Viral Video: ದೆಹಲಿ; ಓವರ್ ಬ್ರಿಡ್ಜ್ ಮೆಟ್ಟಿಲುಗಳ ಮೇಲೆ ಆಟೋ ಓಡಿಸಿದ ‘ಧೀರಚಾಲಕ’
Auto Driver: ಈ ವಿಡಿಯೋ ನೋಡಿ ಯಾವುದೋ ಸಿನೆಮಾ ಶೂಟಿಂಗ್ ನಡೆಯುತ್ತಿದೆ ಎಂದು ನೀವು ಭಾವಿಸಿದರೆ ಖಂಡಿತಾ ತಪ್ಪು. ಇದು ದೆಹಲಿ ಆಟೋ ಡ್ರೈವರ್ನ ಸಾಹಸ. ಅಷ್ಟಕ್ಕೂ ಈತ ಓವರ್ ಬ್ರಿಡ್ಜ್ ಮೇಲೆ ಹೀಗೆ ಅಪಾಯಕಾರಿಯಾಗಿ ಆಟೋ ಓಡಿಸಿದ್ದರ ಕಾಣರವಾದರೂ ಏನು, ಹೊಳೆಯುತ್ತಿಲ್ಲವೆ? ಹಾಗಿದ್ದರೆ ಈ ವಿಡಿಯೋ ನೋಡಿ.
Delhi: ಆಟೋ ಚಾಲಕರು ಪ್ರಯಾಣಿಕರಿಗೆ ವಿನಾಕಾರಣ ಸುಲಿಗೆ ಮಾಡುವ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಮಹಾನಗರಗಳಲ್ಲಿರುವ ಆಟೋ ಚಾಲಕರನ್ನು (Auto Driver) ನೆಟ್ಟಿಗರು ಹಾಡಿ ಹರಸುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಕೂಡ ಆಟೋ ಚಾಲಕರಿಗೇ ಸಂಬಂಧಿಸಿದ್ದು. ದೆಹಲಿ ಮೆಟ್ರೋ ಅಂತೂ ನಿತ್ಯವೂ ಸುದ್ದಿಯಲ್ಲಿರುತ್ತದೆ. ಇದೀಗ ದೆಹಲಿ ಆಟೋ! ಜನನಿಬಿಡವಾದ ಓವರ್ ಬ್ರಿಡ್ಜ್ನ ಮೆಟ್ಟಿಲುಗಳ ಮೇಲೆ ಆಟೋ ಚಾಲಕ ನಿರಾಯಾಸವಾಗಿ ಆಟೋ ಓಡಿಸಿಕೊಂಡು ಹೋಗಿಬಿಟ್ಟಿದ್ದಾನೆ. ಈ ಘಟನೆ ಹಮ್ದರ್ದ್ನಗರದಲ್ಲಿ ನಡೆದಿದೆ. ಈ ಆಟೋ ಚಾಲಕನ ಧೈರ್ಯ, ಸಾಹಸವನ್ನು ನೋಡಿದ ನೆಟ್ಟಿಗರು ಗಾಬರಿಗೆ ಬಿದ್ದಿದ್ದಾರೆ.
ಇದನ್ನೂ ಓದಿ: Viral Video: ಮನೆಯೊಳಗೇ ಕರು ಸಾಕುತ್ತಿರುವ ಫಾರಿನ್ ಪುಟ್ಟಿಯ ವಿಡಿಯೋ ವೈರಲ್
ಅಷ್ಟಕ್ಕೂ ಇವ ಹೀಗೇಕೆ ಮಾಡಿದ? ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾನೆ. ಈ ವಿಡಿಯೋ ಅನ್ನು ಸೆ. 3ರಂದು X ನಲ್ಲಿ @RamrajC93952644 ಎಂಬ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಈ ತನಕ ಸುಮಾರು 550 ಜನರು ಈ ವಿಡಿಯೋ ನೋಡಿದ್ದಾರೆ.
ದೆಹಲಿಯ ಆಟೋಚಾಲಕನ ಈ ಸಾಹಸ ನೋಡಿ
सड़क पर जाम तो फुट ओवरब्रिज पर ऑटो दिल्ली के हमदर्द नगर का वायरल वीडियो #उड़नखटोला 🛺🚀#Delhi #Viralvideo pic.twitter.com/GQ8oX9ERVG
— Ramraj Choudhary (@RamrajC93952644) September 3, 2023
ಈ ಆಟೋ ಚಾಲಕನ ಸಾಹಸದ ಬಗ್ಗೆ ಪೊಲೀಸರ ಗಮನ ಸೆಳೆಯಲು ಕೆಲವರು ದೆಹಲಿ ಪೊಲೀಸರನ್ನು ಈ ಪೋಸ್ಟ್ಗೆ ಟ್ಯಾಗ್ ಮಾಡಿದ್ದಾರೆ. ದೆಹಲಿಯ ಟ್ರಾಫಿಕ್ ಬಗ್ಗೆ ಇನ್ನು ಗಂಭೀರವಾಗಿ ಯೋಚಿಸಬೇಕಿದೆ ಎಂದು ಒಬ್ಬರು ಹೇಳಿದ್ದಾರೆ. ಬೈಕ್ ಸವಾರರು ಆಟೋದವರು ಇಂಥ ಸಾಹಸಗಳನ್ನು ಅನುಸರಿಸಿದರೆ ಏನು ಗತಿ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಓವರ್ ಬ್ರಿಡ್ಜ್ ಮೇಲೆ ಚಲಿಸುವ ಕಾರುಗಳು ನಮಗೆ ಬೇಕಿವೆ! ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಹುಲಾ ಹೂಪ್; ವಿಶ್ವದಾಖಲೆ ಮಾಡಿದ ಕೋಟೇಶ್ವರಿಯ ವೈರಲ್ ವಿಡಿಯೋ
ಈ ಸಾಹಸಕ್ಕಾಗಿ ಇವರಿಗೆ ಸರ್ಕಾರವು ಬಹುಮಾನ ಕೊಡಬೇಕು ಎಂದಿದ್ದಾರೆ ಕೆಲವರು. ಎಲ್ಲವನ್ನೂ ತಮಾಷೆಯಾಗಿ ನೋಡಬೇಡಿ, ಅಕಸ್ಮಾತ್ ಹೆಚ್ಚೂ ಕಡಿಮೆಯಾಗಿದ್ದರ ಏನು ಗತಿ? ಎಂದಿದ್ದಾರೆ ಒಬ್ಬರು. ಇಂಥ ವಿಡಿಯೋಗಳನ್ನು ನೋಡಿ ನಕ್ಕು ಸುಮ್ಮನಾಗುವುದಲ್ಲ. ಪೊಲೀಸರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಯುವಕರು ಬೈಕ್ನೊಂದಿಗೆ ಇಂಥ ಹುಚ್ಚಾಟಕ್ಕೆ ಬೀಳುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ