿ; ದಿಗ್ಭ್ರಾಂತರಾದ ನೆಟ್ಟಿಗರು

Snakes: ಆ್ಯರಿಯಾನಾ ಎಂಬ ಈ ಬಾಲಕಿಗೆ ಹಾವುಗಳೇ ಸರ್ವಸ್ವ. ಎದ್ದಾಗಿನಿಂದ ಮಲಗುವತನಕವಷ್ಟೇ ಅಲ್ಲ, ಮಲಗುವಾಗಲೂ. ಇನ್​ಸ್ಟಾಗ್ರಾಂನಲ್ಲಿ ಈಕೆಯ ಖಾತೆಯಲ್ಲಿರುವ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಹೌಹಾರುತ್ತಿದ್ದಾರೆ. ಯಾಕೋ ಈಕೆಯ ಈ ಪ್ಯಾಷನ್​ ಅನ್ನು ಒಪ್ಪಿಕೊಳ್ಳಲು ಜಾಸ್ತಿಯೇ ಕಷ್ಟವಾಗುತ್ತಿದೆ. ಈ ವಿಡಿಯೋ ನೋಡಿಯೇ ನಾನು ನಿದ್ರೆಯಲ್ಲಿ ಭಯಬೀಳಬಹುದು ಅಂತೆಲ್ಲಾ ಹೇಳುತ್ತಿದ್ದಾರೆ. ನೀವು?

Viral Video: ಹಾವುಗಳೊಂದಿಗೆ ಹಾಯಾಗಿ ನಿದ್ರಿಸುವ ಬಾಲಕಿ; ದಿಗ್ಭ್ರಾಂತರಾದ ನೆಟ್ಟಿಗರು
ಹಾವುಗಳೊಂದಿಗೆ ಮಲಗಿರುವ ಆ್ಯರಿಯಾನಾ
ಶ್ರೀದೇವಿ ಕಳಸದ
|

Updated on: Sep 04, 2023 | 4:22 PM

Share

Snake Lover: ಹಾವು ಎಂದರೆ ಯಾರಿಗೆ ತಾನೇ ಭಯವಿಲ್ಲ? ನಿಗೂಢತೆ ಮತ್ತು ವಿಷಪ್ರವೃತ್ತಿಯಿಂದಾಗಿ ಎಲ್ಲರೂ ದೂರ ಓಡುವವರೇ. ಕಾಡಿನಲ್ಲಿ ವಾಸಿಸುವ ಇವುಗಳನ್ನು ಅಪರೂಪಕ್ಕೆ ಹಾವುಪ್ರಿಯರು ತಮ್ಮ ಮನೆಗಳಲ್ಲಿಟ್ಟುಕೊಂಡು ಪೋಷಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಬಾಲಕಿಗೆ ಹಾವೆಂದರೆ ಪ್ಯಾಷನ್​! ಹಾವುಗಳೇ ಸ್ನೇಹಿತರು, ಆಟಿಕೆಗಳು, ಬಂಧುಗಳೂ ಬಳಗವೂ ಎಲ್ಲವೂ. ಈ ಹಾವುಪ್ರಿಯೆ ಆ್ಯರಿಯಾನಾಳ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆಕೆ ಹಾವುಗಳೊಂದಿಗೆ ಒಡನಾಡುವ ಸಾಕಷ್ಟು ವಿಡಿಯೋಗಳನ್ನು ನೋಡಬಹುದಾಗಿದೆ. ಆ ಪೈಕಿ ಆಕೆ ಹಾವುಗಳೊಂದಿಗೆ ಆರಾಮಾಗಿ ಅಪ್ಪಿಕೊಂಡು ಮಲಗಿರುವ ಒಂದು ವಿಡಿಯೋ  ಇದೀಗ ವೈರಲ್ ಆಗಿದ್ದು ನೆಟ್ಟಿಗರನ್ನು ದಂಗುಬಡಿಸುತ್ತಿದೆ.

ಇದನ್ನೂ ಓದಿ : Viral Video: ದೆಹಲಿ; ಓವರ್ ಬ್ರಿಡ್ಜ್​ ಮೆಟ್ಟಿಲುಗಳ ಮೇಲೆ ಆಟೋ ಓಡಿಸಿದ ಧೀರಚಾಲಕ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅನೇಕರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸುಧಾರಿಸಿಕೊಳ್ಳಲು ತಿಂಗಳಾನುಗಟ್ಟಲೆ ಸಮಯ ಬೇಕು. ಆದರೆ ಈ ಬಾಲಕಿ ಮಾತ್ರ ಹಾವಿಲ್ಲದೇ ಬದುಕೇ ಇಲ್ಲ ಎಂಬಂತೆ ಅತ್ಯಂತ ತೀವ್ರವಾಗಿ ಬದುಕುತ್ತಿದ್ದಾಳೆ.  6 ದಿನಗಳ ಹಿಂದೆ ಈ ವಿಡಿಯೋ ಅನ್ನು ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 3 ಮಿಲಿಯನ್​ ಜನರು ನೋಡಿದ್ದಾರೆ. 77,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಅಚ್ಚರಿ ಮತ್ತು ಭಯದಿಂದ ಪ್ರತಿಕ್ರಿಯಿಸಿದ್ದಾರೆ.

ಹಾವುಪ್ರಿಯೆ ಆ್ಯರಿಯಾನಾ ಹಾವುಗಳೊಂದಿಗೆ ಮಲಗಿರುವ ದೃಶ್ಯ

View this post on Instagram

A post shared by Ariana (@snakemasterexotics)

ಆ್ಯರಿಯಾನಾ ವಿವಿಧ ಜಾತಿಯ ದೈತ್ಯ ಹಾವುಗಳೊಂದಿಗೆ ಆಟವಾಡಿಕೊಂಡಿರುವ ಸಾಕಷ್ಟು ವಿಡಿಯೋಗಳನ್ನು  ಆಕೆಯ ಇನ್​ಸ್ಟಾ ಅಕೌಂಟಿನಲ್ಲಿ ನೋಡಿದ ನೆಟ್ಟಿಗರು ನಿಜಕ್ಕೂ ಗಾಬರಿಗೆ ಬಿದ್ದಿದ್ದಾರೆ. ಅದು ಹೇಗೆ ಇವಳಿಗೆ ಈ ಹುಚ್ಚು ಆವರಿಸಿತು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ್ಯರಿಯಾನಾಳ ಅಪ್ಪ ಹಾವುಗಳ ವ್ಯಾಪಾರಿಯಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ಆಕೆ ಅವುಗಳೊಂದಿಗೆ ನಿರ್ಭಯವಾಗಿ ಒಡನಾಡುವುದನ್ನು ರೂಢಿಸಿಕೊಂಡಿದ್ದಾಳೆ.

ಆ್ಯರಿಯಾನಾ ಮತ್ತವಳ ಸ್ನೇಹಿತರ ಮತ್ತೊಂದು ವಿಡಿಯೋ ನೋಡಿ

View this post on Instagram

A post shared by Ariana (@snakemasterexotics)

ಯಾಕೋ ಇದು ನನಗಂತೂ ತುಸು ಹೆಚ್ಚೇ ವಿಚಿತ್ರ ಮತ್ತು ವಿಲಕ್ಷಣ ಎನ್ನಿಸುತ್ತಿದೆ ಎಂದು ಒಬ್ಬರು. ಅಯ್ಯೋ ನನಗೆ ಹೀಗಿರಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಇನ್ನೊಬ್ಬರು. ಇದು ಮೂರ್ಖತನದ ಪರಮಾವಧಿ ಎಂದು ಮತ್ತೊಬ್ಬರು. ಇದು ನಿಜಕ್ಕೂ ಮನಸ್ಸಿಗೆ ಕಿರಿಕಿರಿ ಮಾಡುವಂತಿದೆ ಎಂದು ಮಗದೊಬ್ಬರು. ಹೀಗೆ ಅನೇಕರು ಈಕೆಯ ವಿಡಿಯೋಗಳನ್ನು ನೋಡಿ ಭಯಭೀತರಾದವರೇ ಹೆಚ್ಚು.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ