Viral Video: ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡ ಆ ಕ್ಷಣಗಳು

Airport : ವಿಮಾನವನ್ನಿಳಿದು ಏರ್​ಪೋರ್ಟಿನಲ್ಲಿ ಆಕೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಪರಿಚಿತ ಧ್ವನಿಯೊಂದು ಸಾರ್ವಜನಿಕ ಪ್ರಕಟಣೆಯ ಮೈಕಿನಿಂದ ತೂರಿಬರುತ್ತದೆ. ಎದುರಿಗೆ ಆಕೆಯ ಕುಟುಂಬದವರೆಲ್ಲ ಸ್ವಾಗತಿಸಲು ನಿಂತಿದ್ದಾರೆ. ಆಕೆಗೋ ತನ್ನ ಲಗೇಜ್​ ಮಿಸ್ ಆದ ಕಳವಳ. ಅಷ್ಟರಲ್ಲಿಯೇ ಆಕೆಯ ಗೆಳೆಯ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಮುಂದೆ?

Viral Video: ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡ ಆ ಕ್ಷಣಗಳು
ರಿಯಾ ಶುಕ್ಲಾ ಮತ್ತು ಯಶ್​ರಾಜ್​ ಛಾಬ್ರಾ
Follow us
ಶ್ರೀದೇವಿ ಕಳಸದ
|

Updated on:Sep 05, 2023 | 10:56 AM

Love Proposal: ಪ್ರೀತಿ ಎನ್ನುವುದು ಬದುಕಿನ ಭರವಸೆ ಮತ್ತು ಶಕ್ತಿ. ಪ್ರತಿಯೊಬ್ಬರ ಬದುಕಿನಲ್ಲಿಯೂ ಅದಕ್ಕೆ ವಿಶೇಷ ಸ್ಥಾನ. ಜೊತೆಯಾಗಿ ಸಾಗುವ ಜೀವಗಳಿವೆ ಜೀವಜಲ. ಹಾಗಾಗಿ ಅದಕ್ಕೆ ಸಂಬಂಧಿಸಿದ ಸಂಭ್ರಮಾಚರಣೆಗಳೂ ನೆನಪಿನಲ್ಲಿ ಉಳಿಯುವಂತೆ ಇರಬೇಕು ಎಂದು ಪ್ರತೀ ಜೋಡಿಯೂ ಪರಸ್ಪರ ಆಶಿಸುತ್ತದೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ತಮ್ಮ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ ಯಶರಾಜ್​ ಛಾಬ್ರಾ ಎನ್ನುವವರು. ಇದಿಷ್ಟೇ ಆಗಿದ್ದರೆ ಈ ಜೋಡಿ ಸುದ್ದಿಯಾಗುತ್ತಿರಲಿಲ್ಲ. ಪ್ರೇಮನಿವೇದನೆ ಯಶಸ್ವಿಯಾಗಿ ನೆರವೇರಲು ವಿಮಾನ ನಿಲ್ದಾಣದ ಸಿಬ್ಬಂದಿಯ ವಿಶೇಷ ಸಹಾಯವನ್ನೂ ಯಶರಾಜ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Viral Video: ಎಂಜಿನ್​ ಇಲ್ಲ ಚಾಲಕನಿಲ್ಲ ನಿಗೂಢವಾಗಿ ಚಲಿಸಿದ ರೈಲು; ಆತ್ಮನಿರ್ಭರ್ ರೈಲು ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 28ರಂದು ಈ ವಿಡಿಯೋ ಅನ್ನು ಆಕ್ಲೆಂಡ್​ ಏರ್​​ಪೋರ್ಟ್​ ಇನ್​ಸ್ಟಾಗ್ರಾಂನ ಅಧಿಕೃತ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದೆ. ಇಡೀ ವಿಮಾನ ನಿಲ್ದಾಣವೇ ಈ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಆಕ್ಲೆಂಡ್​ನ ಬ್ಯಾಂಕಿಂಗ್ ಸ್ಪೆಷಲಿಸ್ಟ್​ ಯಶರಾಜ್​ ಆ. 18ರಂದು ಗೆಳತಿ ರಿಯಾ ಶುಕ್ಲಾಗೆ ಪ್ರೇಮ ನಿವೇದನೆ  ಮಾಡಿಕೊಂಡ ರೀತಿಯನ್ನು ಕಂಡು ನೆಟ್​​ಮಂದಿ ಅಚ್ಚರಿಯಾಗಿದೆ.

ಇಲ್ಲಿದೆ ಆ ಪ್ರೇಮನಿವೇದನೆಯ ವಿಡಿಯೋ

ಆಕ್ಲೆಂಡ್​ನಲ್ಲಿ ಪ್ರಾಜೆಕ್ಟ್​ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರಿಯಾ ಮೆಲ್ಬೋರ್ನ್​ನಿಂದ ಆಕ್ಲೆಂಡ್​ಗೆ ಮರಳುವ ಹೊತ್ತಿನಲ್ಲಿ ಯಶ್​ರಾಜ್ ಹೀಗೊಂದು ಅಚ್ಚರಿಯನ್ನು ಆಕೆಗೆ ನೀಡಿದ್ದಾರೆ. ‘ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವಿಚಾರಿಸಿದಾಗ ಪ್ರೊಟೊಕಾಲ್ ಇರುವುದಾಗಿ ಹೇಳಿದರು. ಕೊನೆಗೆ ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಮ್ಯೂನಿಕೇಷನ್​ ಮ್ಯಾನೇಜರ್​ ಲಾರಾ ಪ್ಲ್ಯಾಟ್ಸ್​​ ಅವರೊಂದಿಗೆ ಮಾತನಾಡಿ ದಯವಿಟ್ಟು ನನ್ನ ಕನಸಿಗೆ ಸಹಕರಿಸಿ ಎಂದು ಕೇಳಿಕೊಂಡೆ. ಹೂಗುಚ್ಛ ಕೇಕ್​ ಮತ್ತು ಕುಟುಂಬದವರ ಉಪಸ್ಥಿತಿಗಾಗಿ ಲಾರಾ ಸಹಾಯ ಮಾಡಿದ್ದಾರೆ. ವೃತ್ತಿಪರ ಛಾಯಾಗ್ರಾಹಕ ತಂಡ ಇದನ್ನು ಸೆರೆಹಿಡಿದಿದೆ. ಒಟ್ಟಾರೆಯಾಗಿ ಈ ಕ್ಷಣಗಳಿಗಾಗಿ ಒಂದು ತಿಂಗಳು ತಯಾರಿ ನಡೆಸಲಾಗಿತ್ತು’ ಎಂದು ಯಶರಾಜ್​ ತಿಳಿಸಿದ್ದಾರೆ.

ಇದನ್ನೂ ಓದಿ : Viral Video: ಹಾವುಗಳೊಂದಿಗೆ ಹಾಯಾಗಿ ನಿದ್ರಿಸುವ ಬಾಲಕಿ; ದಿಗ್ಭ್ರಾಂತರಾದ ನೆಟ್ಟಿಗರು

ರಿಯಾ ಆ. 18ರಂದು ಟ್ರಾಫಿಕ್​ನಿಂದಾಗಿ ವಿಮಾನವನ್ನು ತಪ್ಪಿಸಿಕೊಂಡರು. ಮತ್ತೆ ಬೇರೊಂದು ವಿಮಾನ ವ್ಯವಸ್ಥೆ ಮಾಡಲಾಯಿತು. ಆಕ್ಲೆಂಡ್​ಗೆ ಬಂದಿಳಿದಾಗ ಆಕೆಯ ಲಗೇಜ್​ ಮಿಸ್ ಆಗಿತ್ತು. ಆಕೆ ದೂರು ನೀಡಲು ಹೆಲ್ಪ್​ ಡೆಸ್ಕ್​​ಗೆ ಹೋಗುವಾಗ ಆಕೆಯ ಕುಟುಂಬ ಸದಸ್ಯರು ತಮ್ಮೆಡೆ ಬರುವಂತೆ ಒತ್ತಾಯಿಸುತ್ತಲೇ ಇದ್ದರು. ಅವರ ಪ್ರೀತಿಗೆ ಮಣಿದು ಆಕೆ ಅವರೆಡೆ ಬರುತ್ತಿದ್ದಾಗ ಯಶ್​ರಾಜ್​ ಮೊಣಕಾಲನ್ನೂರಿದ ಭಂಗಿಯಲ್ಲಿ ಅಚ್ಚರಿ ನೀಡಿದರು.

ಇದನ್ನೂ ಓದಿ : Viral Video: ದೆಹಲಿ; ಓವರ್ ಬ್ರಿಡ್ಜ್​ ಮೆಟ್ಟಿಲುಗಳ ಮೇಲೆ ಆಟೋ ಓಡಿಸಿದ ಧೀರಚಾಲಕ

ನಿಜಕ್ಕೂ ಆ ಕ್ಷಣಗಳು ಸಾಕಷ್ಟು ಅಚ್ಚರಿ ಮತ್ತು ಶೃಂಗಾರಮಯವಾಗಿ ಕೂಡಿದ್ದವು ಎಂದು ರಿಯಾ ಹೇಳಿದ್ಧಾರೆ. ಈ ಜೋಡಿ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮದುವೆಯಾಗಲು ತಯಾರಿ ನಡೆಸಲಿದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:48 am, Tue, 5 September 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ