Viral Video: ಮನೆಗೆ ಬಂದ 3 ಹೆಬ್ಬಾವುಗಳನ್ನು ರಕ್ಷಿಸಿದ ಗ್ಲೆನ್​ ಮ್ಯಾಕ್​ಗ್ರೆತ್; ಸಾಹಸ ಮೆಚ್ಚಿದ ನೆಟ್ಟಿಗರು

Australia: ಮಾಜಿ ಕ್ರಿಕೆಟ್ಟಿಗ ಗ್ಲೆನ್ ಮ್ಯಾಕ್​ಗ್ರೆತ್ ಮನೆಯೊಳಗೆ ಮೂರು ಕಾರ್ಪೆಟ್​ ಹೆಬ್ಬಾವುಗಳು ನುಸುಳಿವೆ. ಆದರೆ ಗ್ಲೆನ್ ಧೈರ್ಯದಿಂದ ಆ ಹಾವುಗಳನ್ನು ರಕ್ಷಿಸಿ ಪೊದೆಯೊಳಗೆ ಬಿಟ್ಟಿದ್ದಾರೆ. ಇವರ ಈ ಸಾಹಸವನ್ನು ವಿಡಿಯೋದಲ್ಲಿ ನೋಡಿದ ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಸುರಕ್ಷಿತವಾಗಿರುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ. ನೀವೂ ಈ ವಿಡಿಯೋ ನೋಡಿ. ಅಬ್ಬಬ್ಬಾ ಎನ್ನಿಸುವಂತಿದೆ!

Viral Video: ಮನೆಗೆ ಬಂದ 3 ಹೆಬ್ಬಾವುಗಳನ್ನು ರಕ್ಷಿಸಿದ ಗ್ಲೆನ್​ ಮ್ಯಾಕ್​ಗ್ರೆತ್; ಸಾಹಸ ಮೆಚ್ಚಿದ ನೆಟ್ಟಿಗರು
ಗ್ಲೆನ್ ಮ್ಯಾಕ್​ಗ್ರೆತ್ ಮನೆಯೊಳಗೆ ಬಂದ ಹೆಬ್ಬಾವನ್ನು ಹಿಡಿಯುತ್ತಿರುವ ದೃಶ್ಯ
Follow us
|

Updated on:Sep 08, 2023 | 10:49 AM

Carpet Pythons : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ಲೆನ್ ಮ್ಯಾಕ್​ಗ್ರೆತ್ (Glenn McGrath) ಮನೆಗೆ ಕಾರ್ಪೆಟ್​ ಹೆಬ್ಬಾವುಗಳು ನುಸುಳಿದ್ದವು. ಹೌದು ಹೆಬ್ಬಾವುಗಳೇ, ಹೆಬ್ಬಾವು ಅಲ್ಲ. ಅಂದರೆ ಒಂದಲ್ಲ ಎರಡಲ್ಲ ಒಟ್ಟು ಮೂರು ಹೆಬ್ಬಾವುಗಳು. ಮೂರೂ ಹೆಬ್ಬಾವುಗಳನ್ನು ಧೈರ್ಯದಿಂದ ರಕ್ಷಿಸಿ ಪೊದೆಯೊಳಗೆ ಬಿಟ್ಟು ತಮ್ಮ ತಮ್ಮ ಆವಾಸಸ್ಥಾನದೊಳಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ ಗ್ಲೆನ್. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅವರೇ ಈ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಗ್ಲೆನ್​ ಅವರ ಧೈರ್ಯಸಾಹಸವನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ಆಕೆ ಪ್ರಕಾಶಮಾನವಾಗಿ ಕಂಗೊಳಿಸಬೇಕು; ವಧುವಿಗೆ ಎಲ್​ಇಡಿ ಲೆಹೆಂಗಾ ವಿನ್ಯಾಸ ಮಾಡಿದ ವರ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿನ್ನೆ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ ಸುಮಾರು 1 ಲಕ್ಷ ಜನರು ನೋಡಿದ್ದಾರೆ. 4,300 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಗ್ಲೆನ್ ಅವರಿಗೆ ಈ ಕೌಶಲವೂ ಗೊತ್ತಿದೆ ಎನ್ನುವುದು ಇದೀಗ ತಿಳಿಯಿತು, ಅದ್ಭುತ ಎಂದಿದ್ದಾರೆ.

ಗ್ಲೆನ್ ಮ್ಯಾಕ್​ಗ್ರೆತ್​ ತಮ್ಮ ಮನೆಯಲ್ಲಿ ಹೆಬ್ಬಾವನ್ನು ರಕ್ಷಿಸುತ್ತಿರುವ ವಿಡಿಯೋ

ಗ್ಲೆನ್​ ಮಾಪ್​ ಬಳಸಿ ಹೆಬ್ಬಾವುಗಳನ್ನು ಹಿಡಿದಿದ್ದಾರೆ. ನಿಜಕ್ಕೂ ನೀವು ಭಾರೀ ಧೈತ್ಯಶಾಲಿ ಮೂರು ಮೂರು ಹಾವುಗಳನ್ನು ಹಿಡಿಯಬೇಕೆಂದರೆ ನಿಮಗೆ ಈ ಕೌಶಲ ಸಿದ್ಧಿಸಿರಬೇಕು ಎಂದಿದ್ದಾರೆ ಒಬ್ಬರು. ಆಗಾಗ ನಿಮ್ಮ ಮನೆಗಳಿಗೆ ಹೆಬ್ಬಾವುಗಳು ಬರುವುದು ಸಹಜವೆ? ನೀವು ಹೆಬ್ಬಾವುಗಳನ್ನು ಹಿಡಿಯುವಲ್ಲಿ ಪಳಗಿದ್ದೀರಿ ಎಂದಾಯಿತು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಲಂಡನ್; ಮಧ್ಯರಾತ್ರಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ 12 ಅಡಿಯ ದೈತ್ಯಹೆಬ್ಬಾವು

ಆದಷ್ಟು ನೀವು ನಿಮ್ಮ ಬಾಗಿಲುಗಳನ್ನು ಮುಚ್ಚಿಕೊಂಡು ಇರಬೇಕಾಗುತ್ತದೆಯೇನೋ. ಮೂರು ಮೂರು ಹಾವುಗಳು ಎಂದರೆ ಭಯಂಕರ! ಮಲಗಿದಾಗ ಬಂದರೆ ಏನು ಗತಿ? ಯಾವುದಕ್ಕೂ ಹುಷಾರಾಗಿರಿ ಎಂದಿದ್ದಾರೆ ಮತ್ತೊಬ್ಬರು. ಅಂತೂ ನಿಮ್ಮ ಸಾಹಸ ಮೆಚ್ಚುವಂಥದ್ದೇ ನಾನಾಗಿದ್ದರೆ ಖಂಡಿತ ಮನೆಯ ಬೀಗ ಹಾಕಿಕೊಂಡು ಹೊರಗೆ ನಿಂತುಬಿಡುತ್ತಿದ್ದೆ ಎಂದಿದ್ದಾರೆ ಮಗದೊಬ್ಬರು. ನೀವು ನಮಗೆ ಮಾದರಿ ಸರ್​ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:47 am, Fri, 8 September 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ