Viral Video: ಎಂಜಿನ್ ಇಲ್ಲ ಚಾಲಕನಿಲ್ಲ ನಿಗೂಢವಾಗಿ ಚಲಿಸಿದ ರೈಲು; ಆತ್ಮನಿರ್ಭರ್ ರೈಲು ಎಂದ ನೆಟ್ಟಿಗರು
Train: ಇದ್ದಕ್ಕಿದ್ದಂತೆ ನಾಲ್ಕು ಬೋಗಿಗಳುಳ್ಳ ರೈಲು ಹಳಿಗಳ ಮೇಲೆ ಚಲಿಸಲಾರಂಭಿಸಿತು. ಅಲ್ಲಿದ್ದವರೆಲ್ಲ ಗಾಬರಿಗೆ ಒಳಗಾದರು. ಏಕೆಂದರೆ ಮುಂದೆಯೂ ಎಂಜಿನ್ ಇಲ್ಲ, ಹಿಂದೆಯೂ. ಇಲ್ಲಿ ಏನು ನಡೆಯುತ್ತಿದೆ ಎಂದು ಯೋಚಿಸುತ್ತಲೇ ತಮ್ಮ ಮೊಬೈಲುಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿದುಕೊಂಡರು. ತನ್ನಷ್ಟಕ್ಕೆ ತಾನು ವಿಚಿತ್ರವಾದ ಓಡಿದ ರೈಲಿನ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.
Jharkhand: ಜಾರ್ಖಂಡ್‌ನ ಸಾಹೀಬ್ಗಂಜ್ನಲ್ಲಿರುವ ಮಾಲ್ಡಾ ರೈಲು (Train) ವಿಭಾಗದ ವ್ಯಾಪ್ತಿಯಲ್ಲಿರುವ ಬರ್ಹಾವಾ (Barharwa) ರೈಲು ಮಾರ್ಗದಲ್ಲಿ ಈ ವಿಚಿತ್ರ ಘಟನೆ ಜರುಗಿದೆ. ಹಿಂದೆಯೂ ಎಂಜಿನ್ ಇಲ್ಲ ಮುಂದೆಯೂ, ಇನ್ನು ಎಂಜಿನ್ನೇ ಇಲ್ಲವೆಂದಮೇಲೆ ಚಾಲಕನೆಲ್ಲಿಂದ? ಆದರೂ ಈ ರೈಲು ಹಳಿಗಳುದ್ದಕ್ಕೂ ಚಲಿಸಿ ಅಲ್ಲಿದ್ದವರ ಅಚ್ಚರಿಗೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಅಚ್ಚರಿಗರಲ್ಲಿ ಅಚ್ಚರಿ ಮೂಡಿಸುತ್ತಿದೆ ಮತ್ತು ಅನೇಕ ಪ್ರಶ್ನೆ, ಊಹೆಗಳನ್ನು ಹೊಮ್ಮಿಸುತ್ತಿದೆ. ನಾಲ್ಕು ರೈಲು ಬೋಗಿಗಳುಳ್ಳ ಈ ರೈಲು ಎಂಜಿನ್ನ ಸಹಾಯವಿಲ್ಲದೆ ಸ್ವತಂತ್ರವಾಗಿ ಹಳಿಗಳ ಮೇಲೆ ಚಲಿಸುತ್ತಿರುವ ವಿಡಿಯೋ ನೋಡಿದ ನೆಟ್ಟಿಗರು ಇದು ಆತ್ಮನಿರ್ಭರ್ ರೈಲು ಎಂದು ತಮಾಷೆ ಮಾಡುತ್ತಿದ್ದಾರೆ.
ಇದನ್ನೂ ಓದಿ : Viral Video: ಹಾವುಗಳೊಂದಿಗೆ ಹಾಯಾಗಿ ನಿದ್ರಿಸುವ ಬಾಲಕಿ; ದಿಗ್ಭ್ರಾಂತರಾದ ನೆಟ್ಟಿಗರು
ಈ ವೀಡಿಯೊವನ್ನು X ನಲ್ಲಿ @UtkarshSingh ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ‘ಎಂಜಿನ್ ಇಲ್ಲದೆ ಓಡುವ ರೈಲನ್ನು ಎಂದಾದರೂ ನೋಡಿದ್ದೀರೇ? ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಇಂಥ ರೈಲನ್ನು ನೋಡಿ. ಅಂತೂ ದೊಡ್ಡ ಅಪಘಾತವನ್ನು ತಪ್ಪಿಸಲಾಯಿತು. ಬೋಗಿಗಳು ಬರ್ಹಾರ್ವಾ ರೈಲು ನಿಲ್ದಾಣದ ಕಡೆಯಿಂದ ಮುಖ್ಯ ಹಳಿಗಳ ಬಳಿ ಉರುಳಿಬಿದ್ದವು. ದೊಡ್ಡ ಜನ ಸಮೂಹವೇ ಅಲ್ಲಿ ನೆರೆದಿದ್ದರೂ ರೈಲು ಅಥವಾ ಜನರಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಅಲ್ಲಿದ್ದವರೆಲ್ಲ ಬದುಕುಳಿದರು ಎನ್ನುವುದೇ ದೊಡ್ಡ ವಿಷಯ!’
ನೋಡಿ ‘ಆತ್ಮನಿರ್ಭರ್’ ರೈಲು
बिना इंजन के ट्रेन चलती देखी है कभी?
झारखंड के साहिबगंज में इंजन के बिना ही दौड़ती रही ट्रेन, बड़ा हादसा टला. बरहरवा रेलवे स्टेशन के साइडिंग से लुढ़ककर मेन ट्रैक पर आई बोगियाँ, भारी भीड़ के बीच रेलवे क्रॉसिंग पार की. गनीमत रही कि ट्रेन या गाड़ी से नहीं हुई टक्कर, बाल-बाल बचे… pic.twitter.com/vTV61A02po
— Utkarsh Singh (@UtkarshSingh_) September 3, 2023
ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಲ್ಲಿದ್ದ ಜನರೆಲ್ಲ ನಿಟ್ಟುಸಿರು ಬಿಟ್ಟಿದ್ದಾರೆ. ಆಕಸ್ಮಿಕವಾಗಿ ನಡೆದ ಈ ಘಟನೆ ಕುರಿತು ಬರ್ಹಾರ್ವಾ ಸ್ಥಳೀಯ ರೈಲ್ವೇ ಅಧಿಕಾರಿಗಳು ಸ್ಪಷ್ಟವಾದ ಮಾಹಿತಿಯನ್ನು ಕೊಡುವಲ್ಲಿ ಅಸಮರ್ಥರಾಗಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:01 pm, Mon, 4 September 23